ಕೆಜಿಎಫ್ 2 ಸಿನಿಮಾಗೆ ಬರ್ತಾರಂತೆ ಈ ಬಾಲಿವುಡ್ ನಟಿ...?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಹು ದೊಡ್ಡ ಯಶಸ್ಸುನ್ನು ಕಂಡಿತ್ತು…ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ನಂತರ ಇದೀಗ ಕೆಜಿಎಫ್ ಚಾಪ್ಟರ್ 2 ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.. ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸ ಮಾಡ್ತಿರುವ ಚಿತ್ರತಂಡ ಕಲಾವಿದರ ಆಯ್ಕೆಯಲ್ಲಿ ಇನ್ನು ನಿಗೂಢತೆ ಕಾಯ್ದುಕೊಂಡಿದೆ. ಚಾಪ್ಟರ್ 2 ನಲ್ಲಿ ಬರಲಿರುವ ಎರಡ್ಮೂರು ಪ್ರಮುಖ ಪಾತ್ರಗಳಿಗೆ ತಕ್ಕ ಕಲಾವಿದರನ್ನ ಸೇರಿಸಿಕೊಳ್ಳಲು ತಲಾಶ್ ನಡೆಸುತ್ತಿದೆ.
ಸದ್ಯಕ್ಕೆ ಸಂಜಯ್ ದತ್, ರಮ್ಯಾಕೃಷ್ಣ ಹೆಸರು ಈ ಪಟ್ಟಿಯಲ್ಲಿ ಹರಿದಾಡುತ್ತಿದೆ. ಸದ್ಯಕ್ಕೆ ಮತ್ತೊಬ್ಬ ಖ್ಯಾತ ನಟಿ ಹೆಸರು ಕೇಳಿ ಬಂದಿದೆ. ಕೆಜಿಎಫ್ 2 ಕಥೆಯಲ್ಲಿ ಬರಲಿರುವ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಬರುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.. ಆದ್ರೆ, ಪಾತ್ರ ಯಾವುದು ಎಂಬುದು ಸದ್ಯಕ್ಕೆ ಕುತೂಹಲವಾಗಿ ಉಳಿದಿದೆ.
1999ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದರು. ಇದೇ ರವೀನಾ ಅವರ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾವಾಗಿದೆ. ಅದಾದ ಬಳಿಕ ಈಗ ಕೆಜಿಎಫ್ ಚಿತ್ರಕ್ಕಾಗಿ ಮತ್ತೆ ಸ್ಯಾಂಡಲ್ ವುಡ್ ಕಡೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಒಟ್ಟಾರೆ ಉಪೇಂದ್ರಾಳ ನಾಯಕಿ ಮತ್ತೆ ಸ್ಯಾಂಡಲ್ ವುಡ್ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ…
Comments