ವ್ಯಾಲೆಂಟೇನ್ಸ್ ಡೇ ನಟಿ ಲಿಪ್'ಲಾಕ್ : ವಿಡಿಯೋ ವೈರಲ್...!!

ಇಂದು ಪ್ರೇಮಿಗಳ ದಿನಾಚರಣೆ, ಎಲ್ಲೆಡೆ ಪ್ರೇಮ ಪಕ್ಷಿಗಳ ಹಾರಾಟ ನಡೆಯುತ್ತಿದೆ. ಅನೇಕರು ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಟುಡೇ ವ್ಯಾಲೆಂಟೇನ್ಸ್ ಡೇ ಸ್ಪೆಷಲ್, ಇದು ಸಿನಿಮಾ ಫೀಲ್ಡ್’ಗೇನೂ ಹೊರತಾಗಿಲ್ಲ. ಅದರಲ್ಲೂ ಬಿ ಟೌನ್’ನಲ್ಲಿ ವಿಶೇಷವಾಗಿ ಆಚರಿಸುತ್ತಿದ್ದಾರೆ. ಅಂದಹಾಗೇ ಅನೇಕ ಸ್ಟಾರ್-ನಟ-ನಟಿಯರು ಪ್ರೇಮಿಗಳ ದಿನಾಚರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡಿದ್ದಾರೆ. ವ್ಯಾಲೆಂಟೇನ್ಸ್ ದಿನದಲ್ಲಿ ಅದೆಷ್ಟು ಯುವಕರು-ಯುವತಿಯರು ಪ್ರೇಮ ನಿವೇದಿನೆ ಮಾಡಿಕೊಳ್ಳುವ ದಿನ ಇದು. ಇದೇ ದಿನದಂದು ಬಾಲಿವುಡ್ ನ ಖ್ಯಾತ ನಟಿಯೊಬ್ಬರು ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್ ನಲ್ಲಿ ತಮ್ಮ ಪಪತಿಯೊಟ್ಟಿಗೆ ಲಿಪ್ಲಾಕ್ ಮಾಡಿರುವ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.
ಅಂದಹಾಗೇ ವ್ಯಾಲೆಂಟೇನ್ಸ್ ಡೇ ಪ್ರಯುಕ್ತ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ ನ ಬ್ಲ್ಯಾಕ್ ಬ್ಯೂಟಿ ಬಿಪಾಷಾ ಬಸು ಲಿಪ್ ಲಾಕ್ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.ಬಿಪಾಷಾ ಬಸು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಟ್ಟಿಗೆ ವಿಡಿಯೋ ವನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಪತಿ ಕರಣ್ ಗೆ ಮುತ್ತಿಡುತ್ತಿದ್ದಾಳೆ ಬಿಪಾಷಾ. ವಿಡಿಯೋ ಜೊತೆ ರೋಮ್ಯಾಂಟಿಕ್ ಶೀರ್ಷಿಕೆ ಹಾಕಿದ್ದಾಳೆ ಬಿಪಾಷಾ. ಅಂದಹಾಗೇ ರೊಮ್ಯಾಂಟಿಕ್ ಮೂಡ್ ನಲ್ಲಿಯೇ ಈ ವಿಡೀಯೋವನ್ನು ಅಪ್ ಲೋಡ್ ಮಾಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಿಸ್ಸಿಂಗ್ ವಿಡಿಯೋ ಹರಿದಾಡುತ್ತಿದ್ದು ಬಿಪಾಸಾಗೆ ಕಮೆಂಟ್ಸ್ ಗಳ ಸುರಿಮಳೆಯೇ ಬರುತ್ತಿದೆ.ಬಿಪಾಷಾ ವಿಡಿಯೋಕ್ಕೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಬಿಪಾಷಾ-ಕರಣ್ ಮದುವೆಯಾಗಿ ಎರಡು ವರ್ಷ ಕಳೆದಿದೆ. ಮದುವೆಗಿಂತ ಮೊದಲು ಕರಣ್, ಬಿಪಾಷಾ ಜೊತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ. ಈಗ ಇಬ್ಬರೂ ಬಾಲಿವುಡ್ನಿಂದ ಸದ್ಯ ದೂರವಿದ್ದಾರೆ.
Comments