ರಶ್ಮಿಕಾ ಮಂದಣ್ಣ ನನ್ನ ಮಗಳಿದ್ದಂತೆ ಎಂದ ನಟ..!! ಯಾರ್ ಗೊತ್ತಾ..?

ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.. ಆದರೆ ಇದೀಗ ರಶ್ಮಿಕಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.. ಅರೇ ಈಗ್ ಏನ್ ಮಾಡ್ಕೊಂಡ್ರಪ್ಪ ಅನ್ಕೊತ್ತಿದ್ದಿರಾ… ಮತ್ತೊಮ್ಮೆ ಒಳ್ಳೆಯ ಸುದ್ದಿಗೆ ರಶ್ಮಿಕ ಸುದ್ದಿಯಾಗಿದ್ದಾರೆ.. ರಶ್ಮಿಕಾ ಮಂದಣ್ಣ ನನ್ನ ಮಗಳಿದಂತೆ, ಮೂರು ದಶಕಗಳಿಂದ ಚಿತ್ರರಂಗದಲ್ಲಿ ಇದ್ದರೂ ಇಂತಹ ಅನುಭವ ಎಂದೂ ಆಗಿರಲಿಲ್ಲ. ಎಂದು ನಟ ಶಂಕರ್ ಅಶ್ವಥ್ ರಶ್ಮಿಕಾರವರ ಬಗ್ಗೆ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ , ದರ್ಶನ್ ಅವರ 'ಯಜಮಾನ' ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾದ ತಮ್ಮ ಅನುಭವನ್ನು ಆಗಾಗ ಹೇಳಿಕೊಳ್ಳುವ ಅವರು ಇದೀಗ ರಶ್ಮಿಕಾ ಮಂದಣ್ಣ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.
ಚಲನಚಿತ್ರರಂಗ ಪ್ರವೇಶ ಮಾಡಿ ಮೂರು ದಶಕಗಳಾದರೂ ಈ ಅನುಭವ ಎಂದು ಹೊಂದಿರಲಿಲ್ಲ. ಒಬ್ಬ ಪ್ರಖ್ಯಾತ ನಾಯಕ ನಟಿ ನನ್ನನ್ನು ತಂದೆಯಂತೆ ಕಾಣುತ್ತಿದ್ದಾರೆ. ಭುಜ ನೋವೆಂದು ಕುಳಿತಿದ್ದಾಗ ಹಿಂದಿನಿಂದ ಬಂದು ಭುಜವನ್ನು ಒತ್ತಿದ್ದು ಒಬ್ಬ ಮಗಳೇ ಸರಿ, ಇಂತಹ ಮಗಳನ್ನು ನಾನು ನಿಜ ಜೀವನದಲ್ಲಿ ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರೆ ಯಾರೂ ಇರುತ್ತಿರಲಿಲ್ಲ, ಧನ್ಯವಾದಗಳು ರಶ್ಮಿಕಾ ಮಂದಣ್ಣ. ಎಂದು ತಮ್ಮ ಸಾಲುಗಳ ಮೂಲಕ ರಶ್ಮಿಕಾ ಗುಣವನ್ನು ಕೊಂಡಾಡಿದ್ದಾರೆ. ಮೊದಲ ಬಾರಿಗೆ 'ಯಜಮಾನ' ಚಿತ್ರದ ಮೂಲಕ ಶಂಕರ್ ಅಶ್ವಥ್ ಹಾಗೂ ರಶ್ಮಿಕಾ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.. ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾವಾಗಿದ್ದು, ಮಾರ್ಚ್ 1 ರಂದು ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಹರಿಕೃಷ್ಣ ಹಾಗೂ ಪಿ ಕುಮಾರ್ ನಿರ್ದೇಶನ ಸಿನಿಮಾದಲ್ಲಿದೆ. ಚಾಲೆಂಜಿಂಗ್ ಸ್ಟಾರ್ ಸಿನಿಮಾ ಬಹು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.
Comments