ನನ್ನಿಂದ ಕೊನೆಗೂ ಕೊಡಿಸಲಾಗಲಿಲ್ಲ ಅಂಬಿ ಅಪ್ಪಾಜಿ ಕೇಳಿದ ಆ ‘ವಸ್ತು’ವನ್ನು : ಚಾಲೆಂಜಿಂಗ್ ಸ್ಟಾರ್ ಕಣ್ಣೀರು…?!!!

21 Feb 2019 9:55 AM | Entertainment
1463 Report

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಚಾಲೆಂಜಿಂಗ್ ಸ್ಟಾರ್ ನಡುವೆ ಅಪ್ಪ-ಮಗನ ಸಂಬಂಧವಿತ್ತು ಎಂಬುದೇ ಇಡೀ ಚಿತ್ರರಂಗಕ್ಕೆ ಗೊತ್ತು. ಸ್ಯಾಂಡಲ್’ವುಡ್ ನ  ಲೆಸೆಂಡ್ ಅಂಬರೀಶ್ ಸಾವು ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿತ್ತು. ದರ್ಶನ್ ವೈಯಕ್ತಿಕ ಜೀವನ ಹಾಗೂ ಸಿನಿಮಾ ಲೈಫ್ ನಲ್ಲಿ ಅಂಬಿ ಪಾತ್ರ ಬಹಳ ಮುಖ್ಯವಾಗಿತ್ತು ಎಂಬುದನ್ನು ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದರು.

ನನ್ನನ್ನು ಸಾರ್ವಜನಿಕವಾಗಿ ದಂಡಿಸುವ ಅಧಿಕಾರ ಇರೋದು ಅದು ನನ್ನ ಪಿತೃ ಸ್ಥಾನದಲ್ಲಿ ಅಂಬಿ ಗೆ ಮಾತ್ರವೆಂದು ಹೇಳಿ ದರ್ಶನ್ ಇಡೀ ಅಭಿಮಾನಿಗಳ ಮನದಲ್ಲಿ  ಬಹು ಎತ್ತರಕ್ಕೆ ನಿಂತವರು. ದರ್ಶನ್ ಬಿರುಕುಬಿಟ್ಟ ದಾಂಪತ್ಯ ಸರಿಮಾಡಿದ್ದು ಅಂಬಿಯೇ. ಅದೇನೆ ಇರಲಿ ಪತ್ರಿಕಾಗೋಷ್ಠಿ ಯಲ್ಲಿ ಅಂಬಿ ಬಗ್ಗೆ ಮಾತನಾಡುತ್ತಾ ದರ್ಶನ್ ಭಾವುಕರಾಗಿದ್ದಾರೆ.ಸದ್ಯ ದರ್ಶನ್ ಯಜಮಾನ ಸಿನಿಮಾ ರಿಲೀಸ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕೆಲ ಪ್ರೆಸ್ ಮೀಟ್ ಗಳಲ್ಲಿ ಭಾಗವಹಿಸುತ್ತಿರುವ ದರ್ಶನ್ ಅಂಬಿಯನ್ನು ನೆನೆದು ಭಾವುಕರಾಗಿದ್ದಾರೆ. ಅಂಬಿ ಸತ್ತಾಗ ದರ್ಶನ್, ಯಜಮಾನ ಶೂಟಿಂಗ್’ಗೆಂದು ಸ್ಪೀಡನ್ ನಲ್ಲಿದ್ದರು. ಆ ವೇಳೆಗೆ ವಿಷಯ ಮುಟ್ಟಿದಾಗ ಕ್ಷಣ ಏನು ಮಾಡಬೇಕೆಂದು ತೋಚದೇ ದಿಕ್ಕು ತೋಚದಾಯ್ತು ಎಂದು ನೆನಪಿಸಿಕೊಂಡರು.

ಇಡೀ ಚಿತ್ರತಂಡವೇ ಸ್ಪೀಡನ್’ನಿಂದ ವಾಪಸ್ಸಾಯ್ತು. ಸ್ಪೀಡನ್ ಗೆ ಹೋಗೋ ಎರಡು ದಿನಕ್ಕೂ ಮುಂಚೆ ನಾನು ಅಂಬರೀಶ್ ಗೆ ಕಾಲ್ ಮಾಡಿದ್ದೆ , ಆಗ ಅವರು ಬರೋವಾಗ ಅಲ್ಲಿಂದ ನನಗೇನು ತರ್ತೀಯಾಯ್ಯಾ ಎಂದು ಕೇಳಿದ್ರು. ನಿಮಗೇನು ಬೇಕು ಅದನ್ನೇ ತಂದು ಕೊಡುತ್ತೇನೆ ಎಂದಿದ್ದೆ. ಅದಕ್ಕೆ ಅವರು ನನಗೊಂದು ವಾಚ್ ಕೊಡಿಸಯ್ಯಾ ಸಾಕೆಂದರು.  ನಾನು ಬೆಂಗಳೂರಿಗೆ ಬಂದ ಕೂಡಲೇ ಖಂಡಿತಾ ನಿಮಗೊಂದು ಹೊಸ ವಾಚ್ ಕೊಡಿಸುವೆ ಎಂದು ಮಾತು ಕೊಟ್ಟಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರಿಗೆ ಕೊಟ್ಟ ಮಾತನ್ನು ಉಳಿಸಲಿಲ್ಲೆ ಆಗಲಿಲ್ಲ. ಸ್ಪೀಡನ್ ನ್ನಿಂದ ಬಾರತಕ್ಕೆ ವಾಪಸ್ ಆಗುವ ಕಾರಣವೇ ಬೇರೆಯಾಗಿತ್ತು ಎಂದು ಭಾವುಕರಾದರು.

Edited By

Kavya shree

Reported By

Kavya shree

Comments