ದವಸ ಧಾನ್ಯವಷ್ಟೇ ಅಲ್ಲಾ, ಅಭಿಮಾನಿಗಳ ಕೊಟ್ಟ ಮತ್ತೊಂದು ಉಡುಗೊರೆಗೂ ಚಾಲೆಂಜಿಂಗ್ ಸ್ಟಾರ್ ದಿಲ್ ಖುಷ್ : ಏನ್ ಗೊತ್ತಾ…?

ಇವತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 42ರ ಹುಟ್ಟುಹ್ಬಬದ ಸಂಭ್ರಮ. ಒಂದು ಕಡೆ ಬೇಸರ ಮತ್ತೊಂದು ಕಡೆ ಅಭಿಮಾನಿಗಳ ಸಮಾಜ ಸೇವೆ ಕಂಡು ದರ್ಶನ್ ಸಂಭ್ರಮಿಸುತ್ತಿದ್ದಾರೆ.ನಿನ್ನೆ ಉಗ್ರರ ಅಟ್ಟಹಾಸಕ್ಕೆ ಯೋಧರು ಬಲಿಯಾಗಿದ್ದಾರೆ. ಯೋಧರ ವೀರ ಮರಣದಿಂದ ಭಾರತದಾದ್ಯಂತ ಸೂತಕದ ಛಾಯೆ ಕವಿದಿದೆ. ಇತ್ತ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಮಾಜ ಸೇವೆ ಮಾಡೋದಿಕ್ಕೆ ಈಗಾಗಲೇ ಮುಂದಾಗಿದ್ದಾರೆ. ದರ್ಶನ್ ನಿವಾಸಕ್ಕೆ ದವಸ ಧಾನ್ಯ ರೂಪದಲ್ಲಿ ಸಾಕಷ್ಟು ಆಹಾರ ಸಾಮಾಗ್ರಿಗಳನ್ನು ತಂದು ಸಂಗ್ರಹಿಸುತ್ತಿದ್ದಾರೆ.
ಅದನ್ನೆಲ್ಲಾ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ದರ್ಶನ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಭಿಮಾನಿಗಳು ನನಗೆ ಒಂದು ದೊಡ್ಡ ಜವಬ್ದಾರಿ ವನ್ನು ವಹಿಸಿದ್ದಾರೆ, ಸಮಾಜ ಸೇವೆಗೆ ನನ್ನೊಂದಿಗೆ ಅವರು ಕೂಡ ಕೈ ಜೋಡಿಸಿದ್ದಾರೆ ನನಗೆ ಖುಷಿಯಾಗುತ್ತಿದೆ ಎಂದರು. ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನಿಗೆ ವಿಶ್ ಮಾಡಲು ಸಾಗರೋಪಾದಿಯಲ್ಲಿ ಬರ್ತಿದ್ದಾರೆ. ಅಭಿಮಾನಿಗಳೊಟ್ಟಿಗೆ ಬರ್ತ್‌ಡೇ ಆಚರಣೆ ಉಡುಗೊರೆ ರೂಪದಲ್ಲಿ ಕೊಡುತ್ತಿದ್ದಾರೆ. ಅಂದಹಾಗೇ ಅವನ್ನೇಲ್ಲಾ ಸಾಕೋದಿಕ್ಕೆ ದರ್ಶನ್ ಅವರು ಫಾರ್ಮ್ ಗೆ ಕೊಟ್ಟಿದ್ದಾರೆ. ಮೊದಲೇ ದರ್ಶನ್ ಗೆ ಪ್ರಾಣಿ-ಪಕ್ಷಿಗಳ ಹುಚ್ಚು.
ಇದೇ ವೇಳೆ ಪುಲ್ವಾಮ ಟೆರರ್ ಅಟ್ಯಾಕ್‌ನಲ್ಲಿ ಹುತಾತ್ಮರಾಧ ಯೋಧರಿಗೆ ಕಂಬನಿ ಮಿಡಿದ ದರ್ಶನ್, ಮಂಡ್ಯ ಯೋಧನ ಜೊತೆಗೆ ಬೇರೆ ಯೋಧರು ಸಹ ಅಗಲಿದ್ದಾರೆ. ಮನಸ್ಸಿಗೆ ತುಂಬಾ ದುಃಖ ತಂದಿದೆ. ಇನ್ಮುಂದೆ ವ್ಯಾಲೆಂಟೈನ್ಸ್ ಡೇನ ಡಾರ್ಕ್ ಡೇ ಅಂತ ಆಚರಿಸ್ಬೇಕು ಅಂದ್ರು.ಈಗಾಗಲೇ ರೆಬೆಲ್ ಸ್ಟಾರ್ ಅಂಬಿ ನಿಧನದ ನೋವಿನಿಂದ ನಿತ್ರಾಣರಾಗಿದ್ದೇವೆ. ಒಂದೆಡೆ ಪ್ರೀತಿಯಿಂದ ಅಭಿಮಾನಿಗಳ ಹಾರೈಕೆಗಳನ್ನ ಸ್ವೀಕರಿಸಿದ್ದಾರೆ. ಕೇಕ್, ಕಟೌಟ್, ಬ್ಯಾನರ್ ಏನೂ ಇಲ್ಲದೆ ಉಡುಗೊರೆ ರೂಪದಲ್ಲಿ ಬರ್ತಿರೋ ಧವಸಧಾನ್ಯಗಳನ್ನ ಅನಾಥಾಶ್ರಮಕ್ಕೆ, ಮಠಕ್ಕೆ, ವೃದ್ಧಾಶ್ರಮಕ್ಕೆ ತಲುಪಿಸೋ ಜವಾಬ್ದಾರಿ ತಾವೇ ತೆಗೆದುಕೊಂಡಿದ್ದಾರೆ. ಈ ಬ್ಗಗೆ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿರುವ ದರ್ಶನ್ ನನಗೆ ಇದೇ ಮಹಾ ಗಿಫ್ಟ್ ಎಂದಿದ್ದಾರೆ.
Comments