ಹುತಾತ್ಮ ಯೋಧನ ಸಾವಿಗೆ ಕಂಬನಿ ಮಿಡಿದ ಬಾಲಕಿ :ಸೈನಿಕನ ಕುಟುಂಬಕ್ಕೆ ಆಕೆ ಮಾಡಿದ್ದೇನು ಗೊತ್ತಾ…?

ಆ ಬಾಲಕಿ ಹುತಾತ್ಮ ಸೈನಿಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಟಿವಿ ಬಿಟ್ಟು ಕದಲೇ ಇಲ್ವಂತೆ. ಆಕೆ ಸೈನಿಕರ ಅಟ್ಟಹಾಸಕ್ಕೆ ಬಲಿಯಾದ ಮಂಡ್ಯದ ಯೋಧ ಗುರು ಸಾವಿನ ಸುದ್ದಿ ವಿಡಿಯೋ ನೋಡಿ ಗಳಗಳನೇ ಅತ್ತುಬಿಟ್ಟಳಂತೆ ಆ ಪೋರಿ. ಆಕೆ ಮಾಡಿದ್ದೇನು ಗೊತ್ತಾ..?ನಿನ್ನೆ ನಡೆದ ಉಗ್ರರ ಅಟ್ಟಹಾಸದಲ್ಲಿ 44 ಯೋಧರು ಪ್ರಾಣ ಬಿಟ್ಟಿದ್ದಾರೆ. ಮಂಡ್ಯದ ಹಳ್ಳಿ ಯುವಕ ಗುರು ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ. ಮದುವೆಯಾಗಿ 7 ತಿಂಗಳಷ್ಟೇ ಕಳೆದಿದ್ದೂ ದೇಶಕ್ಕಾಗಿ ತನ್ನನ್ನು ಅರ್ಪಿಸಿಕೊಂಡಿದ್ದಾರೆ. ಬಡತನದಲ್ಲಿ ಬೆಳೆದ ಗುರು ಸೈನ್ಯಕ್ಕೆ ಸೇರುವ ಮಹಾದಾಸೆಯನ್ನು ಇಟ್ಟುಕೊಂಡಿದ್ದರು.
ಅದರಂತೇ ತಂದೆ ತಾಯಿಯನ್ನು ಒಪ್ಪಿಸಿ ಭಾರತೀಯ ಸೇನೆಯಲ್ಲಿ ಯೋಧರಾಗಿದ್ದರು. ನಿನ್ನೆ ನಡೆದ ಉಗ್ರರ ದಾಳಿಯಿಂದ ಯೋಧ ಗುರು ನೆತ್ತರು ಹರಿಸಿದ್ದಾರೆ. ಇಡೀ ದೇಶವೇ ಕಂಬನಿ ಮಿಡಿದಿದೆ. ಈಗಾಗಲೇ ಯೋಧನ ಕುಟುಂಬಕ್ಕೆ ಸರ್ಕಾರದಿಂದ ನೆರವಿನ ಹಸ್ತ ಚಾಚುತ್ತಿದ್ದರೂ ಪುಟ್ಟ ಬಾಲಕಿಯೊಬ್ಬಳು ಯೋಧನ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದಾಳೆ. ಅಂದಹಾಗೇ ಬಾಲಕಿ ತಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಬೇಡವೆಂದು, ಹುಟ್ಟುಹಬ್ಬಕ್ಕಿಟ್ಟ ಹಣವನ್ನು ಮೃತ ಯೋಧರ ಕುಟುಂಬಕ್ಕೆ ನೀಡುವ ಮೂಲಕ ಬಳ್ಳಾರಿಯ ನಾಲ್ಕನೆ ತರಗತಿ ಪೋರಿಯೊಬ್ಬಳು ಮಾದರಿಯಾಗಿದ್ದಾಳೆ.
ಪೋಷಕರ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಬಾಲಕಿ ತನು ಶ್ರೀ ಹುಟ್ಟು ಹಬ್ಬದ ದಿನದಂದು ತನ್ನ ಉಳಿತಾಯದ ಎರಡೂವರೆ ಸಾವಿರ ಹಣವನ್ನು ಜಿಲ್ಲಾಧಿಕಾರಿಗೆ ನೀಡಲು ತನುಶ್ರೀ ಮುಂದಾಗಿದ್ದಳು.ನೇರವಾಗಿ ಹಣ ಪಡೆಯದ ಜಿಲ್ಲಾಧಿಕಾರಿಗಳು ಡಿಡಿ ಮೂಲಕ ಯೋಧರ ಖಾತೆಗೆ ಜಮಾ ಮಾಡುಂತೆ ಸೂಚಿಸಿದರು. ಮಕ್ಕಳು, ಮುದುಕರೆನ್ನದೇ ನಮಗಾಗಿ ಹಗಲು-ರಾತ್ರಿ ಕಷ್ಟಪಡುತ್ತಾ, ನೋವನ್ನೆಲ್ಲಾ ನುಂಗಿ ನಮಗಾಗಿ ಕಾಯತ್ತಿರುವ ದೇಶದ ಸೈನಿಕರಿಗೆ ನಮನ ಸಲ್ಲಿಸುತ್ತಿದ್ದಾರೆ. ವೀರ ಯೋಧರ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಜೈ ಜವಾನ್, ಜೈ ಕಿಸಾನ್.
Comments