ದುರಂತ ನಾಯಕಿ ಶ್ರೀದೇವಿ ನೆಚ್ಚಿನ ಸೀರೆ ಹರಾಜು : ಭಾರೀ ಮೊತ್ತಕ್ಕೆ ಸೇಲ್..!!!

ಬಾಲಿವುಡ್’ನ ಎವರ್ ಗ್ರೀನ್ ಹೀರೋಯಿನ್ ಶ್ರೀದೇವಿ ಸಾವು ಇಡೀ ಚಿತ್ರರಂಗಕ್ಕೆ ನುಂಗಲಾರದ ತುತ್ತಾಯ್ತು. ಶ್ರೀದೇವಿ ಸದ್ಯ ಬರೀ ನೆನಪಷ್ಟೇ. ಅವರ ದುರಂತ ಸಾವಿನ ಬಗ್ಗೆ ಇಂದಿಗೂ ಅನುಮಾನಗಳು ಇವೆ. ಅವರು ಅಗಲಿ ವರ್ಷ ಕಳೆದ್ರೂ ಅವರ ನನೆಪು ಮಾತ್ರ ಅಮರ. ಹಿಟ್ ಸಿನಿಮಾಗಳನ್ನು ಕೊಟ್ಟು ಖ್ಯಾತಿ ಇವರದ್ದು.ಅವರ ಸಿನಿಮಾಗಳನ್ನು ನೋಡಿ ಇಂದಿನ ಜನರೇಷನ್'ಗೂ ಫೇವರೀಟ್ ಸ್ಟಾರ್ ಹೀರೋಯಿನ್ ಆಗಿದ್ದಾರೆ ನಟಿ ಶ್ರೀದೇವಿ. ಸ್ಟೈಲ್ ಗೆ ಅವರ ಸೌಂದರ್ಯಕ್ಕೆ ಯಾವ ನಾಯಕಿಯರು ಸೆಡ್ಡು ಹೊಡೆಯಲು ಸಾಧ್ಯವಿಲ್ಲ ಎಂಬುದು ಬಾಲಿವುಡ್ ತಾರೆಯರ ಅಭಿಪ್ರಾಯ. ಬಾಲಿವುಡ್ ಬಾನಂಗಳದಲ್ಲಿ ಅನಭಿಷಕ್ತೆ ರಾಣಿಯಾಗಿ ಶ್ರೀದೇವಿ ದುಬೈನಲ್ಲಿ ಅನುಮಾನಸ್ಪದವಾಗಿ ಸಾವನಪ್ಪಿದ್ದರು.
ಆ ಸಾವು ಈಗಲೂ ಅವರ ಅಭಿಮಾನಿಗಳನ್ನ ಕಾಡ್ತಿದೆ. ಮೊದಲ ವರ್ಷದ ಪುಣ್ಯ ಸ್ಮರಣಾರ್ಥವಾಗಿ ಶ್ರೀದೇವಿ ಅಚ್ಚುಮೆಚ್ಚಿನ ಸೀರೆಯನ್ನು ಹರಾಜಿಗೆ ಇಡಲಾಗಿತ್ತು. ಈ ಸೀರೆಯ ಮಾರಾಟದಿಂದ ಬಂದ ಹಣವನ್ನ ಒಳ್ಳೆ ಕೆಲಸಕ್ಕೆ ಬಳಸುವುದಾಗಿ ಶ್ರೀದೇವಿ ಕುಟುಂಬ ತಿಳಿಸಿವೆ. ನಟಿ ಶ್ರೀದೇವಿ ಧರಿಸುತ್ತಿದ್ದ ಸೀರೆಗಳು ಭಾರೀ ಮೊತ್ತದವು. ಅದರಲ್ಲೂ ತುಂಬಾ ಇಷ್ಟಪಡುತ್ತಿದ್ದ ಶ್ರೀದೇವಿಯ ನೆಚ್ಚಿನ ಸೀರೆ ಹ್ಯಾಂಡಲೂಮ್ ಕೋಟಾ ಎಂಬ ಸೀರೆಯನ್ನ ಚೆನ್ನೈ ಮೂಲದ 'ಪರಿಸರ' ಆನ್ ಲೈನ್ ಕಂಪನಿಯೊಂದು ಹರಾಜಿಗೆ ಇಟ್ಟಿತ್ತು. ಆ ಸೀರೆಯ ಮೂಲ ಬೆಲೆ 40 ಸಾವಿರವಿದ್ದ ಈ ಸೀರೆ ಅಂತಿಮವಾಗಿ 1.30 ಲಕ್ಷಕ್ಕೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಶ್ರೀ ದೇವಿ ಸಾವಿನ ನಂತರ ಅವರ ಇಬ್ಬರು ಹೆಣ್ಣುಮಕ್ಕಳು ಕೂಡ ಅಪ್ಪ ಬೋನಿಕಪೂರ್ ಜೊತೆ ವಾಸವಿದ್ದಾರೆ. ಮೊದಲ ಮಗಳು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾಗಿದೆ ಆಕೆಯ ಮೊದಲ ಸಿನಿಮಾ ಕೂಡ ರಿಲೀಸ್ ಆಗಿದೆ. ಸಂಬಂಧಿಕರ ಮದುವೆಗೆಂದು ಪತಿಯೊಟ್ಟಿಗೆ ಹೋದ ಶ್ರೀದೇವಿ ಶವವಾಗಿ ವಾಪಸ್ ಆದ್ರು. ಬಾತ್ ಟಬ್'ನಲ್ಲಿ ಪ್ರಾಣ ಬಿಟ್ಟ ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತವೇ ಬೆಳೆಯಿತು. ಇಂದಿಗೂ ಅವರ ಸಾವಿನ ತನಿಖೆ ನಡೆಯುತ್ತಿದೆ.
Comments