ವರ್ಷವಿಡೀ ಊಟ ಹಾಕೋರ್ಗೆ ವರ್ಷಕ್ಕೊಂದ್ಸಾರಿ ಊಟ ಹಾಕಕ್ಕಾಗಲ್ವಾ..? ದರ್ಶನ್ ಹೀಗೆ ಹೇಳಿದ್ದು ಯಾರಿಗೆ..?

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಬಹುನಿರೀಕ್ಷಿತ ಸಿನಿಮಾದ ಯಜಮಾನ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ… ವರ್ಷಗಳಿಂದ ದರ್ಶನ್ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿತ್ತು..ಯಾಕಂದ್ರೆ ದರ್ಶನ್ ಅವರ ಯಾವುದೇ ಸಿನಿಮಾವು ಕೂಡ ಬಿಡುಗಡೆಯಾಗಿರಲಿಲ್ಲ… ಯಜಮಾನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ..ಯಜಮಾನ ರಿಲೀಸ್ ಗೆ ರೆಡಿಯಾಗಿರುವ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ. ಈ ಮಾತನ್ನುಕೇಳಿ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ..
ಮೊನ್ನೆ ಮೊನ್ನೆಯಷ್ಟೇ ಹುಟ್ಟು ಹಬ್ಬದ ಪ್ರಯುಕ್ತ ದರ್ಶನ್ ತಮ್ಮ ಮನೆಗೆ ಶುಭ ಹಾರೈಸಲು ಬಂದ ಅಭಿಮಾನಿಗಳಿಗೆ ಊಟ ಹಾಕಿ ಕಳುಹಿಸಿದ್ದನ್ನು ನೋಡಿದ್ವಿ... ಆ ಬಗ್ಗೆ ದರ್ಶನ್ ಗೆ ಸಂದರ್ಶನವೊಂದರಲ್ಲಿ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಡಿಬಾಸ್ ಏನಂತ ಹೇಳುದ್ರೂ ಗೊತ್ತಾ..? ಆ ಪ್ರಶ್ನೆಗೆ ಉತ್ತರಿಸಿದ ದರ್ಶನ್ 'ವರ್ಷದ 365 ದಿನವೂ ಕೂಡ ನನಗೆ ಊಟ ಹಾಕುವವರಿಗೆ ವರ್ಷಕ್ಕೊಂದು ಬಾರಿ ನಾನು ಊಟ ಹಾಕೋಕೆ ಆಗಲ್ವ..? ಅವರಿಂದಲೇ ನಾನು. ನಾನೇನು ಗಳಿಸಿದರೂ ಕೂಡ ಅದು ಅಭಿಮಾನಿಗಳು ಕೊಟ್ಟ ಭಿಕ್ಷೆ' ಎಂದಿದ್ದಾರೆ. ದರ್ಶನ್ ಹುಟ್ಟು ಹಬ್ಬದಂದು ಕೇಕ್ ಬದಲು ಧವಸ ಧಾನ್ಯ ತೆಗೆದುಕೊಂಡು ಬನ್ನಿ..ಅವುಗಳನ್ನು ಆಶ್ರಮ, ಮಠಗಳಿಗೆ ದಾನ ಮಾಡೋಣ ಎಂದು ತಿಳಿಸಿದರು.. ದರ್ಶನ್ ಕರೆಗೆ ಸ್ಪಂದಿಸಿದ ಅಭಿಮಾನಿಗಳು ಅವರು ಹೇಳಿದಂತೆ ನಡೆದುಕೊಂಡರು..ಇದರಿಂದ ದರ್ಶನ್ ತುಂಬಾ ಖುಷಿ ಪಟ್ಟರು.. ದರ್ಶನ್ ಅಭಿಮಾನಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ.. ಅಭಿಮಾನಿಗಳ ಅಭಿಮಾನಕ್ಕೆ ದರ್ಶನ್ ಮೆಚ್ಚುಗೆಯ ಮಾತಗಳನ್ನಾಡಿದ್ಧಾರೆ.
Comments