‘ಅಮರ್’ನನ್ನು ಜೊತೆಯಾಗಿಯೇ ಕರ್ಕೊಂಡು ಬರ್ತಿದ್ದಾರೆ ‘ಯಜಮಾನ’..!!
ಚಂದನವನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾಗೆ ದಿನಗಣನೆ ಪ್ರಾರಂಭವಾಗಿದೆ. ಅಭಿಮಾನಿಗಳು ದರ್ಶನ್ ಅವರನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ..ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಅದ್ಧೂರಿ ಸಿನಿಮಾ ‘ಯಜಮಾನ’ ಇದೇ ಮಾರ್ಚ್ 1ಕ್ಕೆ ವಿಶ್ವದಾದ್ಯಂತ ಸುಮಾರು 800ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಭರ್ಜರಿಯಾಗಿ ತೆರೆಕಾಣಲಿದೆ. ಸುಮಾರು ಎರಡೂವರೆ ವರ್ಷಗಳ ನಂತರ ದರ್ಶನ್ ಚಿತ್ರ ಬರುತ್ತಾ ಇರುವುದರಿಂದ ಬಿಗ್ ಸ್ಕ್ರೀನ್ನಲ್ಲಿ ಡಿ ಬಾಸ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಈಗಾಗಲೇ ಸಾಂಗ್, ಹಾಗೂ ಟ್ರೈಲರ್ನಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ‘ಯಜಮಾನ’ ತಮ್ಮ ಜೊತೆಯಲ್ಲಿಯೇ ‘ಅಮರ್’ ಅನ್ನು ಕರೆ ತರುತ್ತಿದ್ದಾರೆ..
ಈಗಾಗಲೇ ಅಂಬಿ ಪುತ್ರನ ಅಮರ್ ಚಿತ್ರದ ಟೀಸರ್ಪ್ರೇಮಿಗಳ ದಿನದಂದು ರಿಲೀಸ್ ಆಗಿ ಅಭಿಮಾನಿಗಳಿಗೆ ಗಿಫ್ಟ್ ನೀಡಿತ್ತು. ಟೀಸರ್ ನೋಡಿ ಸ್ಯಾಂಡಲ್ವುಡ್ ಮಂದಿ ಅಭಿ ಗೆಟಪ್ ಗೆ ಫುಲ್ ಫಿದಾ ಆಗಿದ್ರು. ಅಲ್ಲದೇ ರೆಬೆಲ್ ಕುಟುಂಬಕ್ಕೆ ದೊಡ್ಡ ಮಗನಂತಿರುವ ದರ್ಶನ್, ಸಹೋದರನ ಚೊಚ್ಚಲ ಚಿತ್ರಕ್ಕೆ ಸಾಥ್ ಕೂಡ ನೀಡಿ ದಚ್ಚು ಅಭಿಮಾನಿಗಳಲ್ಲಿ ಕ್ಯೂರಾಸಿಟಿಯನ್ನು ಹೆಚ್ಚು ಮಾಡಿದೆ.. ಇದೀಗ ದಚ್ಚು ಫ್ಯಾನ್ಸ್ ಹಾಗೂ ಅಂಬಿ ಫ್ಯಾನ್ಸ್‌ಗೆ ಡಬಲ್ ಗಿಫ್ಟ್ ಕಾದಿದೆ. ಯಜಮಾನ ಚಿತ್ರ ಇದೇ ಮಾರ್ಚ್ 1ರಂದು ರಿಲೀಸ್ ಆಗ್ತಾಯಿದ್ದು ಆ ವೇಳೆಯೇ ಅಭಿಷೇಕ್ ಅವರ ಅಮರ್ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಲಿದೆ. ಟೀಸರ್ ನೋಡಿದ ಜನ ಟ್ರೈಲರ್ ನೋಡಲು ಸಿಕ್ಕಾಪಟ್ಟೆ ಕ್ಯೂರಾಸಿಟಿಯಾಗಿದೆ.. ಅಣ್ಣ ತಮ್ಮ ಒಟ್ಟಾಗಿ ಬರ್ತಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.
Comments