ಕ್ಷಮೆ ಕೇಳಿದ ಕಲಾಸಿಪಾಳ್ಯದ ಕ್ವೀನ್ : ಕಾರಣ ಏನ್ ಗೊತ್ತಾ..?

ಸ್ಯಾಂಡಲ್'ವುಡ್ ಕ್ರೇಜಿ ಕ್ವೀನ್ ಒಂದೆರಡು ದಿಗಳ ಹಿಂದೆ ಭಾರೀ ಸುದ್ದಿಯಾಗಿದ್ದರು. ಪತ್ರಕರ್ತರ ಜೊತೆ ಸರಿಯಾಗಿ ಮಾತನಾಡದೇ ಅವರೊಂದಿಗೆ ಸಿಟ್ಟಾಗಿದ್ದಕ್ಕೆ. ಈ ವಿಚಾರಕ್ಕೆ ರಕ್ಷಿತಾ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮಾಧ್ಯಮದವರ ಜೊತೆ ಸಿಟ್ಟಾಗಿ, ರೇಗಾಡಿದ್ದೇನೆ ಎಂಬೆಲ್ಲಾ ಸುದ್ದಿ ನೋಡಿ ಬೇಸರವಾಯ್ತು. ಆದರೆ ನನಗೆ ಪರ್ಸನಲೀ ಬಹಳ ಬೇಸರವಾಗಿದೆ. ಕೆಲವು ದಿನಗಳ ಹಿಂದೆ ವೈಯಕ್ತಿಕವಾಗಿ ನಾನು ಮತ್ತು ಪ್ರೇಮ್ ಬೇಸರದಲ್ಲಿದ್ದೆವು. ಕೆಲವರು ನಮ್ಮನ್ನು ಲೇವಡಿ ಮಾಡಿದ್ದನ್ನು ಕಂಡು ಮನಸ್ಸಿಗೆ ನೋವುಂಟಾಗಿತ್ತು ಎಂದು ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದೆರು. ಮತ್ತೆ ಕೆಲವರು, ಮಾಧ್ಯಮಗಳೇ ರಕ್ಷಿತಾರನ್ನು ಬೆಳೆಸಿದ್ದು, ಅದೇ ಮಾಧ್ಯಮಗಳನ್ನು ಕಂಡರೆ ಈಗ ಗರಂ ಆಗುತ್ತಾರೆ ಎಂಬೆಲ್ಲಾ ಸುದ್ದಿ ನೋಡಿದೆ. ದಯಮಾಡಿ ಕ್ಷಮಿಸಿ. ನಾನು ಯಾರೊಂದಿಗೂ ಸಿಟ್ಟಾಗಿಲ್ಲ,ಎಂದಿಗೂ ಮಾಧ್ಯಮಗಳನ್ನು ಗೌರವಿಸುತ್ತೇನೆ ಆದ್ರೆ ಮನಸ್ಸಿಗೆ ಬೇಸರವಾಗಿ ಅವರ ಮೇಲೆ ರೇಗಾಡಿಬಿಟ್ಟೆ ಎಂದು ಕ್ಷಮೆ ಕೇಳಿದ್ದಾರೆ.
ನನ್ನ ಮತ್ತು ಪ್ರೇಮ್ ವಿಚಾರವಾಗಿ ಒಂದಷ್ಟು ಜನ ಲೇವಡಿ ಮಾಡಿದ್ದರು. ಅದಕ್ಕೆ ನಾನು ನನ್ನ ಬೇಸರವನ್ನು ಮಾಧ್ಯಮಗಳ ಮುಂದೆ ಹೊರ ಹಾಕಿದೆ. ಅದರ ಹೊರತಾಗಿ ನಾನು ಮಾಧ್ಯಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ. ಮಾಧ್ಯಮಗಳ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿ ಅದಕ್ಕೆ ನನ್ನನ್ನು ಜನ ಟ್ಯಾಗ್ ಮಾಡುತ್ತಿದ್ದಾರೆ. ಆದ್ರೆ ನನ್ನನ್ನು ಬೆಳೆಸಿದ್ದು ಕರ್ನಾಟಕದ ಜನರು ಹಾಗೂ ಜವಬ್ದಾರಿಯುತ ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮಗಳು. ಇವರೆಲ್ಲರನ್ನು ನಾನು ಸದಾ ಗೌರವಿಸುತ್ತೇನೆ. ನನ್ನ ಸ್ನೇಹಿತರಲ್ಲಿ ಬಹಳಷ್ಟು ಜನ ಪತ್ರಕರ್ತರಿದ್ದಾರೆ. ಅವರು ನನ್ನ ಕುಟುಂಬದವರಂತೆ ಹಾಗೂ ತನ್ನ ಆತ್ಮೀಯರು ಕೂಡ. ಅವರು ನನ್ನ ಆಲೋಚನೆಯನ್ನು ಹಾಗೂ ವ್ಯಕ್ತಿತ್ವವನ್ನು ಎಂದಿಗೂ ಗೌರವಿಸಿದ್ದಾರೆ ಎಂದು ಹೇಳಿದ್ದಾರೆ.ನಾನು ತುಂಬಾ ಸೆನ್ಸಿಟೀವ್. ಜನ ಹೇಗೆ ನಮ್ಮನ್ನು ಟ್ರೀಟ್ ಮಾಡ್ತಾರೋ ಹಾಗೇ ರಿಯಾಕ್ಟ್ ಮಾಡ್ತೀವಿಯಷ್ಟೆ. ನನಗೂ ಮನಸ್ಸಿದೆ, ನೋವಾಗುವುದು ಸಹಜ, ನಾನು ಯಾರನ್ನು ನೋಯಿಸುವುದಲ್ಲ. ನನಗೆ ಯಾರಾದರೂ ನೋವು ಮಾಡಿದ್ರೆ ಹೇಗೆ ಸಹಿಸಲು ಸಾಧ್ಯಹೇಳಿ. ಇಂದು-ಎಂದೆಂದಿಗೂ ನಾನು ಮಾಧ್ಯಮಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.
Comments