ಅವರು ಯಾರನ್ನಾದ್ರು ಇಷ್ಟಪಟ್ಟರೇ, ಅವರಿಗಾಗಿ ಪ್ರಾಣ ಬೇಕಾದ್ರು ಕೊಡ್ತಾರೆ ಅಂತಹ ಮನಸ್ಸು ಅವರದ್ದು : ಆ ಸ್ಟಾರ್ ಯಾರು ಗೊತ್ತಾ..?
ಅಂದಹಾಗೇ ಸಣ್ಣ ಆ್ಯಕ್ಟರ್ ಆಗಿ ಚಿತ್ರರಂಗಕ್ಕೆ ಬಂದ ಆ ಕಲಾವಿದ ಸದ್ಯ ಇಡೀ ಸ್ಯಾಂಡಲ್’ವುಡ್ಡನ್ನೇ ಆಳುತ್ತಿದ್ದಾರೆ. ಅವರನ್ನು ಕನ್ನಡದ ಲಕ್ಕಿ ಹ್ಯಾಂಡ್ ಅಂತಾನೇ ಕರೆಯಲಾಗುತ್ತದೆ. ಕೆಲವೊಮ್ಮೆ ಕೆಲ ಕಲಾವಿದರನ್ನು ಐರೆನ್ ಲೆಗ್ ಅಂತಾ ಹೇಳಿ ಚಿತ್ರರಂಗದವರೇ ಹಿಯಾಳಿಸಿದ್ದನ್ನು ನೋಡಿದ್ದೇವೆ. ಅಂಥವರು ಈಗ ಆ ಮಾತನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಿರ್ದೇಶಕ ಕೆ. ಮಂಜು ಅವರು ಆ ಸ್ಟಾರ್ ಆ್ಯಕ್ಟರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಹೃದಯ ವೈಶಾಲ್ಯತೆ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರು ಒಮ್ಮೆ ಯಾರನಾದ್ರು ಇಷ್ಟ ಪಡ್ತಾರೆ ಅಂದ್ಕೊಳ್ಳಿ ಅವರಿಗಾಗಿ ತಮ್ಮ ಪ್ರಾಣವನ್ನೇ ಕೊಡೋಕೆ ರೆಡಿಯಾಗಿರ್ತಾರೆ, ಅಂತಹ ಹೃದಯ ಅವರದ್ದು ಎಂದಿದ್ದು ಯಾವ ಸ್ಟಾರ್ ಗೆ ಗೊತ್ತಾ..?
ಕನ್ನಡ ಚಿತ್ರರಂಗದಲ್ಲಿ ಅವರದ್ದು ಲಕ್ಕಿ ಹ್ಯಾಂಡ್ . ಹೊಸ ಪ್ರತಿಭೆಗಳಿಗೆ ಬೆಂಬಲವಾಗಿ ನಿಲ್ಲೋದ್ರಲ್ಲಿ ಅವರು ಯಾವಾಗ್ಲೂ ಮುಂದಿರ್ತಾರೆ. ಅದಷ್ಟೇ ಅಲ್ಲಾ, ಅವರ ಬಗ್ಗೆ ಮಾತನಾಡೋಕೆ ತುಂಬಾ ಅಭಿಮಾನವಿದೆ. ಅದೆಷ್ಟು ದೊಡ್ಡದಾಗಿ ಬೆಳೆದ್ರೂ ಅವರ ಸಿಂಪ್ಲಿಸಿಟಿ ಮುಂದೆ ನಾವು ಹಿಂದೆ ಎನ್ನುತ್ತಾರೆ ನಿರ್ದೇಶಕ. ಅಂದಹಾಗೇ ಆ ಸ್ಟಾರ್ ಕಲಾವಿದ ಬೇರೆ ಯಾರು ಅಲ್ಲಾ…ಡಿ ಬಾಸ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರು, ಇತ್ತೀಚೆಗೆ ಹೊಸಬರ ಸಿನಿಮಾ ಪಡ್ಡೆ ಹುಲಿ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಟೀಂ'ಗೆ ವಿಶ್ ಮಾಡಿ ಹೋದ್ರು. ವೇದಿಕೆ ಮೇಲೆ ದರ್ಶನ್ ಅವರ ಹೃದಯ ವೈಶಾಲ್ಯತೆ ಮತ್ತೊಮ್ಮೆ ಪರಿಚವಾಯ್ತು ಎನ್ನುತ್ತಾರೆ ನಿರ್ದೇಶಕ ಮಂಜು.
ದರ್ಶನ್ ಅವರ ಅಭಿಮಾನಿಗಳ ಸಿಂಪ್ಲಿಸಿಟಿ ಬಗ್ಗೆ ನಾವು ನೋಡಿದ್ದೇವೆ, ಮತ್ತೊಮ್ಮೆ ಅದನ್ನು ಪಡ್ಡೆಹುಲಿ ಸಿನಿಮಾ ಟೀಸರ್ ಲಾಂಚ್ ಟೈಮ್ ನಲ್ಲಿ ನೋಡಿದ್ವಿ ಎಂದರು. ದಚ್ಚು, ಯಾರೇ ಅವರನ್ನು ಭೇಟಿ ಮಾಡೋಕೆ ಹೋದ್ರು, ಊಟ ಮಾಡಿಸದೇ ಕಳುಹಿಸಲ್ಲ ಎಂದು ನಿರ್ದೇಶಕರು ಹೇಳಿದ್ರು. ಅವರು ಒಮ್ಮೆ ಮಾತು ಕೊಟ್ಟರೇ ತಪ್ಪಲ್ಲ.ಪ್ರೀತಿ ಕೊಟ್ಟರೆ ಪ್ರೀತಿಧಾರೆಯನ್ನು ಹರಿಸುವುದು ದಚ್ಚು ಸ್ವಭಾವ. ಪಡ್ಡೆಹುಲಿ ಸಿನಿಮಾದಲ್ಲಿ ಹೀರೋ ಶ್ರೇಯಸ್ ಆಗಿ ನಟಿಸಿದ್ದರೇ ನಿಶ್ವಿಕಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
Comments