ಪವರ್ ಸ್ಟಾರ್'ನನ್ನು ನೋಡಲು ಬಂದ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್…!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಯುವರತ್ನ ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿದ್ದಾರೆ. ಆದರೆ ಶೂಟಿಂಗ್ ಸ್ಥಳದಲ್ಲಿ ಲಾಠಿ ಚಾರ್ಜ್ ಆಗಿರುವ ಘಟನೆ ನಡೆದಿದೆ. ಅಂದಹಾಗೇ ಚಿತ್ರೀಕರಣ ನಡೆಯುತ್ತಿದ್ದುದ್ದು ಧಾರವಾಡ ವಿವಿಯಲ್ಲಿ. ಆದರೆ ಪುನೀತ್ ಅವರು ಸಿನಿಮಾ ಶೂಟಿಂಗ್’ಗೆ ಬರುತ್ತಿದ್ದಾರೆಂಬ ಸುದ್ದಿ ಹಬ್ಬುತ್ತಿದ್ದಂತೇ ಪವರ್ ಸ್ಟಾರ್ ಅಭಿಮಾನಿಗಳು ದಂಡೋಪಾದಿಯಾಗಿ ವಿವಿ ಹತ್ತಿರ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು.
ಇಂದು ವಿವಿಯ ಸೆನೆಟ್ ಹಾಲ್ ನಲ್ಲಿ ಪುನೀತ್ ಅವರ ಅಭಿನಯದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತಿತ್ತು.ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸಾವಿರಾರು ಜನರು ಸಿನಿಮಾದ ಶೂಟಿಂಗ್ ಅನ್ನು ನೋಡಲು ವಿವಿಯೊಳಗೆ ಆಗಮಿಸಿದ್ದರು. ಈ ವೇಳೆ ಏಕಾಏಕಿ ಜನರು ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ನುಗಿದ್ದಾರೆ.ಈ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಅನುವು ಮಾಡಿಕೊಡಲು ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಆದರೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ನಡೆದು ಜನರ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದರು. ಸದ್ಯ ಘಟನ ಸ್ಥಳದಲ್ಲಿ ಪರಿಸ್ಥಿತಿ ತಿಳಿಯಾಗಿದ್ದು ನಟ ಪುನೀತ್ ಸದ್ಯ ವಿಶ್ರಾಂತಿಗಾಗಿ ತಮ್ಮ ಕ್ಯಾರವ್ಯಾನ್ ನಲ್ಲಿ ಇದ್ದಾರೆ ಎನ್ನಲಾಗಿದೆ.
Comments