ರಾಕಿಂಗ್ ದಂಪತಿಯ ಮಗಳಿಗೆ ನಾಳೆ ಸಿಗಲಿದೆ ಭರ್ಜರಿ ಗಿಫ್ಟ್..!! ಏನ್ ಗೊತ್ತಾ..?

15 Feb 2019 8:53 AM | Entertainment
1366 Report

ರಾಕಿಂಗ್ ಸ್ಟಾರ್ ದಂಪತಿ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.. ರಾಕಿ  ಹೆಂಡತಿ ಮಗು ಅಂತಾ ಫುಲ್ ಎಂಜಾಯ್ ಮಾಡುತ್ತಿದ್ದಾರೆ…ಇದೀಗ  ಅವರ ಫ್ಯಾಮಿಲಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ರೆಬಲ್ ಸ್ಟಾರ್ ಅಂಬರೀಶ್  ಹಾಗೂ ರಾಕಿಂಗ್ ಸ್ಟಾರ್ ಯಶ್ ತುಂಬಾ ಆಪ್ತರಾಗಿದ್ದರು…ಅವರ ನಡುವೆ ಒಂಥರಾ ಅವಿನಾಭಾವ ಸಂಬಂಧವಿದೆ.. ಇದೀಗ ಯಶ್ ದಂಪತಿಯ ಮುದ್ದಾದ ಮಗುವಿಗೆ ರೆಬಲ್ ಸ್ಟಾರ್ ಅಂಬರೀಶ್ ಗಿಫ್ಟ್ ಒಂದನ್ನು ನೀಡಿದ್ದಾರೆ.. ರಾಧಿಕ ಪಂಡಿತ್ ಅವರ ಸೀಮಂತದ ಸಂದರ್ಭದಲ್ಲಿ ಆ ಮಗುವಿಗೆ ಸುಮಾರು 1.50 ಲಕ್ಷದ ಮೌಲ್ಯದ ತೊಟ್ಟಿಲು ಆರ್ಡರ್ ಮಾಡಿದ್ದಾರೆ..ತೊಟ್ಟಿಲು ಸಿದ್ದವಾಗಿರುವ ಬಗ್ಗೆ ಅಂಗಡಿಯವರು ಸುಮಲತಾ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಈ ವಿಷಯ ಕೇಳಿ ಸುಮಲತಾ ಅವರಿಗೆ ಅಚ್ಚರಿಯಾಗಿದೆ.. ನಾವ್ಯಾರೂ ತೊಟ್ಟಿಲನ್ನು ಆರ್ಡರ್ ಕೊಟ್ಟಿಲ್ಲ.. ಎಂದು ಶಾಕ್ ಆಗಿದ್ದಾರೆ... ಅದು ಅಂಬಿಯೇ ಖುದ್ದು  ಆರ್ಡರ್ ಕೊಟ್ಟು ಮಾಡಿಸಿದ್ದ ತೊಟ್ಟಿಲಾಗಿತ್ತು... ಅದಕ್ಕಿಂತ ಹೆಚ್ಚಾಗಿ ಈ ಆರ್ಡರ್ ಕೊಟ್ಟಿದ್ದು ಅಂಬರೀಶ್ ಎನ್ನುವುದು ಆ ಅಂಗಡಿ ಮಾಲೀಕರಿಗೆ ಗೊತ್ತಿರಲಿಲ್ಲ. ಸಂಪರ್ಕಕ್ಕಾಗಿ ಅಂಬರೀಶ್ ತಮ್ಮ ಪತ್ನಿ ಸುಮಲತಾ ಮೊಬೈಲ್ ನಂಬರ್ ಮಾಲೀಕನಿಗೆ ಕೊಟ್ಟಿದ್ದರಂತೆ.. ಇದನ್ನೆ ಕಾಕತಾಳೀಯ ಅನ್ನೋದು ಅನ್ಸುತ್ತೆ… ಯಾವಾಗ ಸುಮಲತಾಗೆ ಈ ವಿಷಯ ಗೊತ್ತಾಯಿತೋ, ಅವರು ಯಶ್‍ಗೆ ಫೋನ್ ಮಾಡಿ ನಿಮ್ಮ ಮಗಳು ಅದೃಷ್ಟ ಮಾಡಿದ್ದಾಳೆ. ಅವಳಿಗಾಗಿ ಸ್ವರ್ಗದಿಂದ ಗಿಫ್ಟ್ ಬಂದಿದೆ ಎಂದು ಹೇಳಿ ದುಬಾರಿ ತೊಟ್ಟಿಲು ಹಸ್ತಾಂತಿರಿಸುವುದಾಗಿ ಹೇಳಿದ್ದಾರೆ…ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿಯ ಮಗುವಿಗೆ ರೆಬಲ್ ಸ್ಟಾರ್  ಕೊಟ್ಟ ಉಡುಗೊರೆ ನಾಳೆ ತಲುಪಲಿದೆ. ಆದರೆ, ಉಡುಗೊರೆ ತಲುಪುವ ಮೊದಲೇ ಅಂಬರೀಶ್ ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆಶಯದಂತೆ ತೊಟ್ಟಿಲು ನಿರ್ಮಾಣವಾಗಿದ್ದು, ಯಶ್ ಮತ್ತು ರಾಧಿಕಾ ದಂಪತಿಗೆ ಸುಮಲತಾ ಅಂಬರೀಶ್ ಉಡುಗೊರೆಯಾಗಿ ನೀಡಲಿದ್ದಾರೆ. ಕಿತ್ತೂರು ಸಂಸ್ಥಾನದ ಗುರು ಪರಂಪರೆ ಮಠ ಕಲ್ಮಠದಿಂದ ಫೆಬ್ರವರಿ 16 ರಂದು ಸಂಜೆ 4 ಗಂಟೆಗೆ ಕಲಾತ್ಮಕ ತೊಟ್ಟಿಲನ್ನು ಬೀಳ್ಕೊಡಲಿದ್ದು, ಬೆಂಗಳೂರಿಗೆ ತಲುಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments