ಜಪಾನ್ ಗೆ ಹಾರಿದ ಅನುಷ್ಕಾ –ಪ್ರಭಾಸ್ ಜೋಡಿ : ಕಾರಣ ಏನ್ ಗೊತ್ತಾ…?!

ಟಾಲಿವುಡ್ ಕ್ವೀನ್ ಅನುಷ್ಕಾ ಮತ್ತು ಪ್ರಭಾಸ್ ನಡುವೆ ಪ್ರೀತಿ ಇದೆ ಎಂಬ ಸುದ್ದಿ ಇಡೀ ಟಾಲಿವುಡ್ ನ್ನೇ ಗಿರಕಿ ಹೊಡೀತು. ಆದರೆ ಈ ಬಗ್ಗೆ ಡಾಲರ್ಲಿಂಗ್ ಅನುಷ್ಕಾ ತಾಯಿ ಪ್ರಬಾಸ್ ಥರಾ ಹುಡುಗ ಬೇಕು ಅಷ್ಟೆ, ಆದರೆ ಪ್ರಭಾಸ್ ನನ್ನು ನನ್ನ ಮಗಳು ಮದುವೆಯಾಗಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೆ ಗಾಸಿಪ್ ಗಳಿಗೆ ಸೊಪ್ಪು ಹಾಕದ ಈ ತಾರಾ ಜೋಡಿ ನಾವು ಬೆಸ್ಟ್ ಫ್ರೆಂಡ್ಸ್ ಅಂತಾನೇ ಹೇಳಿಕೊಳ್ಳುತ್ತಿದ್ದಾರೆ.ಪ್ರಭಾಸ್ ಅಟೆಂಡ್ ಮಾಡುವ ಕಾರ್ಯಕ್ರಮಗಳಲೆಲ್ಲಾ ಅನುಷ್ಕಾ ಹಾಜರಾಗಿರುತ್ತಾರೆ, ಅನುಷ್ಕಾ ಬರುವ ಎಲ್ಲಾ ಸಮಾರಂಭದಲ್ಲೂ ಪ್ರಭಾಸ್ ಇನ್ವಿಟೇಷನ್ ಇರುತ್ತದೆ. ಒಟ್ಟಾರೆ ಅನುಷ್ಕಾ ಮತ್ತು ಪ್ರಬಾಸ್ ನಡುವೆ ಏನೋ ಪ್ರೀತಿ ಇದೆ ಎನ್ನುವ ಅಭಿಪ್ರಾಯ ಟಾಲಿವುಡ್ ಮಂದಿಯದು. ಆದರೆ ಅವರ ಅನುಮಾನಕ್ಕೆ ಪುಷ್ಠಿ ನೀಡುವಂತೆ, ಈ ಜೋಡಿ ಆಗಾಗ್ಗ ಸಂಧಿಸುವುದು. ಸದ್ಯ ಈ ಇಬ್ಬರು ಸ್ಟಾರ್ ಜೋಡಿಗಳು ಸದ್ಯ ಜಪಾನ್ ಗೆ ಪ್ರಯಾಣ ಬೆಳೆಸಿದ್ದಾರೆ.
ಜಪಾನ್‍ನಲ್ಲಿ ಪ್ರಭಾಸ್ ಅಭಿಮಾನಿಗಳು ಇದ್ದಾರೆ. ಹೀಗಾಗಿ ಅಲ್ಲಿ ಕೂಡ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿವೆ. ನಟ ಪ್ರಭಾಸ್ ಈ ಹಿಂದೆ ಅಭಿನಯಿಸಿದ್ದ ‘ಮಿರ್ಚಿ’ ಹಾಗೂ ‘ಡಾರ್ಲಿಂಗ್’ ಸಿನಿಮಾಗಳು ಮುಂದಿನ ತಿಂಗಳ ಮಾರ್ಚ್ 2 ರಂದು ಜಪಾನ್ ನಲ್ಲಿ ಪ್ರದರ್ಶನಗೊಳ್ಳಲಿದೆ.‘ಮಿರ್ಚಿ’ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಮತ್ತು ‘ಡಾರ್ಲಿಂಗ್’ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದರು. ಹೀಗಾಗಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಜಪಾನ್ ಗೆ ಹೋಗಲಿದ್ದಾರೆ. ಈ ಬಗ್ಗೆ ತಿಳಿದ ಅವರ ಅಭಿಮಾನಿಗಳು ಮತ್ತೆ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಬೆಳ್ಳಿ ಪರದೆ ಮೇಲೆ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ, ಆದರೆ ರಿಯಲ್ ಲೈಫ್ ನಲ್ಲಿ ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಅಂತಾನೇ ಹೇಳುವ ಅನುಷ್ಕಾ, ಅಭಿಮಾನಿಗಳಿಗೆ ಈ ಹಿಂದೆಯೇ ಖಡಕ್ ಆಗಿಯೇ ಹೇಳಿದ್ದರು. ಪ್ರಭಾಸ್ ಕೂಡ ನಾನು ಅನುಷ್ಕಾ ಆತ್ಮೀಯ ಸ್ನೇಹಿತರು, ಸ್ನೇಹ ಹೊರತಾಗಿ ಮತ್ತೇನು ಇಲ್ಲವೆಂದಿದ್ರು. ಆದರೆ ಅಭಿಮಾನಿಗಳು ಮಾತ್ರ ಈ ಜೋಡಿ ಒಟ್ಟಾಗಿ ಲೈಫ್ ಲೀಡ್ ಮಾಡೋದನ್ನ ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ ಇಬ್ಬರು ಬ್ಯಾಚುಲರ್ಸ್ ಲೈಫ್ ನ ಎಂಜಾಯ್ ಮಾಡ್ತಿದ್ದಾರೆ.
Comments