ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥದಲ್ಲಿ ಕಾಣಿಸಿಕೊಂಡ್ರು ಸ್ಪೆಷಲ್ ಗೆಸ್ಟ್…?!!!

ಕನ್ನಡದ ರವಿಮಾಮನ ಮಗಳ ಎಂಗೇಜ್ಮೆಂಟ್ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಚಿತ್ರಂಗದ ಅನೇಕ ಗಣ್ಯರು ನಿಶ್ಚತಾರ್ಥ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರವಿಚಂದ್ರನ್ ಗೆ ಮೂವರು ಮಕ್ಕಳು. ಇಬ್ಬರು ಗಂಡು ಮಕ್ಕಳು ಈಗಾಗಲೇ ಸ್ಯಾಂಡಲ್'ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ, ಇನ್ನು ಏಕೈಕ ಪುತ್ರಿ ಗೀತಾಂಜಲಿಗೆ ಸದ್ಯ ಮದುವೆ ಮಾಡುತ್ತಿದ್ದಾರೆ ಪ್ರೇಮಲೋಕದ ಕಿಂದರಿಜೋಗಿ. ಮಗಳ ಎಂಗೇಜ್ಮೆಂಟ್ ನಲ್ಲಿ ಕ್ರೇಜಿಸ್ಟಾರ್ ರೇಷ್ಮೆ ಶರ್ಟು –ಪಂಚೆ ಧರಿಸಿ ಓಡಾಡಿಕೊಂಡು ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು.
ಗೀತಾಂಜಲಿ ಬೆಂಗಳೂರು ಮೂಲದ ಉದ್ಯಮಿ ಅಜಯ್ ಜೊತೆ ರಿಂಗ್ ಬದಲಾಯಿಸಿಕೊಂಡಿದ್ದು, ಶಾಸ್ತ್ರಬದ್ಧವಾಗಿ ಎಂಗೇಜ್‌ಮೆಂಟ್ ನೆರವೇರಿದೆ. ಅಂದಹಾಗೇ ಈ ಮೊದಲೇ ಕ್ರೇಜಿಸ್ಟಾರ್ ಸಂದರ್ಶನವೊಂದರಲ್ಲಿ ಮಗಳ ನಿಶ್ಚಿತಾರ್ಥಕ್ಕೆ ಹೆಚ್ಚಾಗಿ ಯಾರನ್ನು ಆಹ್ವಾನಿಸಲ್ಲ, ಕೇವಲ ಆತ್ಮೀಯರಿಗೆ ಮತ್ತು ಸಂಬಂಧಿಕರಿಗೆ ಮಾತ್ರ ಇನ್ವೈಟ್ ಮಾಡುತ್ತೇವೆ ಎಂದಿದ್ರು. ಅದರಂತೇ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಭಾಗಿಯಾಗಿದ್ದು ಕೂಡ ಕಂಡು ಬಂದು. ಜೊತೆಗೆ ರವಿಚಂದ್ರನ್ ತಮ್ಮ ಸ್ಪೆಷಲ್ ಗೆಸ್ಟ್'ನ್ನು ಕೂಡ ಕರೆದಿದ್ದರು. ಒಂದು ಕಾಲದಲ್ಲಿ ರವಿಚಂದ್ರನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ನಟಿ, ರಣಧೀರನಿಗೆ ಇವರೇ ಪರ್ಫೆಕ್ಟ್ ಜೋಡಿ ಎಂದು ಹಾಡಿ ಹೊಗಳಿದ ಅಭಿಮಾನಿಗಳು, ಫ್ಯಾನ್ಸ್ ಗೆ ಹಿಡಿಸಿದ ಹೀರೋಯಿನ್ ಖುಷ್ಬೂ ಕೂಡ ನಿಶ್ಚಿತಾರ್ಥ ಸಮಾರಂಭಕ್ಕೆ ಬಂದಿದ್ದೂ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು.ಇನ್ನು ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು, ಸಂಬಂಧಿಕರು ಭಾಗಿಯಾಗಿದ್ದರು.
Comments