ಮದುವೆಗೂ ಮುನ್ನಾ 'ಅಪ್ಪ'ನಾದ ಗೀತಾ ಗೋವಿಂದಂ ನಾಯಕ...!
ಗೀತಾ ಗೋವಿಂದಂ ಸಿನಿಮಾ ಅಂದ್ರೆ ನಮಗೆ ನೆನಪಾಗೋದು ಬಬ್ಲಿ ಬಬ್ಲಿಯಾಗಿ ಕಾಣುವ ಚೆಂದದ ಹುಡುಗ ವಿಜಯ್ ದೇವರಕೊಂಡ… ನಮ್ಮ ಹೆಡ್ ಲೈನ್ ನೋಡಿದ ತಕ್ಷಣ ನಿಮಗೆಲ್ಲಾ ತಲೆಯಲ್ಲಿ ಹುಳ ಬಿಟ್ಟುಕೊಳ್ಳುವ ಕೆಲಸ ಮಾಡಬೇಡಿ.. ಏಕೆಂದರೆ ವಿಜಯ್ ಅಪ್ಪ ಆಗುತ್ತಿರುವುದು ರೀಲ್ ಲೈಫ್ ನಲ್ಲಿಯೇ ಹೊರತು ರಿಯಲ್ ಲೈಫ್ ನಲ್ಲಿ ಅಲ್ಲ… ಅಯ್ಯೋ ವಿಜಯ್ ಗೆ ಇನ್ನೂ ಮದುವೆಯೇ ಆಗಿಲ್ಲ ಇನ್ನೂ ಅಪ್ಪ ಆಗೋದು ಎಲ್ಲಿಂದ ಬಂತು ಹೇಳಿ..? 'ಪೆಳ್ಳಿ ಚೂಪುಲು', 'ಅರ್ಜುನ್ ರೆಡ್ಡಿ' ಚಿತ್ರಗಳ ಮೂಲಕ ತೆಲುಗು ಸಿನಿ ರಂಗದಲ್ಲಿ ಸಂಚಲನ ಸೃಷ್ಟಿಸಿದ ನಟ ವಿಜಯ್ ದೇವರಕೊಂಡ. 'ಗೀತ ಗೋವಿಂದಂ' ಚಿತ್ರದ ಮೂಲಕ ಹುಡುಗಿಯರ ಹಾರ್ಟ್ ಗೆ ಲಗ್ಗೆ ಇಟ್ಟ ವಿಜಯ್ ದೇವರಕೊಂಡ, ಸದ್ಯ 'ಡಿಯರ್ ಕಾಮ್ರೇಡ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ..
ಇದೀಗ ಮತ್ತೊಂದು ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರದಲ್ಲಿ ತಂದೆಯಾಗಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕ್ರಾಂತಿ ಮಾಧವ್ ಆಕ್ಷನ್ ಕಟ್ ಹೇಳಲಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇಂಟರೆಸ್ಟಿಂಗ್ ಅಂದರೆ ಈ ಸಿನಿಮಾದಲ್ಲಿ ಅವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಟ ವಿಜಯ್ ದೇವರಕೊಂಡ ರವರಿಗೆ ಇನ್ನೂ 29 ವರ್ಷ ವಯಸ್ಸು. ಹೀಗಿದ್ದರೂ ತೆರೆ ಮೇಲೆ ಎಂಟು ವರ್ಷದ ಮಗುವಿನ ತಂದೆಯಾಗಿ ನಟಿಸಲು ವಿಜಯ್ ದೇವರಕೊಂಡ ಒಪ್ಪಿಕೊಂಡಿದ್ದಾರಂತೆ. ಯಾವುದೇ ಪಾತ್ರ ಕೊಟ್ಟರೂ, ಅದಕ್ಕೆ ಜೀವ ತುಂಬುವ ವಿಜಯ್ ದೇವರಕೊಂಡ ತಂದೆಯಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದೇ ಸದ್ಯದ ಕುತೂಹಲ.
Comments