ಆ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತರು ಹಿರಿಯ ನಟಿ ಲೀಲಾವತಿ…?!!!

ಸ್ಯಾಂಡಲ್’ವುಡ್ನ ಹಿರಿಯ ನಟಿ ಲೀಲಾವತಿ ಆ ಸುದ್ದಿ ತಿಳಿಯುತ್ತಿದ್ದಂತೇ ಗಳಗಳನೇ ಅತ್ತುಬಿಟ್ರು. ನನಗೆ ಆ ಸುದ್ದಿ ಕೇಳಿ ಉಸಿರಾಟವೇ ನಿಂತು ಹೋಯ್ತೇನೋ ಎನ್ನೋವ ಹಾಗೇ ಭಾಸವಾಯ್ತು ಎನ್ನುತ್ತಾರೆ ಲೀಲಾವತಿ. ಅಷ್ಟು ದುಃಖ. ನಮಗಾದ ನೋವು, ಅವರಿಗೂ ಆಗಬೇಕೆಂದರೆ ನಾವು ಅವರಿಗೆ ತಕ್ಕ ಪಾಠ ಕಲಿಸಬೇಕೆಂದರು. ಅಂದಹಾಗೇ ಲೀಲಾವತಿಯನ್ನು ಚಡಪಡಿಸುವಂತೇ ಮಾಡಿದ್ದೂ, ತಮ್ಮ ಕಂದನನ್ನೇ ಕಳೆದುಕೊಂಡಂತೇ ಅತ್ತಿದ್ದು ಹುತಾತ್ಮರಾದ ಯೋಧರ ಸಾವಿನ ಸುದ್ದಿ ಕೇಳಿ. ದೇಶವೇ ಯೋಧರ ಸಾವಿಗೆ ಮಮ್ಮಲ ಮರುಗಿದೆ. ರಾಷ್ಟ್ರಾದ್ಯಂತ ಸೂತಕದ ಛಾಯೆ ಕವಿದಿದೆ.
ಉಗ್ರರ ದಾಳಿಗೆ ವೀರ ಯೋಧರ ಹುತಾತ್ಮರಾದ ಹಿನ್ನೆಲೆಯಲ್ಲಿ ಹಿರಿಯ ನಟಿ ಲೀಲಾವತಿ ಉಗ್ರರಿಗೆ ತಕ್ಕ ಪಾಠ ಕಲಿಸಿ ಎಂದು ದುಃಖಿಸಿದರು.ಡಾ. ಲೀಲಾವತಿ ತಮ್ಮ ತೋಟದ ಮನೆಯಲ್ಲಿ ಯೋಧರಿಗೆ ಮೊಂಬತ್ತಿ ಹಚ್ಚಿ ನಮನ ಸಲ್ಲಿಸಿರುವ ವಿಡಿಯೋ ರೆಕಾರ್ಡ್ ಮಾಡಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಿಂದ ಮಾಹಿತಿ ರವಾನೆ ಮಾಡಿದ್ದಾರೆ. ಯೋಧರ ಮನೆಯವರ ಗೋಳಾಟ ನೋಡಿದರೆ ಏನು ಹೇಳಲು ಸಾಧ್ಯವಾಗುತ್ತಿಲ್ಲ. ಯೋಧ ಮಂಡ್ಯಕ್ಕೆ ಮಾತ್ರ ಗುರು ಅಲ್ಲ, ಇಡೀ ದೇಶಕ್ಕೆ ಶ್ರೇಷ್ಠ ಗುರುವಾಗಿದ್ದಾರೆ. ಅವರ ಪಾದ ಕಮಲಗಳಿಗೆ ನನ್ನ ನಮಸ್ಕಾರ ಎಂದು ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹರಿಸಿದ್ದಾರೆ.ನಾವು ಇರುವುದು ಪುಣ್ಯ ಭೂಮಿಯಲ್ಲಿ.
ಆ ಉಗ್ರರನ್ನು ಹೀಗೆ ಬಿಟ್ಟರೇ ಅದೆಷ್ಟು ಜನರನ್ನು ನಾವು ಕಳೆದುಕೊಳ್ಳ ಬೇಕಾಗುತ್ತದೆ. ನಮ್ಮವರು ನಮಗಾಗಿ ಪ್ರಾಣ ಬಿಟ್ಟಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಅವರಿಗೆ ನಾವು ಪಾಠ ಕಲಿಸಲೇ ಬೇಕು, ಇದು ನನ್ನ ಮನವಿ ಎಂದಿದ್ದಾರೆ. ಯೋಧರು ಹೋಗುವಾಗ ಸರಿಯಾದ ಭದ್ರತೆ ಇದ್ದಿದ್ದರೇ ಅವರು ಸಾಯುತ್ತಿರಲಿಲ್ಲವೇನೋ. ಅದ್ಯಾರು ಉದಾಸೀನ ಮಾಡಿದರೋ ತಿಳಿಯದು. ಅವರನ್ನು ಕಳೆದುಕೊಂಡಿದ್ದೇವೆ. ಸಂತೆಯಲ್ಲಿ ಮಗು ಕಳೆದುಕೊಂಡ ತಾಯಿಯ ಹಾಗೇ ರೋಧಿಸುತ್ತಿದ್ದೇವೆ. ನಮಗಾಗಿ ರಕ್ಷಣೆ ಕೊಡುವವರಿಗೆ ದೇವರು ಕೊಡುವ ಶಿಕ್ಷೆ ಇದೇನಾ ,ಆದರೆ ಅವರ ಪತ್ನಿ, ಕುಟುಂಬದವರು ಕೊನೆಯವರೆಗೂ ಇದನ್ನು ನೆನಪಿಸಿಕೊಂಡು ಜೀವನ ಮಾಡಬೇಕಾಗುತ್ತದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
Comments