ಕನ್ನಡ ಕಿರುತೆರೆಗೂ ಬಂದೇಬಿಟ್ಟ ರಾಕಿಬಾಯ್..!! ಯಾವಾಗ ಗೊತ್ತಾ..?
ಕಳೆದ ವರ್ಷ ಸ್ಯಾಂಡಲ್ ವುಡ್ ನಲ್ಲಿ ದೂಳೆಬ್ಬಿಸಿದ ಸಿನಿಮಾಗಳಲ್ಲಿ ಕೆಜಿಎಫ್ ಕೂಡ ಒಂದು.. ಸ್ಯಾಂಡಲ್ ವುಡ್ ಗೆ ಬ್ರೇಕ್ ಕೊಟ್ಟ ಸಿನಿಮಾ ಇದು.. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದ ಈ ಚಿತ್ರ ಐದು ಭಾಷೆಯಲ್ಲಿ ತೆರೆಕಂಡು ಇಡೀ ದೇಶ ನಮ್ಮ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿತ್ತು. ಸಿನಿಮಾ ಬಿಡುಗಡೆಯಾಗಿ ಆಗಿ ಬಹುತೇಕ ಎರಡು ತಿಂಗಳು ಆಗಿದೆ. ಈಗಾಗಲೇ ಅಮೇಜಾನ್ ಪ್ರೈಮ್ ನಲ್ಲಿ ಕೆಜಿಎಫ್ ಸಿನಿಮಾ ಪ್ರಸಾರವಾಗುತ್ತಿದೆ. ಕನ್ನಡದ ಟಿವಿ ಪ್ರೇಕ್ಷಕರಿಗೆ ಇನ್ನೂ ಕೆಜಿಎಫ್ ದರ್ಶನವಾಗಲಿಲ್ಲ ಎಂಬ ಬೇಸರ ಇತ್ತು.. ಆದರೆ ಇದೀಗ ಆ ಸಮಯ ಹತ್ತಿರ ಬಂದಿದೆ.
ಇದೀಗ, ಕನ್ನಡ ಕಿರುತೆರೆಯಲ್ಲೂ ಕೆಜಿಎಫ್ ಟೆಲಿಕಾಸ್ಟ್ ಆಗ್ತಿದೆ. ಅತಿ ದೊಡ್ಡ ಬೆಲೆಗೆ ಟಿವಿ ಹಕ್ಕು ಮಾರಾಟವಾಗಿದ್ದ ಕೆಜಿಎಫ್ ಈಗ ಮನೆ ಮನೆಗೂ ಬರ್ತಿದೆ, ಕೆಜಿಎಫ್ ಚಿತ್ರ ಕಲರ್ಸ್ ಕನ್ನಡ ಪಾಲಾಗಿರುವುದು ಖಚಿತವಾಗಿದ್ದು, ರಿಲೀಸ್ ಪ್ರೋಮೋ ಟೆಲಿಕಾಸ್ಟ್ ಆಗ್ತಿದೆ. ಕೆಜಿಎಫ್ ಸಿನಿಮಾವನ್ನ ಥಿಯೇಟರ್’ನಲ್ಲಿ ನೋಡಿದ್ದಾರೆ, ಅಮೇಜಾನ್ ಪ್ರೈಮ್ ನಲ್ಲಿ ನೋಡಿದ್ದಾರೆ. ಇನ್ನು ಕೆಲವರು ಮೊಬೈಲ್’ನಲ್ಲಿ ಕೂಡ ನೋಡಿದ್ದಾರೆ. ಈಗ ಟಿವಿಯಲ್ಲಿ ಬರ್ತಿದೆ ಅಂದಿದ್ದಕ್ಕೆ ಅಲ್ಲಿಯೂ ನೋಡ್ತೀವಿ ಎಂಬ ಕ್ರೇಜ್ ಇನ್ನು ಇದೆ. ಹಾಗಾಗಿ, ಕೆಜಿಎಫ್ ಪ್ರಸಾರದ ದಿನ ಟಿಆರ್ ಪಿ ಹೆಚ್ಚಬಹುದಾಗಿದೆ.. ಶಿವರಾತ್ರಿಗೋ ಅಥವಾ ಯುಗಾದಿಗೋ ಬರಬಹುದು…
Comments