ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟ ದೀಪಿಕಾ ಪಡುಕೋಣೆ..!!

23 Feb 2019 2:41 PM | Entertainment
397 Report

ಬಾಲಿವುಡ್ನ ಪದ್ಮಾವತಿ, ಗುಳಿಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆ ವಿಶೇಷ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಂತೆ.. ಡಿಪ್ಪಿ ಈಗಷ್ಟೆ ಸಪ್ತಪದಿ ತುಳಿದು ಮ್ಯಾರಿಡ್ ಲೈಫ್ ನ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಡಿಪ್ಪಿ ತಮ್ಮ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಪತ್ರಿಕೆಯೊಂದರ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಇಬ್ಬರು ಘಟಾನುಘಟಿ ನಾಯಕರ ಮುಂದೆ ಸ್ವಚ್ಛ ಭಾರತ ಮಂತ್ರಿಯಾಗಬೇಕೆಂಬ ಆಸೆಯನ್ನು ಹೇಳಿಕೊಂಡಿದ್ದಾರೆ..

ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವೀಸ್, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಉಪಸ್ಥಿತರಿದ್ದರು. 2019ರ ವರ್ಷದ ಮಹಾರಾಷ್ಟ್ರೀಯನ್ ಪ್ರಶಸ್ತಿಯನ್ನು ಡಿಪ್ಪಿ ಸ್ವೀಕರಿಸಿದರು. ಕರ್ನಾಟಕ ನನ್ನ ತವರೂರು ಆದರೆ, ಮಹಾರಾಷ್ಟ್ರ ನನ್ನ ಕರ್ಮಭೂಮಿ. ನನ್ನ ಕನಸುಗಳನ್ನು ನನಸು ಮಾಡಿದ್ದು ಮುಂಬೈ ಮಹಾನಗರಿ. ಅಂದಿನಿಂದ ಮುಂಬೈನಲ್ಲಿಯೇ ವಾಸವಾಗಿದ್ದೇನೆ. ಇಂದು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೀರೋದಕ್ಕೆ ಖುಷಿಯಾಗ್ತಿದೆ ಎಂದು ಸಂತಸವನ್ನು ಹಂಚಿಕೊಂಡರು. ಸಣ್ಣ ಹುಡುಗಿಯಿದ್ದಾಗ ನನ್ನ ಗೆಳತಿಯರು ತಮ್ಮ ಮನೆಗೆ ನನ್ನನ್ನು ಕರೆಯುತ್ತಿದ್ದರು.

ನಾನು ಅಸ್ತವ್ಯಸ್ಥವಾಗಿದ್ದ ಅವರ ಕೋಣೆಯನ್ನು ಸ್ವಚ್ಛ ಮಾಡಿ ಬರುತ್ತಿದ್ದೆ. ಒಂದು ದಿನ ಅವರೆಲ್ಲ ತಮ್ಮ ರೂಮ್ ಕ್ಲೀನ್ ಮಾಡಲು ನನ್ನನ್ನು ಕರೆಯುತ್ತಿದ್ದರು ಎಂಬುವುದು ತಿಳಿಯಿತು. ಆದರೂ ಮನೆಯೆಲ್ಲ ಕ್ಲೀನ್ ಮಾಡಿದಾಗ ನನಗೆ ಖುಷಿ ಸಿಗುತ್ತದೆ. ಶೂಟಿಂಗ್ ನಿಂದ ಬಳಿಕ ಮನೆಯನ್ನೆಲ್ಲ ಮೊದಲು ಸ್ವಚ್ಛ ಮಾಡುತ್ತೇನೆ. ರಾಜಕೀಯದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಒಂದು ವೇಳೆ ಮಂತ್ರಿಯಾದ್ರೆ ಸ್ವಚ್ಛ ಭಾರತ ಯೋಜನೆಗೆ ಮಿನಿಸ್ಟರ್ ಆಗಬೇಕೆಂಬ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ..

Edited By

Manjula M

Reported By

Manjula M

Comments