ಮಾಜಿ ಬಾಯ್‌ಫ್ರೆಂಡ್‌ಗಾಗಿ ನಟಿಮಣಿಯರ ನಡುವೆ ಕೋಲ್ಡ್ ವಾರ್..?

ಬಾಲಿವುಡ್ ಮಂದಿ ಇತ್ತಿಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ,… ನಟಿ ಮಣಿಯರು ಒಬ್ಬರೊನ್ನೊಬ್ಬರು ಕಾಲೆಳೆದುಕೊಳ್ಳುವುದು ಕಾಮನ್ ಆಗಿಬಿಟ್ಟಿದೆ… ಕಾಫಿ ವಿತ್ ಕರಣ್ ನಲ್ಲಿ ಕರೀನಾ ಕಪೂರ್, ಪ್ರಿಯಾಂಕ ಚೋಪ್ರಾ ಒಬ್ಬರಿಗೊಬ್ಬರು ಕಾಲೆಳೆದುಕೊಂಡಿದ್ದಾರೆ. ಕಾಫಿ ವಿತ್ ಕರಣ್ ನಲ್ಲಿ ಪ್ರಿಯಾಂಕ ಹಾಗೂ ಕರೀನಾ ಭಾಗವಹಿಸಿದ್ದರು. ಈ ಸಮಯದಲ್ಲಿ ಕರೀನಾ, ಪ್ರಿಯಾಂಕ ಮಾತಿನ ಮಧ್ಯೆ ಕಾಲೆಳೆದುಕೊಂಡಿದ್ದಾರೆ..
ಪ್ರಿಯಾಂಕಾಗೆ ಈ ಉಚ್ಚಾರಣೆ ಮಾಡುವ ಶೈಲಿ ಎಲ್ಲಿಂದ ಬಂತು ಎಂದು ಕರೀನಾ ಕೇಳಿದರು. ಕೂಡಲೇ ಪ್ರಿಯಾಂಕ ' ಕರೀನಾ ಪತಿ ಸೈಫ್ ಅಲಿ ಖಾನ್ ಎಲ್ಲಿ ಕಲಿತರೋ ಅಲ್ಲಿಂದಲೇ ನಾನು ಕಲಿತಿದ್ದು' ಎಂದು ತಿಳಿಸಿದರು… ಇಡೀ ಕಾರ್ಯಕ್ರಮದಲ್ಲಿ ಕರೀನಾ ಹಾಗೂ ಪ್ರಿಯಾಂಕ ಒಬ್ಬರಿಗೊಬ್ಬರು ಕಾಲೆಳೆದುಕೊಂಡರು. ಇಬ್ಬರ ನಡುವಿನ ಕೋಲ್ಡ್ ವಾರ್ ಗೆ ಇಬ್ಬರ ಮಾಜಿ ಬಾಯ್ ಫ್ರೆಂಡ್ ಶಾಹೀದ್ ಕಪೂರ್ ಕಾರಣವಂತೆ…! ಕೊನೆಗೆ ಪಿಗ್ಗಿ ಸ್ಪಷ್ಟೀಕರಣ ಕೊಡುತ್ತಾ, "ಯಾರನ್ನೂ ಹಿಯಾಳಿಸುವ ಉದ್ದೇಶ ಇರಲಿಲ್ಲ. ನನ್ನ ಪ್ರೆಂಡ್ ಕರೀನಾ ಸುಮ್ಮನೆ ಕಾಲೆಳೆದರು" ಎಂದು ಹೇಳಿದರು. ಪಿಗ್ಗಿ ಮಾತಿಗೆ ಕರೀನಾ ಹೌದೌದು... ಖಂಡಿತಾ ಎಂದು ಸುಮ್ಮನಾದರು.. ಒಟ್ಟಿನಲ್ಲಿ ಇಬ್ಬರು ಕೂಡ ತಮ್ಮ ತಮ್ಮ ಮಾಜಿ ಪ್ರಿಯಕರನನ್ನು ಈ ಕಾರ್ಯಕ್ರಮದಲ್ಲಿ ನೆನೆಪಿಸಿಕೊಂಡರು..
Comments