ಬಿ ಟೌನ್ ಬ್ಯಾಡ್ ಬಾಯ್ ರನ್ನು ನೀವೆ ಮದುವೆಯಾಗಿ ಎಂದಿದ್ದಕ್ಕೆ ಮಾಜಿ ಲವ್ವರ್ ಕತ್ರಿನಾ ಹೇಳಿದ್ದೇನು ಗೊತ್ತಾ..?

ಲವ್, ಗಾಸಿಪ್, ಬ್ರೇಕಿಂಗ್ ಸುದ್ದಿಗಳಿಗೆ ಮುಂಚೂಣಿಯಲ್ಲಿರುವ ಇಂಡಸ್ಟ್ರಿ ಎಂದರೆ ಬಾಲಿವುಡ್. ಬಿ ಟೌನ್ ಸುಂದರಿಯರು ಯಾವಾಗಲೂ ಫ್ರಂಟ್ ಲೈನ್ ಸುದ್ದಿಯಲ್ಲಿರುತ್ತಾರೆ. ಒಂದು ಕಾಲದಲ್ಲಿ ಸ್ಟಾರ್ ಹೀರೋಗಳ ಜೊತೆ ಲವ್ ಬರ್ಡ್ ಆಗಿ ಹಾರಾಟ ನಡೆಸುತ್ತಿದ್ದ ಸೂಪರ್ ಹೀರೋಯಿನ್ ಗಳು ಇಂದು ಮಾಜಿ ಪ್ರೇಮಿಗಳಾಗಿ ಹೆಸರು ಪಡೆದಿದ್ದಾರೆ. ಆದರೆ ಮಾಜಿ ಆದರೇನು..? ಹಾಲಿ ಆದರೇನು ಲವ್ ಬರ್ಡ್ಸ್ ಗಳು ಸುದ್ದಿಯಾಗುತ್ತಲೇ ಇರುತ್ತಾರೆ. ಅಂದಹಾಗೇ ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಪ್ರೇಯಸಿ ಬಗ್ಗೆ ನಿಮಗೆ ಗೊತ್ತೇ ಇದೆ. ಹೌದು ಅದೇ ಕತ್ರಿನಾ ಕೈಫ್, ಸದ್ಯ ಅವರು ಮಾಜಿ ಪ್ರೇಮಿಯಾಗಿ ಉಳಿದಿದ್ದಾರೆ.
ಇಬ್ಬರಿಗೂ ಇನ್ನು ಮದುವೆಯಾಗಿಲ್ಲ. ಒನ್ಸ್ ಅಪ್ ಆನ್ ಎ ಟೈಮ್ ಇಬ್ಬರು ಪ್ರೇಮದಕ್ಕಿಗಳಾಗಿ ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದರು. ಅವರ ಡೇಟಿಂಗ್ , ಚಾಟಿಂಗ್ ಲವ್ ಬಗ್ಗೆ ಬಾಲಿವುಡ್’ನಲ್ಲಿ ಮಾತೇ ಮಾತು. ಆದರೆ ಅದೆಲ್ಲಾ ಪಾಸ್ಟ್. ಪ್ರೆಸೆಂಟ್ ಇಬ್ಬರು ಬೇರೆ ಬೇರೆಯಾಗಿದ್ದಾರೆ. ಇದೂ ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಂದು ಕಾಲದಲ್ಲಿ ಪ್ರೇಯಸಿಯಾಗಿದ್ದ ಕತ್ರಿನಾ ಕೈಫ್, ಸಲ್ಮಾನ್ ಗೆ ಈಗ ಜಸ್ಟ್ ಫ್ರೆಂಡ್ ಅಷ್ಟೆ. ಹೀಗಿದ್ದರು ಅಭಿಮಾನಿಗಳು ಕತ್ರಿನಾ ಕೈಫ್ ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.
ಅಭಿಮಾನಿಯೊಬ್ಬರು ಕತ್ರಿನಾಗೆ ನೀವ್ಯಾಕೆ ಸಲ್ಲು ಅನ್ನು ಮದುವೆಯಾಗಬಾರದು, ಅವರನ್ನು ಆದಷ್ಟು ಬೇಗ ಮದುವೆ ಮಾಡಿಕೊಳ್ಳಿ ಎಂದು ಇನ್ಸ್ ಟ್ರಾಗ್ರಾಂ ನಲ್ಲಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕತ್ರಿನಾ ಕೈಫ್ ಹುಂ ಎಂದಷ್ಟೇ ಹೇಳಿದ್ದಾರೆ. ಮತ್ತೆ ಆ ಅಭಿಮಾನಿ ಮದುವೆ ಯಾವಾಗ ಎಂದಿದ್ದಕ್ಕೆ ಖಂಡಿತಾ ನಾನು ಮದುವೆಯಾಗುತ್ತೇನೆ. ನನಗೆ ಸರಿ ಎನಿಸುವ ಹುಡುಗ ಸಿಕ್ಕಾಗ ಎಂದಿದ್ದಾರೆ. ಬಾಲಿವುಡ್ ನಲ್ಲಿ ಯಾರ ಹೆಸರು ಯಾರ ಜೊತೆ ತಳುಕು ಹಾಕಿಕೊಂಡಿರುತ್ತೋ..? ಒಟ್ಟಾರೆ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಮಾತ್ರ ತಮ್ಮ ಮದುವೆ ವಿಚಾರವಾಗಿ ಎಲ್ಲಿಯೂ ಪ್ರತಿಕ್ರಿಯೆ ನೀಡುತ್ತಿಲ್ಲ.
Comments