ಹುಟ್ಟುಹಬ್ಬಕ್ಕೆ ನನಗೆ ಗಿಫ್ಟ್ ಬೇಡವೇ ಬೇಡ ಎಂದಿದ್ದರೂ ಚಾಲೆಂಜಿಂಗ್ ಸ್ಟಾರ್'ಗೆ ಸಿಕ್ತು ಭರ್ಜರಿ ಉಡುಗೊರೆ ….?!!!
ಸ್ಯಾಂಡಲ್ವುಡ್’ನ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಡಿ ಬಾಸ್ ಖ್ಯಾತಿಯ ದರ್ಶನ್ ತಾನು ಈ ಬಾರಿ ಹುಟ್ಟುಹಬ್ಬ ಮಾಡಿಕೊಳ್ಳುವುದಿಲ್ಲ, ಪ್ಲೀಸ್ ನನ್ನೊಂದಿಗೆ ನೀವು ಸಹಕರಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೇ ಇಂದು ಅವರು ಯಾವುದೇ ಆಡಂಬರ ವಿಲ್ಲದೇ, ಕೇಕ್ ಕಟ್ ಮಾಡದೇ ಸರಳವಾಗಿ ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ. ಕೇಕ್, ಗಿಫ್ಟ್, ಹೂವಿನ ಹಾರ ರೂಪದಲ್ಲಿ ಕೊಡಬೇಕೆಂದಿರುವ ವಸ್ತುಗಳನ್ನು ದವಸ ಧಾನ್ಯ ರೂಪದಲ್ಲಿ ತಂದುಕೊಡಿ, ಆ ಮೂಲಕ ಸಮಾಜ ಸೇವೆ ಮಾಡೋಣ ಎಂದಿದ್ದರು.
ಅದರಂತೇ ಅಅಭಿಮಾನಿಗಳು ಕೂಡ ದರ್ಶನ್ ಮಾತಿಗೆ ಓಗೊಟ್ಟು ಈಗಾಗಲೇ ಅವರ ನಿವಾಸಕ್ಕೆ ಆಹಾರ ಸಾಮಾಗ್ರಿಗಳನ್ನು ತಂದಿದ್ದಾರೆ.ಇನ್ನು ಅವುಗಳನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಇಂದು ರವಾನಿಸಲಾಗುತ್ತದೆ.ಇಂದು ದೇಶವೇ ದೇಶ ಕಂಬನಿ ಮಿಡಿಯುತ್ತಿದೆ. ವೀರ ಯೋಧರ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ.ಇಂತಹ ಸೂತಕದ ಛಾಯೆಯಲ್ಲಿ ನಾನು ಹುಟ್ಟುಹಬ್ಬ ಮಾಡಿಕೊಳ್ಳುವುದಿಲ್ಲವೆಂದಿದ್ದರು. ಆದಾಗ್ಯೂ ದರ್ಶನ್ ಗೆ ಸ್ಯಾಂಡಲ್ ವುಡ್ ಸ್ಟಾರ್ ಒಬ್ಬರಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಇದೇ ವೇಳೆ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ದರ್ಶನ್ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ಭರ್ಜರಿ ಉಡುಗೊರೆ ನೀಡಿದ್ದಾರೆ. ದರ್ಶನ್ ಅಭಿನಯದಲ್ಲಿ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರಲಿರುವ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.ಚಿತ್ರದುರ್ಗದ ಪಾಳೇಗಾರ ಮದಕರಿ ನಾಯಕನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದು, ಸಾಹಿತಿ ಬಿ.ಎಲ್. ವೇಣು ಕತೆ ಬರೆದಿದ್ದಾರೆ, ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Comments