ಕಾರೊಳಗೆ ರೊಮಾನ್ಸ್ ಮಾಡುತ್ತಿದ್ದ ಸ್ಟಾರ್ ನಟಿಯ ಫೋಟೋಗಳು ವೈರಲ್…!

ಸಿನಿಮಾದಲ್ಲಿ ಗಾಸಿಪ್, ಲವ್’ ಡೇಟಿಂಗ್ ಇದೆಲ್ಲಾ ಕಾಮನ್ ಆಗಿ ಬಿಟ್ಟಿದೆ. ಬಣ್ಣದ ಲೋಕದಲ್ಲಿ ಕದ್ದು ಮುಚ್ಚಿ ಓಡಾಡೋದು, ಖಾಸಗೀ ಪೋಟೋಗಳು ವೈರಲ್ ಆಆಗುವುದು ತೀರಾ ಕಾಮನ್ ಆಗಿಬಿಟ್ಟಿದೆ. ಬಿಟೌನ್ ನ ಸ್ಟಾರ್ ಜೋಡಿಯೊಂದು ಕಾರೊಳಗೆ ರೊಮ್ಯಾನ್ಸ್ ಮಾಡುತ್ತಿದ್ದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರು ಗಲ್ಲಿ ಬಾಯ್ ಜೊತೆ ರೊಮ್ಯಾನ್ಸ್ ನಲ್ಲಿದ್ದ ಕ್ಷಣಗಳನ್ನು ಯಾರೋ ಸೆರೆ ಹಿಡಿದಿರುವ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ. ರಣವೀರ್ ಸಿಂಗ್ ಜೊತೆ ಕಾರಿನಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ ಡಿಪ್ಪಿ. ರಣವೀರ್ ಸಿಂಗ್ ಹಾಗೂ ಅಲಿಯಾ ಭಟ್ ನಟನೆಯ ಗಲ್ಲಿ ಬಾಯ್ ಚಿತ್ರದ ಪ್ರೀಮಿಯರ್ ಶೋ ವನ್ನು ಬಾಲಿವುಡ್ ಕಲಾವಿದರಿಗಾಗಿ ಆಯೋಜಿಸಲಾಗಿತ್ತು.
ಈ ವೇಳೆ ರಣ್‍ವೀರ್ ತಮ್ಮ ಪತ್ನಿ ದೀಪಿಕಾ ಜೊತೆ ಆಗಮಿಸಿದರೆ, ಅಲಿಯಾ ತಮ್ಮ ಗೆಳೆಯ ರಣ್‍ಬೀರ್ ಕಪೂರ್ ಜೊತೆ ಆಗಮಿಸಿದ್ದಾರೆ. ಗಲ್ಲಿ ಬಾಯ್ ಚಿತ್ರ ನೋಡಿ ಹಿಂತಿರುಗುವಾಗ ರಣ್‍ವೀರ್ ಹಾಗೂ ದೀಪಿಕಾ ಕಾರಿನಲ್ಲಿ ತಬ್ಬಿಕೊಂಡು ಕಿಸ್ ಮಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆ ಆಗಿದೆ.ಸದ್ಯ ಅವರಿಬ್ಬರು ಕಾರಿನಲ್ಲಿ ಜೊತೆಯಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಣ್‍ವೀರ್ ಹಾಗೂ ದೀಪಿಕಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಡ್ರೈವರ್ ಕಾರು ಚಲಾಯಿಸುತ್ತಿದ್ದರೆ, ಹಿಂದೆ ಕುಳಿತಿದ್ದ ರಣ್‍ವೀರ್ ಹಾಗೂ ದೀಪಿಕಾ ಮಾಧ್ಯಮದ ಕ್ಯಾಮೆರಾಗಳನ್ನು ನೋಡಿ ನಗುತ್ತಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಿನಕ್ಕೊಂದು ಸುದ್ದಿಯಲ್ಲಿರುತ್ತಾರೆ. ರಣವೀರ್ ಅವರು ಇತ್ತೀಚಿಗೆ ಸಿನಿಮಾ ಪ್ರಮೊಷನ್ ವೇಳೆ ಅಭಿಮಾನಿಗಳ ಮೇಲೆ ಸ್ಕೈ ಮಾಡಿ ಸುದ್ದಿಯಾಗಿದ್ದರು. ದೀಪಿಕಾ ಪಡುಕೋಣೆಗೆ ಅಭಿಮಾನಿಗಳಿಂದ ಗಂಡನಿಗೆ ಬುದ್ಧಿಮಾತು ಹೇಳಿ ಎಂಬ ಕಮೆಂಟ್ ಕೂಡ ಬಂತು. ಡಿಪ್ಪಿ –ರಣವೀರ್ ರೆಸ್ಟೋರೆಂಟ್ ಗೆ ಹೋಗಿದ್ದು ಬಂದಿದ್ದು ಕೂಡ ದೊಡ್ಡ ಮಟ್ಟದ ಸುದ್ದಿಯಾಗಿತ್ತು.
Comments