ಪ್ರೇಮಿಗಳ ದಿನದಂದೇ ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ : ಯಾಕೆ ಗೊತ್ತಾ..?
ಸ್ಯಾಂಡಲ್ವುಡ್ನಲ್ಲಿ ಪ್ರೇಮಿಗಳ ದಿನ ಬಂದ್ರೆ ಥಟ್ಟನೇ ಸ್ಟಾರ್ ಒಬ್ಬರ ನೆನಪಾಗುತ್ತದೆ. ಪ್ರೀತಿ, ಪ್ರೇಮಕ್ಕೆ ಸಂಬಂಧಿಸಿದಂತೇ ಅನೇಕ ಸಿನಿಮಾಗಳನ್ನು ಕೊಟ್ಟ ಕಲಾವಿದ. ಪ್ರೀತಿಯ ರಣಧೀರ ಕ್ರೇಜಿಸ್ಟಾರ್ ರವೀಚಂದ್ರನ್ ಅಭಿಮಾನಿಗಳಿಗೆ ಇಂದು ಅಂದ್ರೆ ಪ್ರೇಮಿಗಳ ದಿನದಂದು ಡಬಲ್ ಸಂಭ್ರಮವಂತೆ. ಫೆ.14 ರಂದು ವ್ಯಾಲೆಂಟೇನ್ಸ್ ಡೇ ಅಂದೇ ಕ್ರೇಜಿಸ್ಟಾರ್ ದಂಪತಿಯ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇಂದು ರವೀಚಂದ್ರನ್ ಮತ್ತು ಮತ್ತು ಸುಮತಿ ಮದುವೆಯಾದ ದಿನಹೀಗಾಗಿ, 'ವ್ಯಾಲೆಂಟೈನ್ಸ್ ಡೇ' ಬಂದ್ರೆ, ರವಿಮಾಮನ ಅಭಿಮಾನಿಗಳಿಗೆ ಡಬಲ್ ಸಂಭ್ರಮ.1986 ಫೆ. 14 ರಂದು ರವೀಚಂದ್ರನ್ ಸುಮತಿಯೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ 13 ವರ್ಷಗಳು ಬಾಳ ದಾರಿಯಲ್ಲಿ ಯಶಸ್ವಿಯಾಗಿ ಪೂರೈಸಿದ ಜೋಡಿ ಇಂದಿಗೂ ಖುಷಿ ಖುಷಿಯಾಗಿಯೇ ಇದ್ದಾರೆ. ಮೂರು ಮಕ್ಕಳ ತಂದೆಯಾಗಿರುವ ರವೀಚಂದ್ರನ್ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶನ, ನಟನೆಯಲ್ಲಿ ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ.ರವೀಚಂದ್ರನ್ ಅವರು ಸ್ಯಾಂಡಲ್’ವುಡ್ ಸ್ಟಾರ್ ಗಳ ಜೊತೆ ಆ್ಯಕ್ಟ್ ಮಾಡ್ತಿದ್ದಾರೆ. ಮಕ್ಕಳ ಸಿನಿಮಾಗೂ ಪ್ರೋತ್ಸಾಹ ಕೊಡುತ್ತಾ ಬಂದಿರುವ ರವೀಚಂದ್ರನ್ ಸದ್ಯ ತಮ್ಮ ಸ್ವೀಟ್ ಸಂಸಾರದೊಟ್ಟಿಗೆ ಖುಷಿ ಖುಷಿಯಾಗಿದ್ದಾರೆ. ಅಂದಹಾಗೇ ರವೀಚಂದ್ರನ್ ಅವರು ಪತ್ನಿ ಸುಮತಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದಲ್ಲದೇ ಪತ್ನಿಯ ಬಗ್ಗೆ ಅಷ್ಟೇನು ಗುಟ್ಟು ಬಿಟ್ಟುಕೊಡದ ರವೀಚಂದ್ರನ್ ಎಂದರೆ ಸುಮತಿಗೆ ತುಂಬಾ ಅಚ್ಚುಮೆಚ್ಚಂತೆ. ಒಟ್ಟಾರೆ ರವೀಚಂದ್ರನ್ ಹಿಟ್ ಸಿನಿಮಾಗಳನ್ನು ಕೊಡುತ್ತಾ, ಅನೇಕ ಪರಭಾಷಿಗ ನಾಯಕಿಯರನ್ನು ಪರಿಚಯಿಸಿ ಅಭಿಮಾನಿಗಳನ್ನು ಮನರಂಜಿಸುತ್ತಾ ಬಂದಿದ್ದಾರೆ. ಇವರ ಖುಷಿ ಮತ್ತಷ್ಟು ಹೆಚ್ಚಾಗಲೀ, ಇವರ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ.
Comments