ಬಿಗ್’ಬಾಸ್’ನ ಇಬ್ಬರು ಘಟಾನುಗಘಟಿಗಳು ಒಂದೇ ವೇದಿಕೆಯಲ್ಲಿ : ಅಭಿಮಾನಿಗಳು ಹುಚ್ಚೆದ್ದು ಕುಣಿಯೋದ್ರಲ್ಲಿ ಡೌಟೇ ಇಲ್ಲ…?!
ಅಂದಹಾಗೇ ಇಬ್ಬರದು ಒಂದೇ ದಾರಿ, ಇವರಿಬ್ಬರದು ಒಂದೇ ಆಸಕ್ತಿ. ಇಬ್ಬರು ಬಿಗ್ಬಾಸ್ ನ ಜರ್ನಿಯಲ್ಲಿ ಜನಮನ ಗೆದ್ದವರೇ. ಆದರೆ ಬೇರೆ ಬೇರೆ ಸೀಸನ್ ನಲ್ಲಿ. ಬಿಗ್‌ಬಾಸ್ ಶೋ ಮೂಲಕ ಮನೆ ಮಾತಾದವರು. ಇಂಟರೆಸ್ಟಿಂಗ್ ಅಂದ್ರೆ, ಅವರಿಬ್ಬರು ಕೂಡ ಬಿಗ್‌ಬಾಸ್ ರಿಯಾಲಿಟಿ ಶೋ ಕಂಪ್ಲೀಟ್ ಮಾಡಿದ್ದಾರೆ. ಒಬ್ರು ವಿನ್ನರ್ ಆದ್ರೆ, ಇನ್ನೊಬ್ರು ರನ್ನರ್ ಅಪ್. ಇದಿಷ್ಟೇ ಅಲ್ಲ, ಇನ್ನೊಂದು ಇಂಪಾರ್ಟ್‌ಟೆಂಟ್ ಹೋಲಿಕೆ ಕೂಡ ಇದೆ. ಇಬ್ಬರಿಗೂ ಯೂತ್ಸ್, ಅದರಲ್ಲೂ ಮಹಿಳಾ ಅಭಿಮಾನಿಗಳೇ ಹೆಚ್ಚು. ಬಿಗ್ ಬಾಸ್ ಮುಗಿದಮೇಲೂ ಇಬ್ಬರೂ ಸುದ್ದಿಯಲ್ಲಿದ್ದಾರೆ. ಅಂದಹಾಗೇ ಅವರ್ಯಾರು ಗೊತ್ತಾ..?
ಹೋ ಅವರು ಯಾರು ಅಂತಾ ನಿಮಗೆ ಐಡೆಂಟಿಫೈ ಮಾಡೋಕೆ ಕಷ್ಟವಾಗ್ತಿದೆಯೇನೋ.. ಆದರೆ ಇಬ್ಬರು ಮ್ಯೂಸಿಕ್ ಅಂದ್ರೆ ಪ್ರಾಣ ಬಿಡುವವರು. ಇಬ್ಬರಲ್ಲೂ ಒಂದೇ ಥರನಾದ ಗುಣಗಳಿವೆ. ಇನ್ನೂ ಗೊತ್ತಾಗಿಲ್ವಾ…ಒಬ್ಬರು ಮೂರೇ ಮೂರು ಪೆಗ್ಗಿಗೆ ಎಂಬ ಹಾಡಿನ ಮೂಲಕ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು, ಇನ್ನೊಬ್ಬರು ಎಣ್ಣೆ ನಮ್ದು ಊಟ ನಿಮ್ದು ಮೂಲಕ ಅಭಿಮಾನಿಗಳ ಮನಸ್ಸು ಗೆದ್ದವರು., ಎಸ್ ಅವರೇ CS and NS. ಅರ್ಥಾತ್ ಚಂದನ್ ಶೆಟ್ಟಿ ಅಂಡ್ ನವೀನ್ ಸಜ್ಜು. ಒಬ್ಬರು ರ್ಯಾಪರ್ ಮತ್ತೊಬ್ಬರು ಪ್ಯಾಥೋ ಸಾಂಗ್ ಸಿಂಗರ್. ಅಂದ ಹಾಗೇ ಚಂದನ್ ಶೆಟ್ಟಿ ಬಿಗ್’ಬಾಸ್ ಮುಗಿದ ಮೇಲೂ ಸುದ್ದಿಯಾದ್ರು.
ಬಿಗ್‌ಬಾಸ್ ಶೋ ಮುಗಿದ್ಮೇಲೆ ನವೀನ್ ಸಜ್ಜು ಮತ್ತೆ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಇಬ್ಬರದ್ದು ಒಂದೇ ಜರ್ನಿ. ಇಬ್ಬರು ಸಿಂಗರ್ಸ್ ಈಗ ಒಂದು ಹಾಡಿಗಾಗಿ ಒಂದೂಗೂಡಿದ್ದಾರೆ. ಮೊನ್ನೆ ನವೀನ್ ಸಜ್ಜು ಮತ್ತು ಚಂದನ್ ಶೆಟ್ಟಿ ಮೀಟ್ ಮಾಡಿ, ಒಂದು ಹೊಸ ಸಾಂಗ್ ಮಾಡೋ ಬಗ್ಗೆ ಡಿಸೈಡ್ ಮಾಡಿದ್ದಾರೆ. ಸದ್ಯದಲ್ಲಿಯೇ ಆ ಸಾಂಗ್ ಕಂಪೋಸಿಂಗ್ ಮತ್ತು ಲಿರಿಕ್ಸ್ ಬರೆಯೋ ಕೆಲ್ಸ ಶುರುವಾಗುವ ಸಾಧ್ಯತೆಯಿದೆ. ಇಬ್ಬರು ಯಂಗ್ ಮ್ಯೂಸಿಕ್ ಡೈರೆಕ್ಟರ್ಸ್ ಜೊತೆಯಾಗಿರುತ್ತಿರುವುದು ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟು ಹಾಕಿದೆ. ಅಂದಹಾಗೇ ಮ್ಯೂಸಿಕ್ ನ್ನೇ ವಿಭಿನ್ನ ರೀತಿಯಲ್ಲಿ ಜನರಿಗೆ ತಲುಪಿಸೋ ಇಬ್ಬರು ಸದ್ಯ ಫ್ಯಾನ್ಸ್ ಗೆ ಮ್ಯೂಸಿಕ್ ರಸದೌತಣ ಕೊಡಲು ಸಿದ್ಧರಾಗಿದ್ದಾರೆ. ಟೋಟಲೀ ಒಂದು ರ್ಯಾಪ್, ಕಿಕ್ ಸಾಂಗ್ ಸದ್ಯದಲ್ಲೇ ಬರಲಿದೆ ಎಂಬುದು ಮಾತ್ರ ಕನ್ಫರ್ಮ್ ಆಗಿದೆ.
Comments