ಅಪ್ಪು ಹೀರೋ ಆದಮೇಲೆ ಹೇಳಿದ ಫಸ್ಟ್ ಪವರ್’ಫುಲ್ ಡೈಲಾಗ್ ಇದು : ಇಂದಿಗೂ ಅಭಿಮಾನಿಗಳಿಗೆ ಅಚ್ಚುಮೆಚ್ಚು..?

ಅಂದಹಾಗೇ ಇತ್ತೀಚೆಗೆ ರಿಲೀಸ್ ಆದ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಅವರ ಅಭಿನಯದ ಸಿನಿಮಾ 'ನಟ ಸಾರ್ವಭೌಮ'ಗೆ ವೀಕ್ಷಕರಿಂದ ಪಾಸಿಟೀವ್ ರೆಸ್ಪಾನ್ಸ್ ಸಿಕ್ಕಿತು. ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್’ಗೆ ಬಾಕ್ಸ್ ಆಫೀಸ್ ಸುಲ್ತಾನರೇ ಫಿದಾ ಆಗಿದ್ದಾರೆ. ಇತ್ತೀಚಿಗೆ ಪುನೀತ್ ರಾಜ್ ಕುಮಾರ್ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಿನಿಮಾ ಎಕ್ಸ್'ಪೀರಿಯನ್ಸ್ ಬಗ್ಗೆ ಬಿಚ್ಚಿಟ್ಟರು. ಎಲ್ಲರಿಗೂ ತಮಗಾದ ಫಸ್ಟ್ ಅನುಭವ, ಕ್ಯಾಮೆರಾ ಎದುರಿಸಿದ ಕ್ಷಣ,ಮೊದಲ ಶಾಟ್, ಮೊದಲ ಡೈಲಾಗ್ ಅವರ ಲೈಫ್ 'ನಲ್ಲಿ ಒಮ್ಮೆ ಬರಲು ಸಾಧ್ಯ.
ಅಪ್ಪು ಬಾಲ ನಟನಾಗಿ ಸ್ಯಾಂಡಲ್’ವುಡ್ ಗೆ ಎಂಟ್ರಿ ಕೊಟ್ಟಿದ್ದರೂ ಹೀರೋ ಆದ ಮೇಲೂ ಒಂದಷ್ಟು ಫಸ್ಟ್,ಬೆಸ್ಟ್ ಎಕ್ಸ್ಪೀರಿಯನ್ಸ್ ನನ್ನ ಲೈಫ್ನಲ್ಲೂ ಆಯ್ತು. ತಾವು ನಾಯಕನಟನಾಗಿ ಆ್ಯಕ್ಟ್ ಮಾಡಿದ ಮೊದಲ ಸಿನಿಮಾ ಅಪ್ಪು ಬಗ್ಗೆ ಮಾತನಾಡಿದ್ದಾರೆ.ಸಂದರ್ಶಕರು ಕೇಳಿದ ಪ್ರಶ್ನೆಗೆ ಪುನೀತ್ ನಾನು ಹೀರೋ ಆದ ನಂತರ ನನ್ನ ಫಸ್ಟ್ ಡೈಲಾಗ್ ಇನ್ನು ನನ್ನ ನೆನಪಿನಲ್ಲಿದೆ. ಆ ಡೈಲಾಗ್ ಅಂದ್ರೆ ನನಗೂ ಇಷ್ಟವೇ, ಫ್ಯಾನ್ಸ್ ಕೂಡ ಆ ಡೈಲಾಗ್ ಅಂದ್ರೆ ಇಷ್ಟಪಡ್ತಾರೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೇ ಪುನೀತ್ ಬಾಯಲ್ಲಿ ಹೇಳಿದ ಫಸ್ಟ್ ಡೈಲಾಗ್ ಅದು, ಸಿನಿಮಾದ ಮುಹೂರ್ತದಿನ, ಮೊದಲ ಶಾಟ್ ನಲ್ಲಿ ಒಂದು ಡೈಲಾಗ್ ಹೇಳಿದ್ರಂತೆ. ಅದು ‘’ನೀನು ಹಿಡಿದಿರೋದು ಅಪ್ಪು ಅವರ ಕಾಲರ್ ಅಲ್ಲ ಕಣೋ…ಹೈವೊಲ್ಟೇಜ್ ಪವರು’’ ಎಂಬ ಡೈಲಾಗ್. ಹೀರೋ ಆದಮೇಲೆ ಮೊದಲ ಹೇಳಿದ ಡೈಲಾಗ್ ಇದು, ಅಂದಿನ ನನೆಪು ಇಂದಿಗೂ ಹಾಗೇ ಇದೆ ಎಂದು ಎನ್ನುತ್ತಾರೆ ನಟ ಸಾರ್ವಭೌಮ ಖ್ಯಾತಿಯ ಅಪ್ಪು.
Comments