ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ನಟಿಸಲಿದ್ದಾರಾ ಪ್ರಿಯಾಮಣಿ.?
ಸ್ಯಾಂಡಲ್ ವುಡ್ನಲ್ಲಿ ಒಂದಿಷ್ಟು ದಿನಗಳ ಕಾಲ ಮಿಂಚಿದ ನಟಿ ಮಣಿಯರಲ್ಲಿ ಪ್ರಿಯಾಮಣಿ ಕೂಡ ಒಬ್ಬರು… ಚಂದನವನದಲ್ಲಿ ಮಾಡಿದ್ದು ಕಡಿಮೆ ಸಿನಿಮಾವಾದ್ರು ಒಂದಿಷ್ಟು ಅಭಿಮಾನಿಗಳ ಸಂಪಾದಿಸಿದ್ದಂತು ಸುಳ್ಳಲ್ಲ… ಸಾಕಷ್ಟು ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ ಪ್ರಿಯಾ ಮಣಿ… ಈ ನಟಿ ಮಣಿ ಮದುವೆಯಾದ ನಂತರ ಸ್ವಲ್ಪ ದಿನ ಚಿತ್ರರಂಗದಿಂದ ದೂರನೇ ಉಳಿದು ಬಿಟ್ಟಿದ್ದರು.. ಇದೀಗ ಮತ್ತೊಮ್ಮೆ ಸಿನಿ ರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿಕೊಂಡಿದ್ದಾರೆ…
ಎಸ್… ಮುಸ್ತಾಫ ರಾಜ್ ಅವರೊಂದಿಗೆ ಮದುವೆಯಾದ ನಂತರ ಬಹು ಕಾಲ ಬೆಳ್ಳಿತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದಂತಹ ಪ್ರಿಯಾಮಣಿ, ಇದೀಗ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಹೆಚ್ಚಾಗಿಯೇ ಕೇಳಿಬರುತ್ತಿವೆ… ಪ್ರಿಯಾಮಣಿ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತ ಎನ್ನುವ ಮಾತಿದ್ದರೂ ಕೂಡ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ ಎನ್ನುತ್ತಿದ್ದಾರೆ.. ಇನ್ನುಳಿದಂತೆ ಮದುವೆ ಬಳಿಕ ಟಾಲಿವುಡ್ ಚಿತ್ರವೊಂದರಲ್ಲಿ ಪ್ರಿಯಾಮಣಿ ಅಭಿನಯಿಸಿದ್ದು, ಕೆಲ ದಿನದಲ್ಲಿ ಆ ಸಿನಿಮಾ ತೆರೆ ಕಾಣಲಿದೆ ಎನ್ನಲಾಗಿದೆ.ರಾಜಮೌಳಿಯಂತಹ ದೊಡ್ಡ ಡೈರೆಕ್ಟರ್ ಜೊತೆ ಸಿನಿಮಾ ಮಾಡಲು ಸಿದ್ದವಾಗುತ್ತಿರುವ ಪ್ರಿಯಾಮಣಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್ ಹೇಳೋಣ..
Comments