ಅಮರ್ ಟೀಸರ್ ನೋಡಿ ಅಪ್ಪು, ಅಂಬಿ ಪುತ್ರನಿಗೆ ಕಮೆಂಟ್ ಮಾಡಿದ್ದೇನು ಗೊತ್ತಾ..?!!!

ಅಂದಹಾಗೇ ಸ್ಯಾಂಡಲ್’ವುಡ್’ನ ಜೂನಿಯರ್ ರೆಬೆಲ್ ಅಭಿಷೇಕ್ ಅಂಬರೀಶ್ ಅವರ ಬಹು ನಿರೀಕ್ಷಿತ ಸಿನಿಮಾ ಅಮರ್ ಇದೀಗ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡ್ತಾ ಇದೆ. ಈಗಾಗಲೇ ಸಿನಿಮಾ ಟೀಸರ್ ನೋಡಿದ ಸಿನಿಮಾ ಸೀನಿಯರ್ಸ್ ಅಭಿಪ್ರಾಯ ತಿಳಿಸಿದ್ದಾರೆ. ಸಿನಿಮಾ ಟೀಸರ್ ಲಾಂಚ್ ಆಗ್ತಾ ಇದೆ ಎನ್ನೋವಾಗಲೇ ಅನೇಕ ಮಂದಿ ವಿಶ್ ಮಾಡಿದ್ರು. ಅಂಬಿ ಹೋದ ಮೇಲೂ ಅಂಬಿ ಪುತ್ರನಿಗೆ ಅದೇ ಪ್ರೀತಿ, ವಾತ್ಸಲ್ಯ ತೋರಿಸುವ ಸಿನಿಮಾ ಕಲಾವಿದರು ಅಂಬಿ ಪುತ್ರನ ಆ್ಯಕ್ಟ್ ಗೆ ಏನು ಕಮೆಂಟ್ ಮಾಡಿದ್ದಾರೆ ಗೊತ್ತಾ,,,?
ಒಂದು ಕಡೆ ಅಭಿಮಾನಿಗಳು ಅಂಬಿ ಸ್ಥಾನವನ್ನು ಅಭಿ ತುಂಬುತ್ತಾರೆ, ಟೀಸರ್ ನಲ್ಲೇ ಧೂಳೆಬ್ಬಿಸಿರುವ ಅಭಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸ್ಟಾರ್ ನಟರೆಲ್ಲಾ ಅಭಿ ಟೀಸರ್ ಬಗ್ಗೆ ಭಾರೀ ಕುತೂಹಲ ಇಟ್ಟುಕೊಂಡಿದ್ದರು. ಅಂಬಿಗೆ ಪರ್ಸನಲ್ ಆಗಿಯೇ ಕೆಲವರು ಅಡ್ವೈಸ್ ಮಾಡ್ತಾ ಇದ್ದರೇ, ಇನ್ನಷ್ಟು ಕಲಾವಿದರು ಭೇಷ್’ಗಿರಿ ಕೊಟ್ಟಿದ್ದಾರೆ. ಇನ್ನು ಈ ಮಧ್ಯೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯುಲ್ಲಿ ಟೀಸರ್ ಹಂಚಿಕೊಂಡಿದ್ದಾರೆ. ಲುಕ್ಕಿಂಗ್ ಗ್ರೇಟ್ ಅಭಿಷೇಕ್, ಆಲ್ ದಿ ಬೆಸ್ಟ್ ಯೂ ಎಂದು ಶುಭಾಶಯ ತಿಳಿಸಿದ್ದಾರೆ.ಈಗಾಗಲೇ ಸ್ಟಾರ್ ಕಲಾವಿದರು ಬೆಸ್ಟ್ ಆಫ್ ಲಕ್ ಹೇಳುತ್ತಾ, ಅಂಬಿ ಪುತ್ರನಿಗೆ ಸಕ್ಸ’ಸ್ ಫುಲ್ ನಾಯಕ ಕಮೆಂಟ್ ಹಾಕುತ್ತಿದ್ದಾರೆ. ಅಂಬಿ ಈ ಮುಂಚೆ ಅಮರ್ ಸಿನಿಮಾದ ತಮ್ಮ ಪುತ್ರನ ಆ್ಯಕ್ಟಿಂಗ್ ವಿಡಿಯೋಗಳನ್ನು ತರಿಸಿ ನೋಡಿದ್ದರಂತೆ. ಸುಮ್ಮನೇ ಕಮೆಂಟ್ ಮಾಡದೇ ಉಳಿದ ನಾಯಕರ ಬಗ್ಗೆ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಇನ್ನೂ ಕಲಿಬೇಕು ಅವನ ಮುಂದೆ ಚೆನ್ನಾಗಿ ಮಾಡಿದ್ಯಾ ಅನ್ನೋ ಬದಲು ಇನ್ನೂ ಚೆನ್ನಾಗಿ ಮಾಡು ಎಂದೆ ಎಂದಿದ್ದರು. ಒಟ್ಟಾರೆ ಅಪ್ಪನ ಪ್ಲೇಸ್ ತುಂಬೋಕೆ ಅಮರ್ ಮೂಲಕ ಅಭಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾಗಿದೆ.
Comments