ಕಿಂಗ್ ಖಾನ್ ಶಾರುಖ್ ಮಗಳ ಜೊತೆ ಡೇಟಿಂಗ್ ಹೋಗೋ ಚಾನ್ಸ್ ಅವನಿಗೆ ಮಾತ್ರ : ಅವನ್ಯಾರು ಗೊತ್ತಾ…?

ಬಾಲಿವುಡ್ ನಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಯಾವಾಗಲು ಸುದ್ದಿಯಲ್ಲಿರೋದು ಕಿಂಗ್ ಖಾನ್ ಫ್ಯಾಮಿಲಿ ಮಾತ್ರ. ಅದರಲ್ಲೂ ಶಾರುಖ್ ಮಕ್ಕಳ ಸುದ್ದಿ ಎಂದ್ರೆ ಸ್ವಲ್ಪ ಇಂಟ್ರೆಸ್ಟಿಂಗ್ ಆಗಿಯೇ ಇರುತ್ತದೆ. ಬಿ ಟೌನ್ ಸೆಲೆಬ್ರಿಟಿಗಳ ಮಕ್ಕಳ ಪೈಕಿ ಹೆಚ್ಚು ಸೌಂಡು ಮಾಡ್ತೀರೋದು ಅಂದ್ರೆ ಶಾರುಖ್ ಫೇವರೀಟ್ ಡಾಟರ್ ಅದು ಸುಹಾನಾ ಖಾನ್. ಇನ್ನೂ ಈಕೆ ಚಿತ್ರರಂಗಕ್ಕೆಕಾಲಿಟ್ಟಿಲ್ಲ, ಅದಾಗಲೇ ಯಾವ ಪರಿ ಫೇಮ್ ಆಗಿದ್ದಾರೆಂದರೇ ಕೋಟಿ ಕೋಟಿ ಅಭಿಮಾನಿಗಳ ಹೃದಯಗೆದ್ದ ಕ್ಯೂಟ್ ಚೆಲುವೆಯಾಗಿದ್ದಾರೆ....
ಅಂದಹಾಗೇ ಸುಹಾನಾಗೆ ವಯಸ್ಸು ಕೇವಲ 18 ವರ್ಷ ಮಾತ್ರ. ಆದರೆ ಒಂದಿಲ್ಲೊಂದು ವಿಚಾರಕ್ಕೆ ಸುಹಾನಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಶಾರುಖ್ ಅಭಿಮಾನಿಗಳು ಕೂಡ ಸುಹಾನಾ ಬಗ್ಗೆ ತುಂಬಾ ಇಂಟ್ರೆಸ್ಟಿಂಗ್ ಆಗಿಯೇ ಇದ್ದಾರೆ. ಅದೇನೇ ಇರಲಿ ತುಂಡುಡುಗೆ, ಫ್ಯಾಷನ್, ಸ್ಟೈಲ್, ಪ್ರವಾಸ, ಫೋಟೋಶೂಟ್ ಅಂತಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಸುಹಾನಾ ಖಾನ್ ಈ ಬಾರಿ ತನ್ನ ಮನಗೆದ್ದ ಯುವಕ ಯಾರು ಅಂತಾ ತಿಳಿಸುವುದರ ಮೂಲಕ ಮತ್ತಷ್ಟು ಅಭಿಮಾನಿಗಳ ಮನಸ್ಸು ಕೆಣಕಿದ್ದಾರೆ.ಈ ಬಾರಿ ನಾನು ಡೇಟಿಂಗ್ ಮಾಡೋದಾದ್ರೆ ಅವರ ಜೊತೆನೇ ಅಂತಾ ಹೇಳಿಕೊಂಡಿದ್ದಾರೆ.
ಸುಹಾನಾ ಜೊತೆ ಡೇಟ್ ಮಾಡೋ ಚಾನ್ಸ್ ಸಿಕ್ಕಿರೋದು ಆ ಸೆಲೆಬ್ರಿಟಿಗೆ ಮಾತ್ರ.ಅವರು ಯಾರೆಂದು ಖುದ್ದು ಸುಹಾನಾರೇ ಹೇಳಿಕೊಂಡಿದ್ದಾರೆ. ಸುಹಾನಾ ಮನ ಗೆದ್ದಿರುವ ಆ ಸೆಲೆಬ್ರಿಟಿ ಮತ್ತಾರೂ ಅಲ್ಲ ಕೊರಿಯನ್ ನಟ, ಗಾಯಕ ಹಾಗೂ ಗೀತ ರಚನೆಕಾರ ಸುಹೋ. ಬಾಯ್ ಬ್ಯಾಂಡ್ ಎಕ್ಸೊದ ಲೀಡ್ ಗಾಯಕ ಕಿಮ್ ಜುನ್ ಮೆಯಾನ್, ಸುಹೋ ಎಂದೇ ಖ್ಯಾತರಾದವರು. ಈ ಸೆಲೆಬ್ರಿಟಿಯೊಂದಿಗೆ ಡೇಟ್ ಮಾಡಲು ಸುಹಾನಾಗೆ ತುಂಬಾ ಇಷ್ಟವೆಂದು ಟೈಮ್ಸ್ ನೌಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮನದಲ್ಲಿನ ಆಸೆಯನ್ನು ಹೊರ ಹಾಕಿದ್ದಾರೆ ಕಿಂಗ್ ಖಾನ್ ಬೇಬಿ ಡಾಲ್.
Comments