ಬೆಳದಿರುವ ಪೈರಲ್ಲೂ ಮೂಡಿಬಂದ ರೆಬಲ್ ಸ್ಟಾರ್..!! ಅಭಿಮಾನಿಯ ಅಭಿಮಾನಕ್ಕೆ ಸುಮಲತಾ ಹೇಳಿದ್ದೇನು..?
ಮಂಡ್ಯದ ಜನತೆಗೆ ಅಂಬರೀಶ್ ಎಂದರೆ ಅದೆಷ್ಟು ಇಷ್ಟವೋ.. ಅವರ ಗತ್ತು ಧ್ವನಿಯಲ್ಲಿ ಒಮ್ಮೆ ಹೋಯ್ ಅಂದರೆ ಸಾಕು ಗದ್ದಲದ ಜಾಗ ಕೂಡ ಪ್ರಶಾಂತವಾಗಿ ಬಿಡುತ್ತಿತ್ತು.. ಅವರ ಧ್ವನಿ ಮಾತ್ರ ಗಡಸು ಆದರೆ ಅವರ ಮನಸ್ಉ ಮಾತ್ರ ಹೂವಿನಂತದ್ದು ಎಂಬುದು ಅವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು.. ಅವರು ಕೊನೆಯುಸಿರೆಳೆದಾಗ ಮಂಡ್ಯ ಜನತೆ ಬಿಕ್ಕಿ ಬಿಕ್ಕಿ ಅತ್ತಿದ್ದಂತು ಸುಳ್ಳಲ್ಲ… ದಿವಂಗತ ಹಿರಿಯ ನಟ ಅಂಬರೀಶ್ ಇರುವವರೆಗೂ ಆರಾಧಿಸಿ ವಿವಿಧ ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದ ಮಂಡ್ಯ ಜಿಲ್ಲೆಯ ಜನ ಅವರು ಇಹಲೋಕ ತ್ಯಜಿಸಿದ ಮೇಲೂ ಕೂಡ ಅಷ್ಟೇ ಅಭಿಮಾನವನ್ನ ತೋರಿಸಿದ್ದಾರೆ.. ಮಂಡ್ಯ ತಾಲೂಕಿನ ಮತ್ತಹಳ್ಳಿ ಯುವ ರೈತನೊಬ್ಬ ತಾನು ನಾಟಿ ಮಾಡಲು ಬಿತ್ತನೇ ಹಾಕಲಾಗಿರುವ ಭತ್ತದ ಪೈರಿನಲ್ಲೇ ಮತ್ತೆ ಹುಟ್ಟಿ ಬಾ ಅಂಬರೀಶಣ್ಣ ಎಂದು ಬರೆಯುವ ಮೂಲಕ ಅಂಬಿಯ ಅಭಿಮಾನ ಮೆರೆದಿದ್ದಾರೆ.. ಅಂಬಿಯನ್ನು ಪದೇ ಪದೇ ನೆನಪು ಮಾಡುತ್ತಿದ್ದಾರೆ ಮಂಡ್ಯ ಜನ..
ಈತ ಒಂದು ಎಕರೆಯಲ್ಲಿ ಭತ್ತದ ಪೈರಿನ ಬಿತ್ತನೆ ಮಾಡಲಾಗಿದೆ. ಚಿಕ್ಕಂದಿನಿಂದಲೂ ಅಂಬರೀಶ್ ಅವರ ಕಟ್ಟ ಅಭಿಮಾನಿಯಾಗಿದ್ದ ಹರ್ಷಿತ್, ಅಂಬರೀಶ್ ಅವರು ನಿಧನ ಹೊಂದಿದ್ದ ಸಮಯದಲ್ಲಿ ಸಾಕಷ್ಟು ನೊಂದಿದ್ದರು. ಅಣ್ಣ ನಮ್ಮನ್ನ ಬಿಟ್ಟು ಹೋದರಲ್ಲ ಎಂದು ಕಣ್ಣೀರು ಸುರಿಸಿದ್ದರು. ಹೀಗಾಗಿಯೇ ಅವರನ್ನ ಮರೆಯಲಾಗದೆ ಅವರ ಮೇಲಿನ ಅಭಿಮಾನವನ್ನ ವಿಭಿನ್ನವಾಗಿ ತೋರಿಸಬೇಕೆಂದುಕೊಂಡಿದ್ದ ಹರ್ಷಿತ್ ಮತ್ತು ಅವರ ಸಹೋದರರು ಕಳೆದ 20 ದಿನದ ಹಿಂದೆ 1 ಎಕರೆ ಗದ್ದೆಯನ್ನ ಭತ್ತ ನಾಟಿ ಮಾಡುವ ಉದ್ದೇಶದಿಂದ ಪೈರನ್ನ ಬಿತ್ತನೆ ಹಾಕಿದ್ದಾರೆ. ಹೀಗೆ 6 ಕೆಜಿ ಭತ್ತ ತಂದು ಗದ್ದೆಯನ್ನ ಹೃದಯಾಕಾರದಲ್ಲಿ ಸಿದ್ಧಗೊಳಿಸಿ ಮತ್ತೆ ಹುಟ್ಟಿ ಬಾ ಅಂಬರೀಶಣ್ಣ ಎಂದು ಬರೆದಿದ್ದಾರೆ. ಅಂಬಿಯ ಅಭಿಮಾನಕ್ಕೆ ಇದೊಂದು ಚಿಕ್ಕ ನಿದರ್ಶನವಷ್ಟೆ..
ಭತ್ತದ ಪೈರು ಬಿತ್ತನೆ ಹಾಕಿ ಈಗ 20ದಿನ ಕಳೆದಿರುವುದು ಸೊಗಸಾಗಿ ಬೆಳೆದು ನಿಂತಿದೆ. ಗದ್ದೆಯ ನಡುವೆ ಹಸಿರಿನಿಂದ ಬರೆಯಲಾಗಿರುವ ಮತ್ತೆ ಹುಟ್ಟಿ ಬಾ ಅಂಬರೀಶಣ್ಣ ಎಂಬ ಬರಹ ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ. ಹೀಗಾಗಿಯೇ ಹರ್ಷಿತ್ ಗ್ರಾಮದವರು ಅಷ್ಟೆ ಅಲ್ಲದೆ ಸುತ್ತಮುತ್ತಲ ಹಳ್ಳಿಗಳಿಂದಲೂ ಜನರು ಬಂದು ನೋಡಿ ಹರ್ಷಿತ್ ಅವರ ಅಭಿಮಾನವನ್ನ ಹೊಗಳುತ್ತಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಂಬಿ ಪತ್ನಿ ಸುಮಲತಾ ಅವರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಹರ್ಷಿತ್ ಅವರ ಜಮೀನಿನ ಬಳಿಗೆ ಆಗಮಿಸಿ ನಾನು ಹರ್ಷಿತ್ ಮತ್ತು ಅವರ ಸಹೋದರನ್ನ ಅಭಿನಂದಿಸಿದ್ದೇವೆ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದ್ದಾರೆ.ಒಟ್ಟಾರೆ ಅಂಬಿ ಇನ್ನೂ ನಮ್ಮೊಂದಿಗೆ ಜೀವಂತವಾಗಿ ಇದ್ದಾರೆ ಅನ್ನೋದನ್ನ ಇಂತಹ ಘಟನೆಗಳು ನೆನಪು ಮಾಡುತ್ತವೆ.
Comments