ಅಕುಲ್ ಬಾಲಾಜಿ ವಿರುದ್ದ ದೂರು ಕೊಡಲು ಮುಂದಾದ ಬಿಗ್’ಬಾಸ್ ಸ್ಪರ್ಧಿ..!! ಕಾರಣ ಏನ್ ಗೊತ್ತಾ..?

ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಅತೀ ದೊಡ್ಡ ರಿಯಾಲಿಟಿ ಷೋ ಎನ್ನುವುದು ಕೂಡ ಎಲ್ಲರಿಗೂ ಗೊತ್ತು.. ಈಗಾಗಲೇ 6 ಆವೃತ್ತಿಗಳನ್ನು ಮುಗಿಸಿದೆ.. ಆದರೆ 6 ಆವೃತ್ತಿ ಸುದ್ದಿಯಾದಷ್ಟು ಬೇರೆ ಯಾವ ಆವೃತ್ತಿನು ಸುದ್ದಿಯಾಗಲಿಲ್ಲ.. ಮೊನ್ನೆ ಮೊನ್ನೆಯಷ್ಟೆ ಕವಿತಾ ಆಂಡಿ ವಿರುದ್ದ ಮಹಿಳಾ ಆಯೋಗಕ್ಕೆ ದೂರನ್ನು ನೀಡಿದ್ದರು.. ಆದರೆ ಈದೀಗ ಮತ್ತೊಬ್ಬ ಸ್ಪರ್ಧಿ ದೂರು ನೀಡಲು ಮುಂದಾಗಿದ್ದಾರೆ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಕರ್ನಾಟಕದ ವೀಕ್ಷಕರ ಗಮನ ಸೆಳೆದ ಸ್ಪರ್ಧಿ ಆದಮ್ ಪಾಶಾ. ಯಾಕಂದ್ರೆ, 'ಬಿಗ್ ಬಾಸ್' ಕನ್ನಡ ಇತಿಹಾಸದಲ್ಲಿ ಬಿಗ್ ಬಾಸ್ ಮನೆ ಸೇರಿದ ಮೊದಲ ತೃತಿಯಲಿಂಗಿ ಸಮುದಾಯದವರು ಈ ಆದಮ್ ಪಾಶಾ.
ಹಿಂದೆ ಅನುಭವಿಸಿದ ಕಷ್ಟಗಳು, ಅವಮಾನವನ್ನೆಲ್ಲ 'ಬಿಗ್ ಬಾಸ್' ಮನೆಯಲ್ಲಿ ಹೊರಹಾಕಿ ವೀಕ್ಷಕರ ಮನ ಗೆದ್ದಿದ್ದರೂ, ಕೂಡ ಆದಮ್ ಹೆಚ್ಚು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಲಿಲ್ಲ.. 'ಬಿಗ್ ಬಾಸ್ ಕನ್ನಡ-6' ಮುಗಿದ್ಮೇಲೆ ಆದಮ್ ಪಾಶಾ ಕಾಣಿಸಿಕೊಂಡಿದ್ದು 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ. ಸಾಲ್ಸಾ ಸೇರಿದಂತೆ ಹಲವು ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವ ಆದಮ್ ಪಾಶಾಗೆ 'ತಕಧಿಮಿತ' ವೇದಿಕೆ ಹೇಳಿ ಮಾಡಿಸಿದ್ದು. ಆದ್ರೀಗ ನೋಡಿದರೆ ಮನಸ್ಸಿಗೆ ಬೇಸರ ಮಾಡಿಕೊಂಡು ಅದೇ ಡ್ಯಾನ್ಸ್ ರಿಯಾಲಿಟಿ ಶೋದಿಂದ ಆದಮ್ ಪಾಶಾ ಹೊರ ನಡೆದಿದ್ದಾರೆ. 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರ್ದೇಶಕಿ ಶ್ರದ್ಧಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಆದಮ್ ಪಾಶಾ ಮುಂದಾಗಿದ್ದಾರೆ.
'ತಕಧಿಮಿತ' ವೇದಿಕೆ ಮೇಲೆ ಆದಮ್ ಪಾಶಾಗೆ ನಿರೂಪಕ ಅಕುಲ್ ಬಾಲಾಜಿಯಿಂದ ಅವಮಾನ ಆಗಿದ್ಯಂತೆ. ಸ್ತ್ರೀಲಿಂಗ, ಪುಲ್ಲಿಂಗ ಅಂತೆಲ್ಲಾ ಆದಮ್ ಪಾಶಾ ಬಗ್ಗೆ ಅಕುಲ್ ಬಾಲಾಜಿ ಕೀಳಾಗಿ ಮಾತನಾಡಿದ್ದರಂತೆ. ಇದರಿಂದ ಬೇಸರಗೊಂಡ ಆದಮ್ ಪಾಶಾ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ನಿರ್ಧರಿಸಿದ್ದಾರೆ. ಒಟ್ಟಾರೆ ಬಿಗ್ ಬಾಸ್ ನಲ್ಲಿ ಇದ್ದ ಸ್ಪರ್ಧಿಗಳು ಈ ರೀತಿ ಮಾಡುತ್ತಿರುವುದನ್ನು ನೋಡಿದರೆ ಮುಮದಿನ ಬಾರಿ ಬಿಗ್ ಬಾಸ್ ಗೆ ಹೋಗೋರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಅನಿಸುತ್ತದೆ..
Comments