ಬಂಧನದ ಭೀತಿಯಲ್ಲಿ ಕನ್ನಡದ ಬಿಗ್’ಬಾಸ್ ಸ್ಪರ್ಧಿ…!!!

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಹೆಸರು ಒಂದಿಲ್ಲೊಂದು ವಿವಾದದಲ್ಲಿ ತಳುಕು ಹಾಕಿಕೊಂಡಿದೆ. ಬಿಗ್ ಬಾಸ್ ಸೀಸನ-4 ಸ್ಪರ್ಧಿಗಳ ನಡುವೆ ನಡೆದ ಜಗಳ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತ್ತು. ಸದ್ಯ ಆರೋಪಿ ಬಿಗ್ ಬಾಸ್ ಸ್ಪರ್ಧಿ ಮೇಲೆ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ. ಈಗಷ್ಟೇ ಮುಕ್ತಾಯವಾಗಿರುವ ಬಿಗ್’ಬಾಸ್ ಸೀಸನ್-6 ಲ್ಲಿ ಕವಿತಾ ಮತ್ತು ಆ್ಯಂಡಿ ನಡುವೆ ನಡೆದ ಜಗಳ ಇನ್ನು ಆರಿಲ್ಲ. ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡು ಸುದ್ದಿಯಾಗಿದ್ದರು. ಸದ್ಯ ಹಳೆ ಸೀಸನ್'ನ ಬಿಗ್ ಬಾಸ್ ಸ್ಪರ್ಧಿ ಭುವನ್ ಗೆ ಬಂಧನದ ಭೀತಿ ಎದುರಾಗಿದೆ.
ಸ್ಪರ್ಧಿ ಭುವನ್ ಇದ್ದ ಸೀಸನ್ ನಲ್ಲೇ ಪ್ರಥಮ್ ಕೂಡ ಇದ್ದರು. ಎರಡು ವರ್ಷದ ಹಿಂದೆ ಭುವನ್ ತನ್ನ ಸಹ ಸ್ಪರ್ಧಿ ಪ್ರಥಮ್ ಅವರ ಜೊತೆ ಜಗಳವಾಡಿದ್ದರು. ಈ ವೇಳೆ ಪ್ರಥಮ್, ಭುವನ್ ಮನೆಗೆ ಹೋಗಿ ಅವರಿಗೆ ಕಚ್ಚಿದ್ದರು.ಘಟನೆ ನಡೆದ ಬಳಿಕ ಇಬ್ಬರು ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿ ಒಬ್ಬರ ಮೇಲೊಬ್ಬರು ಪ್ರಕರಣ ದಾಖಲಿಸಿಕೊಂಡರು. ಇದೇ ವೇಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 15 ಬಾರಿ ಕೋರ್ಟ್ ಸಮನ್ಸ್ ನೀಡಿದರೂ ಭುವನ್ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸೆಷೆನ್ಸ್ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ. ಸದ್ಯ ಬಂಧನದ ಭೀತಿಯಲ್ಲಿರುವ ಭುವನ್ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಭೂವನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ಮಂಡ್ಯದ ಯೋಧ ಗುರು ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಹಣ ಸಹಾಯ ನೀಡಿದ್ದು ಸುದ್ದಿಯಾಗಿತ್ತು. ಇನ್ನು ಪ್ರಥಮ್ ಕೂಡ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ನಟ ಭಯಂಕರ ಸಿನಿಮಾದಲ್ಲಿ ಸಿಕ್ಕಾಪಟ್ಟೆ ತೊಡಗಿಸಿಕೊಂಡಿದ್ದಾರೆ.
Comments