ಚಿತ್ರರಂಗಕ್ಕೆ ಐರಲ್ ಲೆಗ್ ಎನ್ನುತ್ತಿದ್ದ ಡಾಲಿಗೆ ಅದೃಷ್ಟವೋ ಅದೃಷ್ಟೋ : ಯಾಕೆ ಗೊತ್ತಾ..?

ಡಾಲಿ ಧನಂಜಯ ಫಸ್ಟ್ ಟೈಮ್ ಚಿತ್ರರಂಗಕ್ಕೆ ಬಂದಾಗ ಫ್ಲಾಪ್ ಹೀರೋ ಎಂಬ ಪಟ್ಟ ಕಟ್ಟಿದ್ದರು. ಕೆಲವರು ನತದೃಷ್ಟ ಎಂದು ಹೇಳುತ್ತಿದ್ದಾರೆ. ಈತನದ್ದು ಐರನ್ ಲೆಗ್ ಎನ್ನುತ್ತಿದ್ದವರು ಡಾಲಿ ಅವರ ಆ ಅದೃಷ್ಟ ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ.ಡಾಲಿ ಧನಂಜಯ ಸ್ಯಾಂಡಲ್’ವುಡ್ ನಲ್ಲಿ ಭರವಸೆಯ ನಾಯಕನಾಗಿ ಬೆಳೆಯುತ್ತಿದ್ದಾರೆ. ಟಗರು ಕ್ಲಿಕ್ ನಂತರ ಬಹು ನಿರೀಕ್ಷಿತ ಸಿನಿಮಾ ಭೈರವಗೀತಾ ಬಿಡುಗಡೆಗೆ ರೆಡಿಯಾಗಬೇಕಿದೆ. ಈ ಮಧ್ಯೆ ಪರಭಾಷೆಗಳಲ್ಲೂ ಧನಂಜಯ ಗೆ ಆಫರ್ ಗಳು ಸಿಗುತ್ತಿವೆ. ಅಂದಹಾಗೇ ಡಬಲ್ ಶೇಡ್ನಲ್ಲಿ ಕ್ಲಿಕ್ ಆಗುತ್ತಿರುವ ಡಾಲಿ ಕೆಲ ಸಿನಿಮಾಗಲಲ್ಲಿ ಹೀರೋ ಆಗಿ ನಟಿಸುತ್ತಿದ್ದರೇ, ಮತ್ತೆ ಕಲವು ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ಆ್ಯಕ್ಷನ್ ಪ್ರಿನ್ಸ್ ಧೃವಾ ಸರ್ಜಾ ಅಭಿನಯದ ಪೊಗರು ಸಿನಿಮಾ ಟೀಸರ್’ನಿಂದಲೇ ಸಾಕಷ್ಟು ಸದ್ದು ಮಾಡಿದೆ. ನಂದ ಕಿಶೋರ್ ಹಾಗೂ ಧ್ರವಾ ಸರ್ಜಾ ಕಾಂಬಿನೇಶನ್‌ನ ಈ ಸಿನಿಮಾ, ಈ ವರ್ಷದ ಬಹು ನಿರೀಕ್ಷಿತ ಸಿನಿಮಾದ ಪಟ್ಟಿಯಲ್ಲಿದೆ. ಪೊಗರು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವ ಬೆನ್ನಲ್ಲೇ ಚಿತ್ರತಂಡದಿಂದ ಒಂದು ಹೊಸ ಸುದ್ದಿ ಹೊರಬಿದ್ದಿದೆ.ಈಗಾಗಲೇ ಒಂದಷ್ಟು ಸ್ಟಾರ್ ಸಿನಿಮಾಗಳಿಗೆ ಬುಕ್ ಆಗಿರುವ ಡಾಲಿ ನಟನೆ ಕಂಡು ಈಗಾಗಲೇ ತೆಲಗು ಮತ್ತು ತಮಿಳು ನಿರ್ದೇಶಕರು ಫಿದಾ ಆಗಿದ್ದಾರೆ. ಧನಂಜಯ ಮೇಲೆ ಬಂಡವಾಳ ಹೂಡೋಕೆ ಈಗಾಗಲೇ ಸ್ಟಾರ್ ನಿರ್ದೇಶಕರು ರೆಡಿಯಾಗಿದ್ದಾರೆ.ಅಂದ್ಹಾಗೇ, ಧನಂಜಯ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ವಿಲನ್ ರೋಲ್ ಮಾಡೋದು ಈಗಾಗಲೇ ಕನ್ಫರ್ಮ್ ಆಗಿದೆ.
ಯಜಮಾನ ಚಿತ್ರದಲ್ಲಿ ದರ್ಶನ್ ಎದುರು ಮಿಠಾಯಿ ಸೀನನ ಪಾತ್ರದಲ್ಲಿ ಗುಟುರು ಹಾಕೋ ಈ ಡಾಲಿ, ಈಗ ಪೊಗರು ಚಿತ್ರದಲ್ಲೂ ಧ್ರುವಾ ಸರ್ಜಾ ಅಪೋಸಿಟ್ ಅಬ್ಬರಿಸೋದು ಕನ್ಫರ್ಮ್ ಆಗಿದೆ. ಟಗರು ಸಿನಿಮಾದಿಂದ ನೆಗೆಟೀವ್ ಪಾತ್ರಗಳಿಗೆ ಒಗ್ಗಿಕೊಂಡ ಧನಂಜಯ್ ಈಗ ಅಂತಹದ್ದೇ ಒಂದು ಪಾತ್ರವನ್ನ ಒಪ್ಪಿಕೊಂಡಿದ್ದಾರೆ. ಪೊಗರು ಸಿನಿಮಾದಲ್ಲಿ ಧನಂಜಯ್, ಜಗಪತಿ ಬಾಬು ಮಗನ ಪಾತ್ರದಲ್ಲಿ ನಟಿಸ್ತಾ ಇದ್ದು, ಸಿನಿಮಾಕ್ಕೆ ನಂದ ಕಿಶೋರ್ ಆ್ಯಕ್ಷನ್ಕಟ್ ಹೇಳ್ತಿದ್ದಾರೆ.
Comments