ಇನ್ಮುಂದೆ ಕರ್ನಾಟಕದ ಕ್ರಶ್ ರಶ್ಮಿಕಾ ಅಲ್ವಂತೆ…!! ಹಾಗಾದ್ರೆ ಮತ್ಯಾರು..?

ಸ್ಯಾಂಡಲ್ ವುಡ್ ನಲ್ಲಿ ಇತ್ತಿಚಿಗೆ ಒಳ್ಳೊಳ್ಳೆ ನಟಿ ಮಣಿಯರು ಎಂಟ್ರಿ ಕೊಡುತ್ತಿದ್ದಾರೆ.. ಪರಭಾಷೆಯ ನಟಿ ಮಣಿಯರನ್ನು ಕರೆತರುತ್ತಿದ್ದ ಸ್ಯಾಂಡಲ್ವುಡ್ ಇದೀಗ ನಮ್ಮ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದೆ.. ಸಿಕ್ಕಿರುವ ಅವಕಾಶಗಳನ್ನು ನಮ್ಮ ಕನ್ನಡತಿಯರು ಸುಮ್ನೆ ಬಿಡ್ತಾರ.. ಫಸ್ಟ್ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ ತಕ್ಷಣ ತಮ್ಮ ಟ್ಯಾಲೆಂಟ್ ಏನು ಅನ್ನೋದನ್ನ ಪ್ರೂವ್ ಮಾಡಿಬಿಡುತ್ತಾರೆ..ಅವರ ಸಾಲಿಗೆ ಸೇರುವ ನಟಿ ಯಾರ್ ಗೊತ್ತಾ..? ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನ ಪ್ರವೆಶಿಸಿರುವ ಬಹುಬಾಷ ನಟಿ ಅನುಪಮಾ ಪರಮೇಶ್ವರನ್.
ಕನ್ನಡ ಸಿನಿ ರಸಿಕರನ್ನ ರಂಜಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ,ಸದ್ಯ ಇದೀಗ ಅನುಪಮಾ ಕರ್ನಾಟಕದ ಕ್ರಶ್ ಅಗಿದ್ದಾರೆ. ನಟಸಾರ್ವಭೌಮ ಸಿನಿಮಾದಲ್ಲಿನ ಅವ್ರ ನಟನೆ ಪ್ರೇಕ್ಷಕರಿಗೆ ಹಿಡಿಸಿದೆ ಹಾಗಾಗಿಯೆ ಪುನೀತ್ ಅವರ ಮುಂದಿನ ಸಿನಿಮಾ ‘ಯುವರತ್ನ’ ಸಿನಿಮಾದಲ್ಲಿಯೂ ಇವರನ್ನೆ ನಾಯಕಿಯಾಗಿ ಆಯ್ಕೆ ಮಾಡಿ ಎಂದು ಅಭಿಮಾನಿಗಳು ಒತ್ತಾಯಮಾಡಿದ್ದಾರೆ. ಅನುಪಮಾ ಮೂಲತಹ ಕೇರಳ ರಾಜ್ಯದವರಾಗಿದ್ದಾರೆ,ಹುಟ್ಟಿದ್ದು ಕೇರಳದ ಇರಿಂಜಾಲಕುಡದಲ್ಲಿ,ಡಿಗ್ರಿ ಮಾಡುತ್ತಿರುವಾಗಲೇ ಸಿನಿಮಾದಲ್ಲಿ ಅವಕಾಶಗಳು ಅವರನ್ನ ಹುಡುಕಿಕೊಂಡು ಬಂದವು ,ಅದಕ್ಕಾಗಿ ಅವರು ಒದನ್ನು ಅರ್ಧದಲ್ಲೆ ನಿಲ್ಲಿಸಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ರು… ಈಗ ಕನ್ನಡ ಸಿನಿ ರಸಿಕರ ಅಚ್ಚುಮೆಚ್ಚಿನ ನಾಯಕಿಯಾಗಿ ಬಿಟ್ಟಿದ್ದಾರೆ.
Comments