ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು: ಬೇಕಿದೆ ಚಿತ್ರರಂಗದ ಸಹಾಯಹಸ್ತ..!!

ಸ್ಯಾಂಡಲ್ ವುಡ್’ನ ಕೆಲವೊಂದು ಪರಿಸ್ಥಿತಿಗಳನ್ನು ನೋಡಿದರೇ ಇದು ನಮ್ಮ ಸ್ಯಾಂಡಲ್ವುಡ್ ಎಂಬುದೆ ಅನುಮಾನವಾಗಿ ಬಿಡುತ್ತದೆ. ಹೊಸ ಹೊಸ ನಟ ನಟಿಯರು ಬರುತ್ತಿದ್ದ ಹಾಗೆ ಹಳೆಯ ನಟ ನಟಿಯರನ್ನು ಮೂಲೆ ಗುಂಪು ಮಾಡಿರುವ ಎಷ್ಟೋ ನಿದರ್ಶನಗಳಿವೆ.. ಸಾಕಷ್ಟು ನಟ ನಟಿಯರು ಅವಕಾಶವಂಚಿತರಾಗಿ ದಿಕ್ಕು ತೋಚದೆ ಸಿಕ್ಕಿ ಸಿಕ್ಕಿ ಕೆಲಸಗಳನ್ನು ಮಾಡುತ್ತಾ ಇದ್ದಾರೆ. ಇದೀಗ ಅಂತವರ ಸಾಲಿಗೆ ನಟಿ ವಿಜಯಲಕ್ಷ್ಮಿ ಕೂಡ ಸೇರಿಕೊಳ್ಳುತ್ತಾರೆ.. ಇದೀಗ ವಿಜಯಲಕ್ಷ್ಮಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಒಂದು ಕಾಲದಲ್ಲಿ ಸ್ಯಾಂಡಲ್’ವುಡ್ ಆಳಿದ ನಟಿ ಇಂದು ಹೇಗಿದ್ದಾರೆ ಗೊತ್ತಾ..? ಸ್ಯಾಂಡಲ್‍ವುಡ್‍ನಲ್ಲಿ ಟಾಪ್ ನಟಿ ಆಗಿದ್ದ ವಿಜಯಲಕ್ಷ್ಮೀ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ವಿಜಯಲಕ್ಷ್ಮೀ ತೀವ್ರವಾದ ಸುಸ್ತು ಮತ್ತು ಹೈ ಬಿಪಿಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದು, ಚಿತ್ರರಂಗದ ಸಹಾಯ ಹಸ್ತ ಚಾಚುತ್ತಿದ್ದಾರೆ. ಕಳೆದ ವಾರವಷ್ಟೆ ತಾಯಿಗೆ ಹೆಲ್ತ್ ಪ್ರಾಬ್ಲಂ ಆಗಿತ್ತು. ಈಗ ಸಡನ್ ಆಗಿ ನನ್ನ ತಂಗಿ ವಿಜಯಲಕ್ಷ್ಮಿ ಹೀಗೆ ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಇದ್ದ ಹಣವೆಲ್ಲ ತಾಯಿಯ ಚಿಕಿತ್ಸೆಗೆ ಖರ್ಚು ಮಾಡಿದ್ದೀವಿ. ಈಗ ನಮಗೆ ಇಂಡಸ್ಟ್ರಿಯ ಸಹಾಯ ಬೇಕಿದೆ ಎಂದು ವಿಜಯಲಕ್ಷ್ಮಿ ಅವರ ಸಹೋದರಿ ಉಷಾದೇವಿ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.. ಸಾಹಸಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೇರಿದಂತೆ ಅನೇಕ ಸೂಪರ್ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ವಿಜಯಲಕ್ಷ್ಮಿ ಅವರು ನಟಿಸಿದ್ದಾರೆ. ನಾಗಮಂಡಲದ ಪಾತ್ರದಿಂದಲೇ ವಿಜಯಲಕ್ಷ್ಮಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಇದೀಗ ಅವರಿಗೆ ಈ ರೀತಿಯ ಪರಿಸ್ಥಿತಿ ಬಂದಿರುವುದು ವಿಪರ್ಯಾಸವೇ ಸರಿ.
Comments