ನನ್ನಂಥ 500 ಜನರನ್ನ ಕೊಂಡುಕೊಳ್ಳೋ ತಾಕತ್ತು ಈ ನಟಿಗಿದೆ ಎಂದು ಡಿ-ಬಾಸ್ ಹೇಳಿದ್ಯಾರಿಗೆ…!!?
ಮಾರ್ಚ್ 1 ಕ್ಕೆ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವಾದ ಯಜಮಾನ ಸಿನಿಮಾ ಬಿಡುಗಡೆಯಾಗಲಿದೆ… ಯಜಮಾನ ಸಿನಿಮಾದ ಬಗ್ಗೆ ದರ್ಶನ್ ಟೀಮ್ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿದ್ದಾರೆ..ಟೀಂ ಬಗ್ಗೆ ಮಾತನಾಡುತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ತಾನ್ಯಾಹೋಪ್ ಬಗ್ಗೆ ಮಾತನಾಡಿದ್ದು, ಆಕೆಯಿಂದ ಕೆಲ ಹಿರೋಯಿನ್‌ಗಳು ಕಲಿಯೋದು ತುಂಬಾ ಇದೆ ಎಂದು ಹೇಳಿಕೊಂಡಿದ್ದಾರೆ..
ತಾನ್ಯಾ ಹೋಪ್ ಬ್ಯಾಗ್ರೌಂಡ್ ಬಗ್ಗೆ ಮಾತನಾಡೋದಾದ್ರೆ ನಾವು 10 ಅಡಿ ದೂರಾ ನಿಲ್ಲಬೇಕು. ನನ್ನಂಥ 500 ಜನರನ್ನ ಕೊಂಡುಕೊಳ್ಳೋ ತಾಕತ್ತು ಅವರಿಗಿದೆ. ಆದ್ರೆ ಸೆಟ್‌ನಲ್ಲಿ ಕಲಾವಿದೆಯ ರೀತಿ ಇದ್ದು, ಆಕೆಯ ಬಾಡಿಗಾರ್ಡ್ಸ್, ಡ್ರೈವರ್ ಒಬ್ಬರೂ ಸೆಟ್‌ಗೆ ಬರ್ತಿರಲಿಲ್ಲ. ಅಷ್ಟು ಅಚ್ಚುಕಟ್ಟಾದ ಕ್ಲೀನ್ ಮತ್ತು ನೀಟ್ ಗರ್ಲ್ ತಾನ್ಯಾ ಹೋಪ್ ಎಂದು ದರ್ಶನ್ ಮೆಚ್ಚುಗೆಯ ಮಾತುಗಳನ್ನ ಹೇಳಿದ್ದಾರೆ.. ಇನ್ನು ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ ದರ್ಶನ್, ಆಕೆಗೆ ಕಲಿಯೋ ಹಂಬಲವಿದೆ ಕೆಲಸದ ಮೇಲೆ ಕಾಳಜಿ ಇದೆ ಎಂದಿದ್ದಾರೆ..
Comments