ವಿಧಾನಸಭೆಯಲ್ಲಿ ನನ್ನ ಅಂಗಿ ಹರಿದ್ರೂ, ನಾನು ಹೊಸ ಅಂಗಿಯನ್ನೇ ಧರಿಸುವೆ : ಸೂಪರ್ ಸ್ಟಾರ್ ಕಮಲ್ ಹೀಗೆಳಿದ್ಯಾಕೆ...?!!!

ಲೋಕಸಭೆ ಚುನಾವಣೆ ಕಾವು ಜೋರಾಗುತ್ತಿದೆ. ಚಿತ್ರರಂಗದಲ್ಲೂ ಭಾರೀ ಚರ್ಚೆಯಾಗುತ್ತಿದೆ. ಟಾಲಿವುಡ್ ನಲ್ಲಿ ಇದೀಗ ಕಮಲ್ ಹಾಸನ್ ಅವರ ಸ್ಪರ್ಧೆ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ .ಇಡೀ ಟಾಲಿವುಡ್'ನಲ್ಲೇ ಅವರ ರಾಜಕೀಯ ಎಂಟ್ರಿ ಬಗ್ಗೆ ಈಗಾಗಲೇ ಭಾರೀ ಸುದ್ದಿಯಾಗುತ್ತಿದೆ. ಯಾವ ಯಾವ ಸಿನಿ ಸ್ಟಾರ್ ಗಳು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂಬ ಸುದ್ದಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಅಂದಹಾಗೇ ತಮಿಳಿನ ಸೂಪರ್ ಸ್ಟಾರ್ ಕಮಲಹಾಸನ್ ಅವರು,ನಾನು ರಾಜಕೀಯ ಸೇರುತ್ತೇನೆ, ನಾನು ರಾಜಕೀಯ ಎಂಟ್ರಿ ಪಡೆಯಲು ತೊಡೆ ತಟ್ಟಿ ನಿಂತಿದ್ದೇನೆ ಎಂದಿರುವ ಮಾಉ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
'ಮಕ್ಕಳ್ ನೀದಿ ಮೈಯಂ' ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರು ತಾನು ರೆಡಿಯಾಗಿದ್ದೇನೆ ಎಂಬ ಹೇಳಿಕೆ ಕೊಟ್ಟಿದ್ದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಸೃಷ್ಟಿಯಾಗಿದೆ. ಸೂಪರ್ ಸ್ಟಾರ್ ರಜನೀಕಾಂತ್ ಅವರು ತಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಯ ಬೆನ್ನಲ್ಲೇ ತಮಿಳುನಾಡಿನ ಮತ್ತೊಬ್ಬ ಮಹಾನ್ ನಟ (ಕಮಲಹಾಸನ್)ರಿಂದ ಈ ಹೆಳಿಕೆ ಬಂದಿರುವುದು ವಿಶೇಷವಾಗಿದೆ.'ರಾಜಕೀಯಕ್ಕೆ ಬರುವ ನಿರೀಕ್ಷೆ ಹುಟ್ಟುಹಾಕಿ, ಜನರೊಂದಿಗೆ ಸಕ್ರಿಯವಾಗಿ ಬೆರೆತು ಅವರಲ್ಲಿ ಭರವಸೆ - ನಿರೀಕ್ಷೆಗಳನ್ನು ಹುಟ್ಟುಹಾಕಿ ಕೊನೇ ಕ್ಷಣದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಯಾರಾದರೂ ಹೇಳಿದರೆ ಆಗ ನೀವು ನಗೆಪಾಟಲಿನ ವ್ಯಕ್ತಿಯಾಗುವುದು ಖಂಡಿತ..' ಎಂದು ಕಮಲ್ ಹಾಸನ್ ಅವರು ಪರೋಕ್ಷವಾಗಿ ರಜನಿಕಾಂತ್ ಅವರಿಗೆ ಟಾಂಗ್ ನೀಡಿದರು. ಅಂದಹಾಗೇ ನಾನು ಮಾಡುವ ಕೆಲಸಗಳನ್ನು ಬೇರೆಯವರು ನಕಲು ಮಾಡತ್ತಿದ್ದಾರೆ. ಅವರಿಗೆ ನಾಚಿಕೆ ಆಗಲ್ವಾ....ನಾನು ಹರಿದ ಅಂಗಿಯನ್ನು ಧರಿಸುವುದಿಲ್ಲ, ಒಂದುವೇಳೆ ವಿಧಾನಸಭೆಯಲ್ಲಿ ನನ್ನ ಅಂಗಿ ಹರಿದರೂ ತಾನು ಹೊಸ ಅಂಗಿಯನ್ನು ತೊಟ್ಟುಕೊಳ್ಳುವುದಾಗಿ ಹೇಳುವ ಮೂಲಕ ನೌಟಂಕಿ ರಾಜಕಾರಣ ಮಾಡುತ್ತಿರುವ ಸ್ಟಾಲಿನ್ ವಿರುದ್ಧ ಕಮಲ್ ವ್ಯಂಗ್ಯವಾಡಿದ್ದಾರೆ.
Comments