ಬಿಗ್ ಬ್ರೇಕಿಂಗ್ : ಸ್ಯಾಂಡಲ್’ವುಡ್ ಸ್ಟಾರ್ ನಟನ ಹತ್ಯೆಗೆ ಸಂಚು..!! ಸುಪಾರಿ ನೀಡಿದ್ದು ಯಾರು..?
ಸ್ಯಾಂಡಲ್ವುಡ್ ನಲ್ಲಿ ಒಂದಲ್ಲ ಒಂದು ವಿಷಯಗಳು ಹಸಿ ಬಿಸಿ ಚರ್ಚೆಯಾಗುತ್ತಿವೆ… ಇದೀಗ ಇಡೀ ಸ್ಯಾಂಡಲ್ ವುಡ್ ಬೆಚ್ಚಿ ಬೀಳುವಂತ ವಿಷಯ ಬೆಳಕಿಗೆ ಬಂದಿದೆ. ಈ ಆಘಾತಕಾರಿ ಘಟನೆಯಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟರೊಬ್ಬರ ಹತ್ಯೆಗೆ ಸಂಚು ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಗೆ ಸುಪಾರಿ ನೀಡಿ ಸ್ಟಾರ್ ನಟನನ್ನು ಮುಗಿಸಲು ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
ಸ್ಟಾರ್ ನಟ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿ, ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಬಳಿಕ ತನಿಖೆ ನಡೆಸಿದ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ರೌಡಿಶೀಟರ್ ಭರತ್ ಅಲಿಯಾಸ್ ಸ್ಲಂ ಭರತ್ ಮತ್ತು ಆತನ ಸಹಚರರು ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ... ಆದರೆ, ಸ್ಲಂ ಭರತ್ ಹೆಸರಲ್ಲಿ ಬೇರೆಯವರು ಈ ಕೃತ್ಯ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ನಟನ ಸುರಕ್ಷತೆಯ ದೃಷ್ಟಿಯಿಂದ ಹೆಸರು ಬಹಿರಂಗಪಡಿಸದಿರಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ಕೂಡ ಹೇಳಲಾಗುತ್ತದೆ.. ಸಿನಿಮಾರಂಗಕ್ಕೂ ಸುಪಾರಿ ಹತ್ಯೆಗಳು ಕಾಲಿಟ್ಟಿರೋದು ನಿಜಕ್ಕೂ ವಿಪರ್ಯಾಸವೇ ಸರಿ…
Comments