ಸ್ಯಾಂಡಲ್’ವುಡ್ ನಟನ ಮದುವೆಯಲ್ಲಿ ಕಿಚ್ಚ ಸುದೀಪ್ ದಂಪತಿ…!

ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಮದುವೆಗಳು ಜರುಗುತ್ತಿವೆ. ಕಿರುತೆರೆ, ಬೆಳ್ಳಿತೆರೆಯ ಸ್ಟಾರ್ ಕಲಾವಿದರು ಒಬ್ಬರಿಂದೆ ಒಬ್ಬರು ನವ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ಸ್ಯಾಂಡಲ್ವುಡ್’ನ ಕಲಾವಿದರೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಕ್ರಿಕೆಟ್ ಲೀಗ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಆಡುತ್ತಿದ್ದ ಆಟಗಾರ, ನಟ ರಾಜೀವ್ ಅವರು ಬೆಂಗಳೂರು ಮೂಲದ ಯುವತಿಯೊಟ್ಟಿಗೆ ಹೊಸ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ’2018 ರ ನವೆಂಬರ್ ನಲ್ಲಿ ರೇಷ್ಮ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ರಾಜೀವ್ ನಿನ್ನೆ ಮದುವೆಯಾಗಿದ್ದಾರೆ. ಅಂದಹಾಗೇ ರಾಜೀವ್ ಮದುವೆಯಲ್ಲಿ ಸುದೀಪ್ ದಂಪತಿ ಆಗಮಿಸಿದ್ದು ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ.
ಬೆಂಗಳೂರು ಮೂಲದ ರೇಷ್ಮಾ ಅವರ ಜೊತೆ ರಾಜೀವ್ ಕಳೆದ ವರ್ಷ ನವೆಂಬರ್ 9 ರಂದು ನಗರದ ಪೈವಿಸ್ತಾ ಕನ್ವಂಷನ್ ಹಾಲ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಗೆ ಬಂದಿದ್ದ ಸುದೀಪ್ ದಂಪತಿಯ ಫೋಟೋಗಳನ್ನು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ರಾಜೀವ್ ಕಿಚ್ಚ ಸುದೀಪ್ ನೇತೃತ್ವದ ತಂಡದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದಾರೆ. ಸುದೀಪ್ ರಾಜೀವ್ ಅವರ ಸಿನಿಮಾಗಳಲ್ಲಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ಸುದೀಪ್’ಗೆ ಆತ್ಮೀಯರು. ರಾಜೀವ್ ನಿಶ್ಚಿತಾರ್ಥದ ಸಮಯದಲ್ಲಿ ಸುದೀಪ್ ಹೈದರಾಬಾದ್ ನಲ್ಲಿ ಇದ್ದ ಕಾರಣ ಬರಲು ಆಗಿರಲಿಲ್ಲ.
ಹಾಗಾಗಿ ಸಿನಿಮಾದ ಕೆಲಸಗಳ ನಡುವೆ ಕೂಡ ಸುದೀಪ್, ರಾಜೀವ್ ಮದುವೆಯಲ್ಲಿ ಪಾಲ್ಗೊಂಡಿದ್ದು ನವದಂಪತಿಗೆ ಶುಭ ಹಾರೈಸಿದ್ದಾರೆ.ನಟ ರಾಜೀವ್ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದರು. ‘ಬೆಂಗಳೂರು 560023’, ‘ಆರ್ ಎಕ್ಸ್ ಸೂರಿ’, ಹಾಗೂ ‘ಜಿಂದಗಿ’ ಸಿನಿಮಾಗಳಲ್ಲಿಯೂ ರಾಜೀವ್ ಅಭಿನಯಿಸಿದ್ದಾರೆ.ರಾಜೀವ್ ಮದುವೆಯಾಗಿರುವ ರೇಷ್ಮಾ ಅವರು ಬೆಂಗಳೂರು ಮೂಲದವರಾಗಿದ್ದು, ದಯಾನಂದ ಸಾಗರ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
Comments