ನಮ್ಮನ್ನಷ್ಟೇ ಟಾರ್ಗೆಟ್ ಮಾಡಿ ನನ್ನ ಮಕ್ಕಳ ತಂಟೆಗೆ ಬರಬೇಡಿ : ರೊಚ್ಚಿಗೆದ್ದ ನಟ..…!!!

ಸಾಮಾಜಿಕ ಜಾಲತಾಣಗಳ ಹೊರತಾಗಿ ಇಂದು ಏನು ಇಲ್ಲ, ಯಾರು ಇಲ್ಲ. ಕೆಲವರನ್ನು ಹೀರೋಗಳಾಗಿ ಮಾಡಿದ್ರೆ ಮತ್ತಷ್ಟು ಮಂದಿಯನ್ನು ಝೀರೋ ಮಾಡಿಬಿಡುತ್ತವೆ. ಅದಕ್ಕೆ ಕಾರಣ ಟ್ರೋಲರ್ಸ್. ಅಂದಹಾಗೇ ಈ ಟ್ರೋಲರ್ಗಳ ಹಾವಳಿಯಿಂದಾಗಿ ಖ್ಯಾತ ನಟರೊಬ್ಬರು ಸಿಡಿದೆದ್ದಿದ್ದಾರೆ. ಸೆಲೆಬ್ಟಿಗಳು ಟ್ರೋಲ್ ಗೆ ಒಳಗಾಗೋದಲ್ದೇ ಅವರ ಫ್ಯಾಮಿಲಿ ಮೆಂಬರ್ಸ್ ಮಕ್ಕಳಿಗೂ ಟ್ರೋಲರ್ ಗಳ ಹಾವಳಿ ತಪ್ಪಿದ್ದಲ್ಲ.
ನಾನು ನನ್ನ ಹೆಂಡ್ತಿ ಇಬ್ಬರು ಆ್ಯಕ್ಟರ್ಸ, ನಮ್ಮನ್ನಷ್ಟೇ ಟ್ರೋಲ್ ಮಾಡಿ ನಮ್ಮ ಮಕ್ಕಳ ಮೇಲೆ ಯಾಕೆ ನಿಮ್ಮ ಕಣ್ಣು ಎಂದು ಖ್ಯಾತ ನಟ ಅಜಯ್ ದೇವಗನ್ ಟ್ರೋಲರ್ಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ.ತಮ್ಮ ಮಕ್ಕಳನ್ನು ಟ್ರೋಲ್ ಮಾಡುತ್ತಿದ್ದ ಟ್ರೋಲರ್ಸ್ ವಿರುದ್ಧ ಬಾಲಿವುಡ್ ನಟ ಅಜಯ್ ದೇವಗನ್ ಸಿಟ್ಟಾಗಿದ್ದಾರೆ.ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 15 ವರ್ಷದ ಮಗಳು ನೈಸಾ ಹಾಗೂ 8 ವರ್ಷದ ಮಗ ಯುಗ್‍ನನ್ನು ಟ್ರೋಲ್ ಮಾಡುತ್ತಿದ್ದಕ್ಕೆ ಅಜಯ್ ದೇವಗನ್ ಗರಂ ಆಗಿದ್ದಾರೆ. ಅಂದಹಾಗೇ ಮಗಳು ನೈಸಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುತ್ತಾರೆ.
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ನೈಸಾ ಧರಿಸಿದ್ದ ಉಡುಪಿನಿನ ಟ್ರೋಲರ್ಸ್ ಬಾಯಿಗೆ ಆಹಾರವಾಗಿದ್ದರು. ಈ ಬಗ್ಗೆ ದೆಹಲಿಯಲ್ಲಿ ‘ಟೋಟಲ್ ಧಮಾಲ್’ ಚಿತ್ರದ ಪ್ರಮೋಶನ್ ವೇಳೆ ಮಾಧ್ಯಮದೊಂದಿಗೆ ಅಜಯ್ ದೇವಗನ್ ಮಾತನಾಡಿ. “ನೀವು ಬೇಕಾದರೆ ನನ್ನ ಮತ್ತು ಕಾಜೋಲ್ ಬಗ್ಗೆ ಜಡ್ಜ್ ಮಾಡಿ. ಅದನ್ನು ಬಿಟ್ಟು ನಮ್ಮ ಮಕ್ಕಳನ್ನು ಜಡ್ಜ್ ಮಾಡಬೇಡಿ. ನಾನು ಹಾಗೂ ಕಾಜೋಲ್ ಕಲಾವಿದರಾದ ಕಾರಣ ನಮ್ಮ ಮಕ್ಕಳು ಕ್ಯಾಮೆರಾಗೆ ಕಾಣಿಸಿಕೊಳ್ಳುತ್ತಿರುತ್ತಾರೆ” ಎಂದು ಹೇಳಿದ್ದಾರೆ. ಅಂದಹಾಗೇ ಇದು ಹೊಸದೇನಲ್ಲಾ ಈ ಹಿಂದೆಯೂ ಅನೇಕ ಬಾರಿ ನೈಸಾ ವಿರುದ್ಧ ನೆಟ್ಟಿಗರು ಟ್ರೋಲ್ ಮಾಡಿದ್ದರು.
Comments