ದಾಳಿಯ ವಿವರ ಪಡೆಯೋದೆ ಮೋದಿ ಕೆಲಸ..!! ಹೀಗೆ ಹೇಳಿ ಕೆಂಗಣ್ಣಿಗೆ ಗುರಿಯಾದ ನಟಿ..!!!
ಪುಲ್ವಾಮ ದಾಳಿಯ ಹಿನ್ನಲೆಯಲ್ಲಿ 42 ಯೋಧರ ಪ್ರಾಣಕ್ಕೆ ಪ್ರತಿ ಉತ್ತರವನ್ನು ಭಾರತ ನೀಡಿದೆ.. ಈ ಹಿನ್ನಲೆಯಲ್ಲಿ ಬಾಲಾಕೋಟ್ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ಮಾಸ್ಟರ್ ಪ್ಲಾನ್ ಮೂಲಕ ದಾಳಿ ಮಾಡುವ ಹಿಂದಿನ ರಾತ್ರಿ ಪೂರ್ಣ ಎಚ್ಚರವಾಗಿದ್ದು ದಾಳಿಯ ಪಿನ್ ಟು ಪಿನ್ ಮಾಹಿತಿಯನ್ನು ಪಡೆದಿದ್ದರು. ಇದು ಮೋದಿ ಕೆಲಸವೇ ಎಂದು ಹೇಳಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಸುದ್ದಿಯಲ್ಲಿದ್ದಾರೆ..
ಪ್ರಧಾನಿಯಾದ ನರೇಂದ್ರ ಮೋದಿಯವರು ಮಧ್ಯರಾತ್ರಿ 3-30ರವರೆಗೂ ಪ್ರಧಾನಿ ಕಚೇರಿಯಲ್ಲೇ ಇದ್ದು, ದಾಳಿಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದರು. ದಾಳಿ ನಡೆಯುತ್ತಿದ್ದ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದ ಮೋದಿ, ದಾಳಿ ಯಶಸ್ವಿಯಾದ ನಂತರವಷ್ಟೇ ಪ್ರಧಾನಿ ಕಚೇರಿಯಿಂದ ತೆರಳಿದರು. 350 ಉಗ್ರರ ಸರ್ವನಾಶ ಮಾಡಿ ವಾಪಸಾದ ಬಳಿಕವೇ ಮೋದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೋದಿ ಕಾರ್ಯದ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ ಟ್ರೋಲ್ ಆಗಿದ್ದಾರೆ. ನಿದ್ದೆ ಬಿಟ್ಟು ಕೆಲಸ ಮಾಡೋದು ಅವರ ಕರ್ತವ್ಯ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಸ್ವರಾ ಬಾಸ್ಕರ್ ಗೆ ಟ್ರೋಲಿಗರು ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.. ಅಷ್ಟೆ ಅಲ್ಲದೆ ರಾತ್ರಿಪೂರಾ ಪಾರ್ಟಿ ಮಾಡಿ ಹ್ಯಾಂಗೋವರ್ ನಲ್ಲಿ ಇದ್ದೀಯಾ, ಬೇಗ ಎಚ್ಚರವಾಗು ಎಂದೂ ಕೆಲವರು ಸ್ವರಾ ಭಾಸ್ಕರ್ ಟ್ರೋಲ್ ಮಾಡಿದ್ದಾರೆ...
Comments