ಹಿಂದೂ ಧರ್ಮದಿಂದ ಮುಸ್ಲೀಂ ಧರ್ಮಕ್ಕೆ ಮತಾಂತರನಾದ ಸ್ಟಾರ್'ನಟನ ಸಹೋದರ...?!

ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರ ಸಹೋದರ ಹಿಂದೂ ಧರ್ಮದಿಂದ ಮುಸ್ಲೀಂ ಧರ್ಮಕ್ಕೆ ಮತಾಂತರಗೊಂಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಂದ ಹಾಗೇ ತಂದೆ ಮತ್ತು ತಾಯಿಯ ನೇತೃತ್ವದಲ್ಲಿಯೇ ತನಗಿಷ್ಟವಾದ ಮುಸ್ಲೀಂ ಧರ್ಮಕ್ಕೆ ಕನ್ವರ್ಟ್ ಆಗಿದ್ದಾರೆ ಈ ಸ್ಟಾರ್ ನಟನ ತಮ್ಮ. ಅಂದಹಾಗೇ ಕಾವೇರಿ ನದಿ ನೀರು ವಿಚಾರದ ಗಲಾಟೆಯಲ್ಲಿ ಕನ್ನಡಿಗರ ಪರ ಮಾತನಾಡಿ ಮನ ಗೆದ್ದಿದ್ದ ಮತ್ತು ತಮಿಳು ಮತ್ತು ಕರ್ನಾಟಕದಾದ್ಯಂತ ದೊಡ್ಡ ಸುದ್ದಿ ಮಾಡಿದ ತಮಿಳಿನ ಖ್ಯಾತ ನಟ ಸಿಂಬು ಅಲಿಯಾಸ್ ಸಿಂಬರಸನ್ ತಮ್ಮ ಕುರಾಲರಸನ್ ಅವರೇ ಮುಸ್ಲೀಂ ಧರ್ಮಕ್ಕೆ ಮತಾಂತರವಾಗಿದ್ದಾರೆ.
ನಿನ್ನೆ ತಂದೆ ಟಿ.ರಾಜೆಂದ್ರನ್ ಹಾಗೂ ತಾಯಿ ಉಷಾ ಅವರ ನೇತೃತ್ವದಲ್ಲೇ ಮತಾಂತರ ಪ್ರಕ್ರಿಯೆ ನಡೆಯಿತು. ಕುರಾಲರಸನ್ ಅವರ ತಂದೆ ಟಿ.ರಾಜೆಂದ್ರನ್ ಖ್ಯಾತ ನಿರ್ಮಾಪಕರು. ನಟ ಹಾಗೂ ಸಂಗೀತ ಸಂಯೋಜನರಾಗಿರೋ ಕುರಾಲರಸನ್ , ಅಲೈ, ಒರು ವಸಂದ ಗೀತಂ, ಪೆಟ್ರಾಡುತ ಪಿಳ್ಳೂ ಹಾಗೂ ತಾಯ್ ತಂಗೈ ಪಾಸಮ್ ಸಿನಿಮಾಗಳಲ್ಲಿ ಬಾಲನಟರಾಗಿ ನಟಿಸಿದ್ದಾರೆ. ಸೊನ್ನಾಲ್ ತಾನ್ ಕಾದಲ ಸಿನಿಮಾದ ನಟನೆಗಾಗಿ ಎಂದು ತಮಿಳು ರಾಜ್ಯ ಪ್ರಶಸ್ತಿ(ಅತ್ಯುತ್ತಮ ಬಾಲ ನಟ) ಪಡೆದಿದ್ದಾರೆ. ಇನ್ನು ಕುರಾಲರಸನ್, 2016ರಲ್ಲಿ ಬಿಡುಗಡೆಯಾದ ಇದು ನಮ್ಮ ಆಲು ಚಿತ್ರದ ಮೂಲಕ ಸಂಗೀತ ಸಂಯೋಜಕರಾಗಿ ಎಂಟ್ರಿ ಕೊಟ್ರು.
ಅಂದಹಾಗೇ ತಾನು ಮುಸ್ಲೀಂ ಧರ್ಮದಿಂದ ಪ್ರೇರಿತನಾಗಿ ಈ ಧರ್ಮಕ್ಕೆ ಕನ್ವರ್ಟ್ ಆಗುತ್ತಿದ್ದೇನೆ ಎಂಬುದನ್ನು ತಿಳಿಸಿದ್ದಾರೆ. ಭಾರತದಲ್ಲಿ ಯಾವ ಧರ್ಮಕ್ಕೆ ಯಾರು ಬೇಕಾದರೂ ಹೋಗಬಹುದು, ಯಾವ ಧರ್ಮದಿಂದ ಯಾವ ಧರ್ಮಕ್ಕು ಮತಾಂತರಗೊಳ್ಳಬಹುದು. ಆದ್ದರಿಂದ ನಾನು ಈ ಧರ್ಮಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
Comments