ಯೋಧನ ಅಂತ್ಯ ಸಂಸ್ಕಾರಕ್ಕೆ ಅಂಬಿ ನೆಲವನ್ನೇ ದಾನ ಮಾಡಿದ ಸುಮಲತಾ...!

ಪುಲ್ವಾಮಾ ಉಗ್ರರ ದಾಳಿಗೆ ಹುತಾತ್ಮರಾದ ಮಂಡ್ಯದ ಯೋಧರ ಕುಟುಂಬಕ್ಕೆ ಈಗಾಗಲೇ ಸಾಕಷ್ಟು ಜನ ನೆರವು ನೀಡಲು ಮೂಮದು ಬರುತ್ತಿದ್ದಾರೆ. ದೇಶಕ್ಕೆ ಪ್ರಾಣ ತೆತ್ತ ಯೋಧರಿಗಾಗಿ ಸದ್ಯ ರೆಬೆಲ್ ಸ್ಟಾರ್ ಕುಟುಂಬ ಮುಂದಬಂದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುಡಿಗೆರೆ ಗ್ರಾಮದಲ್ಲಿ ವಾಸವಾಗಿರುವ ಗುರು ನಿನ್ನೆ ಉಗ್ರರ ದಾಳಿಗೆ ಬಲಿಯಾದ ವೀರಯೋಧ. ಗುರು ಮೂಲತಃ ಬಡಕುಟುಂಬದ ಯುವಕ. ಮದುವೆಯಾಗಿ ಆರು ತಿಂಗಳಷ್ಟೇ ಕಳೆದಿತ್ತಷ್ಟೆ. ಅಂತ್ಯ ಸಂಸ್ಕಾರ ನಡೆಸಲು ತುಂಡು ಭೂಮಿ ಇರದ ಕುಟುಂಬಕ್ಕೆ ಸುಮಲತಾ ಮಾಡಿದ್ದೇನು ಗೊತ್ತಾ..? ಅಂಬಿ ಹುಟ್ಟೂರಿನ ನೆಲವನ್ನೇ ದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಸದ್ಯ ನಟಿ ಸುಮಲತಾ ಅಂಬರೀಶ್ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ದಾರೆ. ಜೊತೆಗೆ ನೆರವು ನೀಡಿದ್ದಾರೆ. ಮಣ್ಣಿನ ಮಗ ಎಂದೇ ಖ್ಯಾತರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಸರನ್ನು ಉಳಿಸುವುದರ ಮೂಲಕ ಅಂಬರೀಶ್ ಅವರನ್ನು ಅಮರರನ್ನಾಗಿಸಿದ್ದಾರೆ. ಗುರು ಅಂತ್ಯ ಸಂಸ್ಕಾರಕ್ಕೆ ಅಂಬರೀಶ್ ಜಮೀನು ನೀಡುವುದಾಗಿ ಘೋಷಿಸಿದ್ದಾರೆ. ದೊಡ್ಡ ಅರಸಿನಕೆರೆ ಬಳಿ ಇರುವ ಅರ್ಧ ಎಕರೆ ಜಮೀನನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಅಂತ್ಯ ಸಂಸ್ಕಾರ ಕುರಿತಾದ ಜಮೀನಿನ ವಿಷಯದಿಂದ ನನಗೆ ತುಂಬಾ ನೋವು ಉಂಟಾಗಿದೆ. ಈ ಹಿನ್ನೆಲೆ ಅಂಬರೀಶ್ ಪರವಾಗಿ ನಮ್ಮ ಕುಟುಂಬದ ಪರವಾಗಿ ಜಮೀನು ನೀಡುತ್ತೇನೆ ಅಂತಾ ಹೇಳಿದ್ದಾರೆ.
Comments