ರೀಲ್ ನಲ್ಲಿ ಮಾತ್ರ ಹೆಂಡ್ತಿಗೆ ವಿಲನ್ ಅನ್ಕೊಂಡ್ರೆ ರಿಯಲ್'ನಲ್ಲೂ ವಿಲನ್ ಆದ್ನ ಅಗ್ನಿಸಾಕ್ಷಿ ಅಖಿಲ್ ..!!!

ಕಿರುತೆರೆಯ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ನಟಿಸುತ್ತಿರುವ ಖ್ಯಾತ ನಟನ ಮೇಲೆ ಪತ್ನಿ ನಿನ್ನೆ ದೂರು ದಾಖಲು ಮಾಡಿದ್ದರು.ಅಗ್ನಿಸಾಕ್ಷಿ ಸೀರಿಯಲ್ ನ ಅಖಿಲ್ ಪಾತ್ರಧಾರಿ ರಾಜೇಶ್ ಧೃವಾ ವಿರುದ್ಧ ಆಕೆಯ ಪತ್ನಿ ಶೃತಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ.ಮದುವೆಯಾಗಿದ್ದರೂ ಬೇರೆ ಹುಡುಗಿಯರ ಜೊತೆ ಸುತ್ತಾಟ ನಡೆಸುತ್ತಾರೆ, ನನಗೆ ವರದಕ್ಷಿಣೆ ತಂದುಕೊಡು ಎಂದು ಪೀಡಿಸುತ್ತಾರೆ, ಮಾನಸಿಕವಾಗಿ ಹಾಗೂ ದೈಹಿಕವಾಗಿ ನನಗೆ ಕಿರುಕುಳ ನೀಡುತ್ತಾರೆ, ಅಷ್ಟೇ ಅಲ್ಲದೇ ಮನೆಯಿಂದ ಹೊರಗೆ ಹಾಕಿದ್ದಾರೆಂದು ಶೃತಿ, ಪತಿ ರಾಜೇಶ್ ಧೃವಾ ವಿರುದ್ಧ ಕಂಪ್ಲೇಟ್ ನೀಡಿದ್ದರು.
ಇದಕ್ಕೆ ಧೃವಾ ತಿರುಗೇಟು ನೀಡಿದ್ದಾರೆ. ನಾವಿಬ್ಬರು ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಇಟ್ಟುಕೊಂಡು ನಂತರ ಮದುವೆಯಾಗಿದ್ದು, ಆಕೆಯೊಂದಿಗೆ ನನ್ನ ಸಂಬಂಧ ಚೆನ್ನಾಗಿಲ್ಲ ನಿಜ, ಆದರೆ ಈ ಮೊದಲು ಯಾರ ಯಾರ ಮೇಲೆ ಕೇಸ್ ಕೊಟ್ಟಿದ್ದಾರೆಂದು ಕುಮಾರ ಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಕೇಳಿ ನೋಡಿ ಎಂದಿದ್ದಾರೆ. ಅಷ್ಟೇ ಅಲ್ಲದೇ ನಾನು ನಟನಾಗಿರುವುದರಿಂದ ನ್ಯೂಸ್ ಚಾನೆಲ್ ಗೆ ಹೇಳುತ್ತೇನೆಂದು ಹೆದರಿಸುತ್ತಾಳೆ. ಅವಳು ಮಾಂಸಹಾರಿ ಮನೆಯಲ್ಲಿ ಮಡಿ ಮೈಲಿಗೆ ಎಲ್ಲಾ ಹಾಳು ಮಾಡುತ್ತಾಳೆ. ಅಷ್ಟೇ ಅಲ್ಲದೇ ನನ್ನ ತಾಯಿಗೆ ಮಾನಸಿಕ ಹಿಂಸೆ ನೀಡುತ್ತಾಳೆಂದು ಧೃವಾ ಅವರೇ ಪತ್ನಿ ಶೃತಿ ವಿರುದ್ಧ ಆರೋಪ ಮಾಡಿದ್ದಾರೆ. ವರದಕ್ಷಿಣೆಗೆ ಪೀಡಿಸುತ್ತೇನೆ ಎಂದು ಅವರು ಆರೋಪಿಸುತ್ತಾರಲ್ಲಾ, ಹಾಗೆಲ್ಲಾ ಇಲ್ಲದೇ ಇರುವುದು ಈಗ ಹೇಗೆ ವರದಕ್ಷಿಣೆ ವಿಚಾರ ಬಂತು. ನನ್ನ ಮೇಲೆ ಆಕೆಗೆ ವಿಪರೀತ ಅನುಮಾನ, ನಾನು ಎಲ್ಲಿಯೂ ಹೋದ್ರು, ಬಂದ್ರೂ ಅನುಮಾನ ಪಡುತ್ತಲೇ ಇರುತ್ತಾರೆ. ನನಗೆ ಅಫೇರ್ ಇದೆ ಎನ್ನುವ ಆಕೆಗೆ ಇಲ್ಲವಾ ಎಂದು ಪ್ರಶ್ನಿಸಿದ್ರು.ಒಟ್ಟಾರೆ ಖ್ಯಾತ ನಟ ರಾಜೇಶ್ ಧೃವಾ ಟಿಆರ್ಪಿ ಧಾರವಾಹಿ ಅಗ್ನಿಸಾಕ್ಷಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಪತ್ನಿಯ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
Comments