ದರ್ಶನ್ ಕೈ ಕಡಗ ಅಂಬಿದೂ ಅಲ್ಲ, ವಿಷ್ಣುದೂ ಅಲ್ಲ, ಮತ್ಯಾರದು ಗೊತ್ತಾ…?
ಅಂದಹಾಗೇ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಕೈ ಕಡಗದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿ ಬಂದವು. ಅನೇಕ ರೂಮರ್ಸ್ ಕೂಡ ಹಬ್ಬಿದ್ದವು. ಈ ಬಗ್ಗೆ ದರ್ಶನ್ ಅವರೇ ಸದ್ಯ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಯಾವ ಸಿನಿಮಾದಲ್ಲಿ ಅಭಿನಯಿಸಿದ್ರೂ, ಸಾರ್ವಜನಿಕ ಕಾರ್ಯಕ್ರಮಗಳು ಬಂದ್ರೂ ಅವರ ಕೈಯಲ್ಲಿ ಒಂದು ಬಳೆ ಇರ್ತಾಯಿತ್ತು. ಅಂದಹಾಗೇ ದರ್ಶನ್ ಕೈ ಕಡಗ ನೋಡಿ ಅವರ ಅಭಿಮಾನಿಗಳು ಕೂಡ ಅವರನ್ನು ಫಾಲೋ ಮಾಡ್ತಾ ಇದ್ರು. ಅದೇನೆ ಇರಲಿ ಆ ಕಡಗದ ರಹಸ್ಯ ಬಿಟ್ಟಿದ್ದಾರೆ ಚಾಲೆಂಂಜಿಂಗ್ ಸ್ಟಾರ್. ಡಿ ಬಾಸ್ ಧರಿಸುವ ಕಡಗದ ಬಗ್ಗೆ ಅನೇಕರಿಗೆ ಕುತೂಹಲವಿತ್ತು.
ಈ ಥರಾ ಕೈ ಕಡಗ ಹಾಕೋ ಅಭ್ಯಾಸ ಇದ್ದುದ್ದು ಕನ್ನಡ ಚಿತ್ರರಂಗದಲ್ಲಿ ವಿಷ್ಣುದಾದ ನಿಗೆ ಮಾತ್ರ. ಸಾಹಸಿಂಹ ಅವರು ಆ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದರು. ಇದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ಕೈಯಲ್ಲಿ ಇಂತಹ ಕಡಗ ನೋಡಿ ಚಿತ್ರರಂಗದ ಒಂದಷ್ಟು ಜನ ಮಾತನಾಡಿಕೊಂಡರು. ವಿಷ್ಣುದಾದನ ಕೈಯಲ್ಲಿದ್ದ ಬಳೆ ಚಾಲೆಂಜಿಂಗ್ ಸ್ಟಾರ್ ಕೈಯನಲ್ಲಿದೆ ಎಂದರು. ಇನ್ನಷ್ಟು ಜನ ಅಂಬಿ ಪ್ರೀತಿಯಿಂದ ದಾಸನ ಕೈಗೆ ತೊಡಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ರು. ಆದರೆ ಈ ಬಗ್ಗೆ ಹಲವು ಅಭಿಪ್ರಾಯಗಳು ಹೊರಬಿದ್ದರೂ ದಚ್ಚು ಈ ವಿಚಾರದ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಸದ್ಯ ಕೈ ಕಡಗದ ರಹಸ್ಯ ಬಿಚ್ಚಿಟ್ಟಿದ್ದಾರೆ.
ಯಜಮಾನ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಚ್ಚು ತಮ್ಮ ಕೈಯಲ್ಲಿರುವ ಕಡಗದ ಹಿಂದಿನ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ಹೌದು,ಸುಮಾರು 36 ವರ್ಷದಿಂದ ದರ್ಶನ್‍ಗೆ ಕೈಗೆ ಕಡಗ ಹಾಕುವ ಅಭ್ಯಾಸವಿದೆ. ತಾವು ಮೈಸೂರಿನಲ್ಲಿ ನೆಲೆಸಿದ್ದಾಗ, ಪುಟ್ಟ ಬಾಲಕನಿರುವಾಗಿನಿಂದಲೂ ಕೈಗೆ ಕಡಗ ಹಾಕುವುದು ದಾಸ ಅವರಿಗೆ ಅಚ್ಚುಮೆಚ್ಚು. ನಾವು ಮೈಸೂರಿನಲ್ಲಿ ವಾಸ ಮಾಡೋವಾಗ ನಮ್ಮ ವಾಸ ಮಾಡುತ್ತಿದ್ದ ಮನೆ ಮೇಲೆ ಪಂಜಾಬಿ ಕುಟುಂಬವೊಂದು ಬಾಡಿಗೆ ಇತ್ತು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಆದರಿಂದ ಒಮ್ಮೆ ಗೋಲ್ಡನ್ ಟೆಂಪಲ್‍ಗೆ ಹೋಗಿದ್ದ ವೇಳೆ ಸಣ್ಣದೊಂದು ಕಡಗ ತಂದು ನನಗೆ ಕೊಟ್ಟಿದ್ದರು. ಆಗಿನಿಂದಲೂ ನಾನು ಕಡಗ ಹಾಕುತ್ತಿದ್ದೇನೆ ಅಂತ ಡಿ ಬಾಸ್ ಕಡಗದ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.
Comments