ಹುತಾತ್ಮ ಯೋಧರ ನೆನಪಿಗೆ ಈತ ಮಾಡಿದ್ದೇನು ಗೊತ್ತಾ…?!!!
ಪುಲ್ವಾಮಾ ದಾಳಿಯಿಂದ ಅನೇಕ ಭಾರತೀಯ ಯುವಕರು ವೀರ ಮರಣ ಹೊಂದಿದ್ದಾರೆ. ಅನೇಕರ ಪಾಲಿಗೆ ಅಂದು ಕರಾಳ ದಿನವಾಗಿತ್ತು. ಹುತಾತ್ಮರ ಕುಟುಂಬಗಳಿಗೆ ನೆರೆವು ನೀಡಲು ಹಲವು ಜನ ಮುಂದು ಬರುತ್ತಿದ್ದಾರೆ. ಈ ಮಧ್ಯೆ ಇಲ್ಲೊಬ್ಬ ಯುವಕ ಅವರ ನೆನಪಿಗಾಗಿ ಮಾಡಿದ್ದೇನು ಗೊತ್ತಾ..? ದಾಳಿಯಲ್ಲಿ ನೆತ್ತರು ಹರಿಸಿದ ಯುವಕರ ಆತ್ಮಕ್ಕೆ ಶಾಂತಿ ಸಿಗಬೇಕಾದರೇ ಪ್ರತೀಕಾರವೇ ಹೊರತು ಬೇರೇನು ಇಲ್ಲವೆಂದು ಯುವಕರು ಘೋಷಣೆ ಕೂಗಿದ್ದಾರೆ.
ಇಲ್ಲಿನ ರಾಜಸ್ಥಾನದ ಬಿಕನೇರ್ ಭಗತ್‌ಸಿಂಗ್ ಯೂತ್ ಬ್ರಿಗೇಡ್ ಸದಸ್ಯ ಗೋಪಾಲ್ ಸಹರಣ್ ಎಂಬ ಯುವಕ ಯೋಧರ ಸಾವಿಗೆ ಕಂಬನಿ ಮಿಡಿದಿದ್ದಾನೆ. ಅಷ್ಟೇ ಅಲ್ಲಾ ವೀರ ಮರಣ ಹೊಂದಿದ್ದ ಯುವಕರು ಸದಾ ಕಾಲ ನೆನಪಿನಲ್ಲಿ ಉಳಿಯಬೇಕೆಂಬ ಆಭಿಮಾನಕ್ಕಾಗಿ ಆತ ತನ್ನ ಬೆನ್ನ ಮೇಲೆ ಹುತಾತ್ಮ ಯೋಧರ ಹೆಸರು ಹಚ್ಚೆ ಹಾಕಿಸಿಕೊಂಡಿದ್ದಾನೆ.ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದುರಂತದಲ್ಲಿ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿರುವುದಾಗಿ ಸಹರಣ್ ಹೇಳಿದ್ದಾರೆ. ಫೆ.14ರಂದು ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ಹೆಸರಿನ ಜತೆಗೆ ಇತರ ದಾಳಿಗಳಲ್ಲಿ ಹುತಾತ್ಮರಾದ 31 ಯೋಧರ ಹೆಸರುಗಳೂ ಸೇರಿದಂತೆ 71 ಯೋಧರ ಹೆಸರುಗಳನ್ನು ಸಹರಣ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ.ಎಲ್ಲರು ಯೋಧರ ನೆನಪಿಗಾಗಿ ಏನೆಲ್ಲಾ ಮಾಡ್ತಿರುತ್ತಾರೆ, ನಾನು ಈ ಕೆಲಸ ಮಾಡಿದ್ದೇನೆ. ಟ್ಯಾಟೂ ನಾನು ಮಣ್ಣಾಗುವ ತನಕವೂ ಇರುತ್ತದೆ. ಹಾಗಾಗಿ ಅವರು ಯಾವಾಗಲು ನನ್ನ ಮೈ ಮೇಲೆ ಇರಬೇಕು. ನಮ್ಮ ಹೀರೋಗಳ ನೆನಪು ಸದಾ ಕಾಲವು ಇರಬೇಕೆಂದು ನಾನು ಹೀಗೆ ಹಾಕಿಸಿಕೊಂಡಿದ್ದೇನೆ ಎಂದಿದ್ದಾನೆ.
Comments