ಸಿನಿಮೀಯ ಡೈಲಾಗ್'ನಲ್ಲೇ ಪಾಕ್'ಗೆ ಪಂಚ್ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ...!!!

26 Feb 2019 1:49 PM | Entertainment
841 Report

ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧೃವಸರ್ಜಾ ಎಂಗೇಜ್-ಮೆಂಟ್ ಮುಗಿಸಿಕೊಂಡು ಬಹು ನಿರೀಕ್ಷಿತ ಸಿನಿಮಾ ‘ಪೊಗರು’ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೆಡ್ಯೂಲ್ ನಡುವೆಯೇ ಧೃವ ಟ್ವಿಟ್ಟರ್ ನಲ್ಲಿಯೂ ಬ್ಯುಸಿಯಾಗಿದ್ದಾರೆ. ಪಾಕ್ ವಿರುದ್ಧ ಆ್ಯಕ್ಷನ್ ಪ್ರಿನ್ಸ್ ಹೊಡೆದಿರೋ ಡೈಲಾಗ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಹದ್ದೂರ್ ನಾಯಕನ  ಖಡಕ್ ಡೈಲಾಗ್ ಗೆ ಫ್ಯಾನ್ಸ್- ಫಾಲೋಯರ್ಸ್ ಧನಿಗೂಡಿಸಿದ್ದಾರೆ. ಅಂದಹಾಗೇ ಈಗಾಗಲೇ ಅವರ ಸಿನಿಮಾ ಪೊಗರು ಪ್ರಚಾರದಲ್ಲಿದೆ. ಪೊಗರು ಟೀಸರ್‘ಗೆ, ಅದರಲ್ಲಿನ ಧೃವಾ ಡೈಲಾಗ್ ಗೆ ಅಭಿಮಾನಿಗಳು ಚಪ್ಪಾಳೆ ತಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಇಂದು  ಭಾರತೀಯ ಸೇನೆಯ ಸೈನಿಕರು ಪಾಕ್ ಉಗ್ರರನ್ನು ಉಡೀಸ್ ಮಾಡಿದ್ದಾರೆ.

ಈ ವೇಳೆ ಧ್ರುವಸರ್ಜಾ ಟ್ವಿಟ್ಟರ್ ನಲ್ಲಿ ಹೊಡೆದಿರೋ ಡೈಲಾಗ್’ಗೆ ಅಭಿಮಾನಿಗಳು ಸ್ಟಾರ್ ನಟನಿಗೆ ಜೈಕಾರ ಹಾಕಿದ್ದಾರೆ.ಭಾರತೀಯರ ಮೈಯಲ್ಲಿ ಎಷ್ಟು ಪೊಗರೈತೆ ಅಂತ ಚೆಕ್ ಮಾಡೋಕೆ ಬರಬೇಡ. ಮಕ್ಕಳಾ ಬ್ಲಾಸ್ಟ್ ಆಗೋಗ್ತೀರಾ ಅಂತ ಪಾಪಿ ಉಗ್ರರಿಗೆ ಧ್ರುವ ಸರ್ಜಾ ಎಚ್ಚರಿಕೆಯನ್ನು ನೀಡಿದ್ದಾರೆ.  ಅಂದಹಾಗೇ ಧೃವಾ ಹೇಳಿ-ಕೇಳಿ ಡೈಲಾಗ್ ಸ್ಟಾರ್, ಅವರ ಡೈಲಾಗ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಪೊಗರು ಸಿನಿಮಾದಲ್ಲಿನ ಡೈಲಾಗ್ ಸಿಂಕ್ ಮಾಡಿ ಟ್ವಿಟ್ಟರ್ ನಲ್ಲಿ ಪಾಕ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಪುಲ್ವಾಮಾಗೆ ಪ್ರತೀಕಾರವಾಗಿ ಭಾರತೀಯರು ನಡೆಸಿರುವ ದಾಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್  ನಟರು ಸಾಮಾಜಿಕ  ಜಾಲತಾಣಗಳ ಮೂಲಕ  ಭಾರತೀಯ ಯೋಧರ ಕಾರ್ಯವನ್ನು  ಶ್ಲಾಘಿಸಿಸಿದ್ದಾರೆ. ವಾಯು ಸೇನೆ ಕಾರ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ ಹಲವು ಸ್ಟಾರ್ ನಟರು.

Edited By

Kavya shree

Reported By

Kavya shree

Comments