ದರ್ಶನ್’ನ ‘ರಾಬರ್ಟ್’ ಸಿನಿಮಾಕ್ಕೆ ಎಂಟ್ರಿಕೊಟ್ಟ ದೊಡ್ಮನೆ ಸ್ಟಾರ್ಸ್..!!

ಬಾಕ್ಸ್ ಆಫೀಸ್ ನ ಸುಲ್ತಾನ ಅಂದ್ರೆ ಥಟ್ ಅಂತಾ ನೆನಪಾಗೋದು ಚಾಲೆಂಜಿಂಗ್ ಸ್ಟಾರ್ ದರ್ಶನ್.. ರೆಕಾರ್ಡ್ಗಳನ್ನು ಬ್ರೇಕ್ ಮಾಡೊದೇ ದರ್ಶನ್ ಸಿನಿಮಾದ ಕೆಲಸ ಅಂತಾರೆ ಡಿ ಬಾಸ್ ಅಭಿಮಾನಿಗಳು…ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಡಿ53. ಈ ಸಿನಿಮಾಗೇ ಈಗಾಗಲೇ ರಾಬರ್ಟ್ ಅಂತ ಟೈಟಲ್ ಫಿಕ್ಸ್ ಮಾಡುವುದಕ್ಕೂ ಮೊದಲೇ ಥೀಮ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚು ಮಾಡಿದ್ರು ನಿರ್ದೇಶಕ ತರುಣ್ ಸುಧೀರ್ ಅವರು…
ಈ ಪೋಸ್ಟರ್ ನಲ್ಲಿ ನಟ ದರ್ಶನ್ ತನ್ನ ರಕ್ತಸಿಕ್ತ ಕೈಗಳಿಂದ ಪುಟ್ಟ ಮಗುವಿನ ಕೈ ಹಿಡಿದುಕೊಂಡಿದ್ರು. ಅಷ್ಟೆ ಅಲ್ಲದೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು ಹಿನ್ನಲೆ ಸಾಲುಗಳು ಮತ್ತಷ್ಟು ಇಂಟ್ರೆಸ್ಟಿಂಗ್ ಅನ್ನಿಸಿತ್ತು ಅಭಿಮಾನಿಗಳಿಗೆ.. ರಾಬರ್ಟ್ ಸಿನಿಮಾ ಬಗ್ಗೆ ಹಂತಹಂತವಾಗಿ ಒಂದೊಂದೇ ವಿಶೇಷತೆಗಳು ಗಾಂಧಿನಗರದಲ್ಲಿ ಓಡಾಡುತ್ತಿವೆ.., ಮತ್ತೊಂದು ಹೊಸ ವಿಷಯ ಗಾಂಧೀನಗರದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ ಡಿ53 ನಲ್ಲಿ ದಚ್ಚುಗೆ ಜೊತೆಯಾಗಿ ಮತ್ತೊಬ್ಬ ಸ್ಟಾರ್ ನಟ ಅಭಿನಯಿಸಲಿದ್ದಾರಂತೆ..ಅದ್ರಲ್ಲೂ ಇವ್ರು ದೊಡ್ಮನೆ ಸ್ಟಾರ್ಗಳು ಅನ್ನೋದೇ ವಿಶೇಷ. ಎಸ್ ರಾಬರ್ಟ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಥವಾ ರೋರಿಂಗ್ ಸ್ಟಾರ್ ಶ್ರೀಮುರುಳಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಸದ್ಯದ ಹಾಟ್ ನ್ಯೂಸ್ ಆಗಿದೆ. ದಚ್ಚು ಜೊತೆ ಸ್ಟಾರ್ ನಟರು ಸ್ಕ್ರೀನ್ ಷೇರ್ ಮಾಡ್ತಿರೋದು ಅಭಿಮಾನಿಗಳಿಗೆ ಖುಷಿಯ ವಿಚಾರವೇ ಸರಿ..
Comments