ಆ ನಿರ್ಮಾಪಕಿಯಿಂದ ಕಾರ್ ಖರೀದಿ ಮಾಡಿದ್ರಂತೆ ಡಿ-ಬಾಸ್..!!
ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ.. ಸಕ್ಸಸ್ ರೇಟ್ ಕಡಿಮೆಯಾದ್ರೂ ಕೊಟ್ಟಿರುವ ಕಾಸಿಗಂತೂ ಮೋಸವಿಲ್ಲ ಎಂಬುದು ಸಿನಿರಸಿಕರ ಮಾತಾಗಿದೆ.. ಅಷ್ಟೆ ಅಲ್ಲದೆ ಹೊಸ ನಟ ನಟಿಯರ ಸಿನಿಮಾಗಳಿಗೆ ಸ್ಟಾರ್ ಆ್ಯಕ್ಟರ್’ಗಳಿಂದ ಮೂಹೂರ್ತ ಮಾಡಿಸುವುದು, ಆಡಿಯೋ ಲಾಂಚ್ ಮಾಡಿಸುವುದು ಕಾಮನ್ ಆಗಿಬಿಟ್ಟಿದೆ… ಅದೇ ರೀತಿ ಪ್ರೀಮಿಯರ್ ಪದ್ಮಿನಿ ಆಡಿಯೋ ಲಾಂಚ್ ಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂದಿದ್ದರು.. ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಬಂದಿದ್ದಂತಹ ಎಲ್ಲರೂ ಕೂಡ ತಮ್ಮ ತಮ್ಮ ಹಳೆಯ ನೆನಪಿನ ಬುತ್ತಿಯನ್ನು ನೆನಪಿಸಿಕೊಂಡರು...
ಅಷ್ಟೆ ಅಲ್ಲದೆ ಆಡಿಯೋ ಲಾಂಚ್ ಗೆ ಚಾಲೆಂಜ್ ದರ್ಶನ್ ಆಗಮನಕ್ಕೆ ಭಾವುಕರಾದರ ನಿರ್ಮಾಪಕಿ ಶೃತಿ ನಾಯ್ಡು ಹಳೆಯ ನೆನಪನ್ನು ಆ ಸಮಯದಲ್ಲಿ ಮೆಲುಕು ಹಾಕಿದರು… ಆ ಸಂದರ್ಭದಲ್ಲಿ ಪರಿಸರ ಕಾಳಜಿಯನ್ನು ನೆನಪಿಸಿಕೊಂಡು ನವರಸ ನಾಯಕ ಜಗ್ಗೇಶ್ ಚಾಲೆಂಜಿಂಗ್ ಸ್ಟಾರ್ ಗೆ ದರ್ಶನ್’ಗೆ ಸಂಪಿಗೆ ಸಸಿಯನ್ನು ಕೊಟ್ಟು ಅಭಿಮಾನಿಗಳಿಗೆ ಸಂದೇಶವನ್ನು ಕೊಡಿಸಿದರು. ಪ್ರೀಮಿಯರ್ ಪದ್ಮಿನಿ ಆಡಿಯೋ ಬಿಡುಗಡೆ ಮಾಡಿದ ದರ್ಶನ್ ಕನ್ನಡದಲ್ಲಿ ನಿರ್ಮಾಪಕಿಯರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ ಎಂದು ಸಂತಸವನ್ನು ವ್ಯಕ್ತ ಪಡಿಸಿದರು.. . ಕಾರ್ ಕ್ರೇಜ್ ಇರೊ ಶೃತಿ ನಾಯ್ಡು, ಪ್ರಿಮಿಯರ್ ಪದ್ಮಿನಿ ಸಿನಿಮಾವನ್ನು ಕಾರ್ ಹೆಸರಿಟ್ಟು ಕೊಂಡೇ ಮಾಡಿದ್ದಾರೆ. ಅದೇ ರೀತಿಯಲ್ಲಿ ಶೃತಿಯವರ ಮನೆಯಲ್ಲಿ ಸಾಕಷ್ಟು ಕಾರ್ ಗಳಿವೆ ನಾನೂ ಅವರಿಂದಲೂ ಒಂದ್ ಕಾರ್ ಖರೀದಿಸಿದ್ದೇನೆ ಎಂದು ದರ್ಶನ್ ತಿಳಿಸಿದರು...
Comments