ಪಾರ್ಕಿಂಗ್ ಲಾಟ್’ನಲ್ಲಿ ಮುತ್ತಿಟ್ಟು ಸುದ್ದಿಯಾದ 'ಸ್ಟಾರ್' ಜೋಡಿ..!!
ಬಾಲಿವುಡ್ ಸ್ಟಾರ್ಸ್ ಒಂದಲ್ಲ ಒಂದು ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ.. ಸೋಷಿಯಲ್ ಮೀಡಿಯಾದಲ್ಲಿ ಅವರ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ… ಇತ್ತಿಚಿಗಷ್ಟೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಹಾಡುಗಾರ ನಿಕ್ ಜೋನಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ್ಮೇಲೂ ನವ ಜೋಡಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ ವ್ಯಕ್ತಪಡಿಸುವುದ್ರಲ್ಲೂ ಜೋಡಿ ಮುಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ, ನಿಕ್ ಇನ್ನೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.ಪ್ರಿಯಾಂಕ ಹಾಗೂ ನಿಕ್ ಪಾರ್ಕಿಂಗ್ ಪ್ರದೇಶದಲ್ಲಿ ತುಟಿಗೆ ತುಟಿ ಚುಂಬಿಸಿದ್ದಾರೆ.. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪ್ರಿಯಾಂಕ-ನಿಕ್ ಕಾರ್ ಬಳಿ ಇರುವ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.. ಕೆಲ ದಿನಗಳ ಹಿಂದೆ ಪ್ರಿಯಾಂಕ ಗರ್ಭಿಣಿ ಎಂಬ ಸುದ್ದಿ ಹರಡಿತ್ತು. ಆದ್ರೆ ಇದು ಸುಳ್ಳು ಎಂದು ಪ್ರಿಯಾಂಕ ತಾಯಿ ಹೇಳಿದ್ದರು. ಪ್ರಿಯಾಂಕ ಬಾಲಿವುಡ್ ನ ದಿ ಸ್ಕೈ ಈಸ್ ಪಿಂಕ್ ಚಿತ್ರದಲ್ಲಿ ನಟಿಸಿದ್ದು, ಅಕ್ಟೋಬರ್ 11 ರಂದು ಚಿತ್ರ ತೆರೆಗೆ ಬರಲಿದೆ. ಸ್ಟಾರ್ಸ್ ಏನೇ ಮಾಡಿದರೂ ಸುದ್ದಿನೇ ಎನ್ನುವುದಕ್ಕೆ ಇದೇ ಸಾಕ್ಷಿ…
Comments